ದಾವಣಗೆರೆ: ( Lineman dead due to electric shock) ತಾಲ್ಲೂಕಿನ ಮಾಯಕೊಂಡ ಪೊಲೀಸ್ ಠಾಣಾ ವ್ಯಾಪ್ತಿಯ ಮಳಲಕೆರೆ ಗ್ರಾಮದಲ್ಲಿ ವಿದ್ಯುತ್ ಶಾಂಕ್’ನಿಂದ ಲೈನ್ ಮ್ಯಾನ್ ಒಬ್ಬರು ಮೃತಮಟ್ಟಿರುವ ಘಟನೆ ಗುರುವಾರ ಬೆಳಗ್ಗೆ 11 ಗಂಟೆಗೆ ಸುಮಾರಿಗೆ ನಡೆದಿದೆ. ಮುತ್ತುರಾಜ್ ಎಂಬ ಲೈನ್ ಮ್ಯಾನ್ ಗುರುವಾರ ಬೆಳಗ್ಗೆ ಟಿಸಿ ರಿಪೇರಿ ಮಾಡುವಾಗ ವಿದ್ಯುತ್ ಶಾಕ್ ಹೊಡೆದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದ್ದು, ಗಂಟೆ ಗಂಟೆಲೆ ಮೃತ ದೇಹ ಟಿಸಿ ಮೇಲೆ ನೇತಾಡಿದ್ದು, ಗ್ರಾಮಸ್ಥರು ಮುಗಿವಿದ್ದು ವೀಕ್ಷಿಸುತ್ತಿದ್ದಾರೆ. ಇನ್ನು ರಿಪೇರಿ ಮಾಡುವ ವಿದ್ಯುತ್ ಬಂದ್ ಮಾಡಬೇಕಿತ್ತು. ಆದರೆ ಈ ಅವಘಡಕ್ಕೆ ಕಾರಣ ಏನು ಸೇರಿದಂತೆ ಘಟನೆ ಸಂಬಂಧ ಮಾಹಿತಿಗಳು ಲಭ್ಯವಾಗಬೇಕಿದೆ.
English Summary: Lineman dead due to electric shock in Malalakere village: Body hanging from TC