Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಗುರುಕಾರುಣ್ಯ ಒಂದಿದ್ದರೆ ಸಾಕು ಜೀವನ ಸಾರ್ಥಕ : ಗಾಯಕಿ ಸಂವೇದಿತಾ ಸುಭಾಷ್
ತಾಜಾ ಸುದ್ದಿ

ಗುರುಕಾರುಣ್ಯ ಒಂದಿದ್ದರೆ ಸಾಕು ಜೀವನ ಸಾರ್ಥಕ : ಗಾಯಕಿ ಸಂವೇದಿತಾ ಸುಭಾಷ್

Dinamaana Kannada News
Last updated: July 10, 2025 6:00 am
Dinamaana Kannada News
Share
Davanagere
SHARE

ದಾವಣಗೆರೆ : ಗುರು ಮಹಿಮೆ ಅಪಾರವಾದದ್ದು, ಕಲಿಯುಗದಲ್ಲಿ ಭಗವಂತನನ್ನು ಸಾಕ್ಷಾತ್ಕರಿಸಿಕೊಳ್ಳಲು ಭಕ್ತಿ ಮಾರ್ಗವು ಸುಲಭವಾದ ದಾರಿ ಅರ್ಥಾತ್ ನಮಗೆ ಸದಾ ದಾರಿ ದೀಪವಾಗಿ ಸರಿದಾರಿಗೆ ಕೊಂಡೊಯ್ಯುವ ಗುರುವಿನ ಮಾರ್ಗದರ್ಶನ ಅತ್ಯಗತ್ಯವಾಗಿದೆ. ಆದ್ದರಿಂದ ನಾವು ಸದಾ ಗುರುಭಕ್ತಿಯನ್ನು ಹೊಂದಬೇಕು. ನಮಗೆ ಗುರುಕಾರುಣ್ಯವು ಒಂದಿದ್ದರೆ ಸಾಕು ನಮ್ಮ ಜೀವನ ಸಾರ್ಥಕವಾಗುವುದು ಎಂದು ಕುಶಾಲನಗರದ ಉದಯೋನ್ಮುಖ ಹಿನ್ನೆಲೆ ಗಾಯಕಿ, ರಂಗಕರ್ಮಿ, ಯೋಗ ಮತ್ತು ಭರತನಾಟ್ಯ ಕಲಾವಿದೆ ಕು|| ಸಂವೇದಿತಾ ಸುಭಾಷ್ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು.

ನಗರದ ದೇವರಾಜ್ ಅರಸ್ ಲೇಔಟ್ ‘ಸಿ’ ಬ್ಲಾಕ್‍ನಲ್ಲಿರುವ ಆದರ್ಶ ಯೋಗ ಪ್ರತಿಷ್ಠಾನ (ರಿ), ದಾವಣಗೆರೆ ಶ್ರೀ ಮಹಮ್ಮಾಯಿ ವಿಶ್ವಯೋಗ ಮಂದಿರ ಹಾಗೂ ಯೋಗ ಚಿಕಿತ್ಸಾ ಕೇಂದ್ರ ದಾವಣಗೆರೆ ಇಲ್ಲಿ ಗುರುಪೂರ್ಣಿಮಾ ಪೂಜಾ ಮಹೋತ್ಸವ ನಿಮಿತ್ತ ಆಯೋಜಿಸಲಾಗಿದ್ದ ‘ಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.

ಗುರು ಎಂದರೆ ನಮ್ಮೊಳಗಿರುವ ಕತ್ತಲೆಯನ್ನು ದೂರಗೊಳಿಸಿ ಹೊಸ ಬೆಳಕಿನೊಂದಿಗೆ ಚೈತನ್ಯವನ್ನು ಕರುಣಿಸುವ ಕರುಣಾಸಾಗರ. ನಾವು ಭಕ್ತಿ, ಶ್ರದ್ಧೆ, ನಂಬಿಕೆ, ಶಿಸ್ತು ಇವೆಲ್ಲವನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಗುರುತೋರಿದ ಸನ್ಮಾರ್ಗದಲ್ಲಿ ನಡೆದರೆ ನಮಗೆ ಖಂಡಿತವಾಗಿಯೂ ಯಶಸ್ಸು ಸಿಗುವುದು. ಇದು ಗುರುಮಹಿಮೆಯ ಶಕ್ತಿ ಎಂದು ಗುರುಪೂರ್ಣಿಮಾದ ವಿಶೇಷತೆಯ ಬಗ್ಗೆ ತಿಳಿಸಿದರು.

Read also : ಭದ್ರಾ ಜಲಾಶಯದಲ್ಲಿ 173 ಅಡಿ ನೀರು : ಭರ್ತಿಗೆ ಕೆಲವೇ ದಿನ ಬಾಕಿ

ಪ್ರಾರಂಭದಲ್ಲಿ ಅಗ್ನಿಹೋತ್ರ ಹೋಮವನ್ನು ಶಾಸ್ತ್ರೋಕ್ತವಾಗಿ ಮಂತ್ರ ಪಠಣಗಳೊಂದಿಗೆ ಸಾಮೂಹಿಕವಾಗಿ ಮಾಡಲಾಯಿತು. ಹಿರಿಯ ಪುರೋಹಿತರಾದ ಪೂಜ್ಯ ಶ್ರೀ ಗುರುನಾಥ ಭಟ್ ಇವರ ಮಾರ್ಗದರ್ಶನದೊಂದಿಗೆ ಗುರು ಪಾದುಕಾಪೂಜೆಯನ್ನು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ನೆರವೇರಿಸಲಾಯಿತು.

ನಂತರ ಉದಯೋನ್ಮುಖ ಹಿನ್ನೆಲೆ ಗಾಯಕಿ ಕು|| ಸಂವೇದಿತಾ ಸುಭಾಷ್ ಇವರಿಂದ ‘ಗುರುಭಜನೆ-ಭಕ್ತಿ ಸುಧೆ’ ಸಂಗೀತ ಕಾರ್ಯಕ್ರಮ ನಡೆಯಿತು. ದಾವಣಗೆರೆ ವಿ.ವಿ. ಸ್ನಾತಕೋತ್ತರ ಯೋಗ ವಿಜ್ಞಾನ ವಿಭಾಗದ ವಿದ್ಯಾರ್ಥಿ ರಾಹುಲ್ ವಿ.ಕೆ. ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ಶ್ರೀಮತಿ ಜ್ಯೋತಿಲಕ್ಷ್ಮೀ ವಾಸುದೇವ್ ಮತ್ತು ಸಂಧ್ಯಾ ಮಂಗಳೂರು ಇನ್ನಿತರರು ಸಹಕರಿಸಿದ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕರಾದ ಮಹಂತೇಶ್, ಚಂದ್ರ ಎಸ್., ಜಿಲ್ಲಾಧಿಕಾರಿ ಕಛೇರಿಯ ಉದ್ಯೋಗಿ ಸಂತೋಷ್ ಹೆಚ್., ಪ್ರತಿಷ್ಠಾನದ ಯೋಗ ಸಾಧಕರು ಇನ್ನಿತರರು ಭಾಗವಹಿಸಿದ್ದ ಕಾರ್ಯಕ್ರಮದ ಕೊನೆಯಲ್ಲಿ ಮಹಾಮಂಗಳಾರತಿ ನಂತರ ತೀರ್ಥ ಪ್ರಸಾದ ವಿನಿಯೋಗದೊಂದಿಗೆ ಗುರುಪೂರ್ಣಿಮಾ ಮಹೋತ್ಸವ ಸಂಪನ್ನಗೊಂಡಿತು.

TAGGED:Davanagere NewsDinamana.comದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article bhadra-dam ಭದ್ರಾ ಜಲಾಶಯದಲ್ಲಿ 173 ಅಡಿ ನೀರು : ಭರ್ತಿಗೆ ಕೆಲವೇ ದಿನ ಬಾಕಿ
Next Article Davangere ದಾವಣಗೆರೆ | ಬಾಲ್ಯವಿವಾಹ ಪ್ರಕರಣ ಶೂನ್ಯಕ್ಕೆ ತರುವಲ್ಲಿ ಪ್ರತಿಯೊಬ್ಬರೂ ಶ್ರಮವಹಿಸಿ : ಸಿಇಒ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

ದೋಸಾ ಕಾವಲಿಯಲ್ಲಿ ಮೂಡಿದ ಮತದಾನ ಜಾಗೃತಿ

ದಾವಣಗೆರೆ ;   ದಾವಣಗೆರೆ ಬೆಣ್ಣೆ ನಗರಿ, ಬೆಣ್ಣೆ ದೋಸೆ ಎಂದೇ ಬ್ರಾಂಡ್ ಪಡೆದುಕೊಂಡಿದೆ. ದೋಸೆ ಕಾವಲಿಯಲ್ಲಿ ದೋಸೆಯ ಹಿಟ್ಟನ್ನು ಬಳಸಿ…

By Dinamaana Kannada News

DAVANAGERE NEWS : “ಒಳಮೀಸಲಾತಿ” ಜಾರಿಗೆ ಮಾದಾರ ಚನ್ನಯ್ಯ ಸ್ವಾಮೀಜಿ ಒತ್ತಾಯ

ದಾವಣಗೆರೆ  (DAVANAGERE) :  ಸುಪ್ರೀಂ ಕೋರ್ಟ್ ಆದೇಶದಂತೆ ರಾಜ್ಯ ಸರಕಾರ ಕೂಡಲೇ ಒಳಮೀಸಲಾತಿ ಜಾರಿಗೆ ತರಬೇಕು ಎಂದು ಚಿತ್ರದುರ್ಗ ಗುರುಪೀಠದ…

By Dinamaana Kannada News

ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಕಾಲದ ಶಿಲಾಶಾಸನ ಪತ್ತೆ

ದಾವಣಗೆರೆ (Davanagere ): ನ್ಯಾಮತಿ ತಾಲ್ಲೂಕಿನ ಮಾದಾಪುರ ಕೆರೆಯಲ್ಲಿ ಬಾದಾಮಿ ಚಾಲುಕ್ಯರ ಒಂದನೇ ವಿಕ್ರಮಾದಿತ್ಯನ ಕಾಲದ ಶಿಲಾಶಾಸನ ಪತ್ತೆಯಾಗಿದೆ ಎಂದು…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dr. B Shivakumar
ಆರೋಗ್ಯ

ಜಿಗಣೆ ಚಿಕಿತ್ಸೆಅದರ ಔಷಧೀಯ ಮಹತ್ವ: ಡಾ.ಬಿ.ಶಿವಕುಮಾರ್

By ಡಾ.ಬಿ. ಶಿವಕುಮಾರ್
Mallikarjuna Kadakola
ತಾಜಾ ಸುದ್ದಿ

ಕಡಕೋಳ ನೆಲದ ನೆನಪುಗಳು ಕೃತಿಗೆ ರಾಷ್ಟ್ರೀಯ ಪುರಸ್ಕಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?