ದಾವಣಗೆರೆ (Davanagere); ನಮ್ಮ ದೇಶದಲ್ಲಿ ಇರುವವರೆಲ್ಲರೂ ಕಾನೂನಿನ ಬಗ್ಗೆ ತಿಳಿದಿರಬೇಕು ಎಂದು ಮಕ್ಕಳ ಸ್ನೇಹಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀರಾಮ್ ಹೆಗಡೆ ತಿಳಿಸಿದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಹಾಗೂ ಶಾಲಾ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ರಾಷ್ಟ್ರೋತ್ಥನ ವಿಶ್ವವಿದ್ಯಾಲಯದಲ್ಲಿ ಸಂವಿಧಾನ ದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ. ಮಕ್ಕಳಿಗಾಗಿ ಕಾನೂನಿನ ಅರಿವು ನೆರವುಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಮುಖವಾಗಿ ದಿನನಿತ್ಯದ ವ್ಯಾವಹಾರದ ಕಾನೂನಿನ ಬಗ್ಗೆ ತಿಳಿದಿರಬೇಕು. ಹಾಗೂ ಕಾನೂನಿನ ನೆರವು ಪ್ರತಿಯೊಬ್ಬ ನಾಗರೀಕರಿಗೂ ಸಿಗುವಂಥದ್ದು ಎಂದು ತಿಳಿಸಿದರು.
1949 ರಲ್ಲಿ ಸಂವಿಧಾನವನ್ನು ಅಳವಡಿಸಿಕೊಂಡು, ಹಕ್ಕು ಮತ್ತು ಕರ್ತವ್ಯಗಳ ಪಾಲನೆಯ ಕುರಿತಾಗಿ ಮಕ್ಕಳಿಗೆ ತಿಳಿಸಿಕೊಟ್ಟರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮಹಾವೀರ್ ಮ. ಕರೆಣ್ಣ ಮಾತನಾಡಿ, ಬಾಲ ನ್ಯಾಯಾಂಗ ಮಂಡಳಿಯ ಅಡಿಯಲ್ಲಿ, ಅನಾಥ ಮಕ್ಕಳಿಗೆ ರಕ್ಷಣೆ ನೀಡಲಾಗುವುದರೊಂದಿಗೆ ಶಿಕ್ಷಣವನ್ನು ಒದಗಿಸಿ ಕೊಡಲಾಗುವುದು ಎಂದು ತಿಳಿಸಿದರು. ಸಂವಿಧಾನವು ದೇಶವನ್ನು ಹೇಗೆ ಮುನ್ನಡೆಸಬೇಕು ಎಂದು ತಿಳಿಸುತ್ತದೆ ಎಂದು ತಿಳಿಸಿದರು.
ಮಕ್ಕಳಿಗೆ ಇರುವ ಕಾನೂನು ವಿಷಯಗಳ ಕುರಿತಾಗಿ ಮಾಹಿತಿ ನೀಡುವುದರ ಜೊತೆಗೆ ಮಹಿಳೆಯರಿಗೆ ಮತ್ತು ಮಕ್ಕಳಿಗಾಗಿ ಇರುವ ವಿಶೇಷ ಕಾನೂನುಗಳ ಕುರಿತಾಗಿ ತಿಳಿಸಿದರು.
ಮೊಬೈಲ್ನಿಂದ ಆಗುತ್ತಿರುವ ದುಷ್ಪ ಪರಿಣಾಮಗಳು. ಶಾಲಾ ಮಕ್ಕಳು ಮತ್ತು ಕಾಲೇಜಿನ ಹುಡುಗಿಯರ ಮೇಲೆ ಲೈಂಗಿಕ ಕಿರುಕುಳಗಳ ಕುರಿತು ತಿಳಿಸಿ ಮಕ್ಕಳ ಸಹಾಯವಾಣಿ 1098 ರ ಕುರಿತು ಮಾಹಿತಿಯನ್ನು ತಿಳಿಸಿದರು.
14 ವರ್ಷದೊಳಗಿನ ಮಕ್ಕಳು ಯಾವುದೇ ಅಪಾಯಕಾರಿ ಕೆಲಸಗಳನ್ನು ಮಾಡುವಂತಿಲ್ಲ ಎಂದು ತಿಳಿಸಿದರು.
ರಾಷ್ಟ್ರೋತ್ಥನ ವಿದ್ಯಾಲಯ ಪ್ರಾಂಶುಪಾಲರಾದ ಸುಗುಣಾ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೋತ್ಥಾನ ವಿದ್ಯಾಲಯ ಸಹ ಶಿಕ್ಷಕಿ ಗಗನಶ್ರೀ ಎಚ್.ವಿ, ಸಿ ಆರ್ ಪಿ ಬಿ ಕ್ಯಾಂಪ್ 2 ದಾವಣಗೆರೆ ಮಂಜಾ ನಾಯ್ಕ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.
Read also : ಆಟೋದಲ್ಲಿ ಕಳೆದುಕೊಂಡಿದ್ದ 1.50 ಲಕ್ಷ ಮೌಲ್ಯದ ಸ್ವತ್ತು ವಾರಸುದಾರರಿಗೆ ಒಪ್ಪಿಸಿದ ಪೊಲೀಸರು