ದಾವಣಗೆರೆ : ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋಟ್‌ನಿಂದ ವಾರೆಂಟ್ ಮಾಡಿಸಿ ಜಾರಿ ಮಾಡಲು ಪೋನ್ ಪೇ ಮೂಲಕ ಹಣ ಸ್ವೀಕರಿಸಿದ ಪೊಲೀಸ್ ಪೇದೆಯೊಬ್ಬರನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇಲ್ಲಿನ ಸರಸ್ವತಿ ನಗರದ ನಿವೃತ್ತ ಶಿಕ್ಷಕ ಲಕ್ಕಪ್ಪ ಎಂಬುವವರು ಸೈಯದ್ ತಹಿರುದ್ದೀನ್ ವಿರುದ್ದ ಸಿವಿಲ್ ನ್ಯಾಯಾಲಯದಲ್ಲಿ ಚೆಕ್ ಬೌನ್ಸ್ ಪ್ರಕರಣ ದಾಖಲಿಸಿದ್ದರು. ಈ ಸಂಬಂಧ ಕೋಟ್ ನಿಂದ ವಾರೆಂಟ್ ಮಾಡಿಸಿ ಜಾರಿ ಮಾಡಲು ಪೊಲೀಸ್ ಹನುಮಂತಪ್ಪ ಅವರು 2 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು.
ಲಕ್ಕಪ್ಪ ಅವರು ಈ ಸಂಬಂಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದರು.
ಮೇ 31 ರಂದು ಆರೋಪಿ ಪೊಲೀಸ್ ಹನುಮಂತಪ್ಪ ಅವರು 2 ಸಾವಿರ ಲಂಚವನ್ನು ಪೋನ್ ಪೇ ಮಾಡಿಸಿಕೊಂಡು ಸ್ವೀಕರಿಸಿದ ವೇಳೆ ಲೋಕಾಯುಕ್ತ ಪೊಲೀಸರ ಟ್ರ್ಯಾಪ್ ಕಾರ್ಯಚರಣೆ ಯಶಸ್ವಿಯಾಗಿದೆ. ಆರೋಪಿ ಹನುಮಂತಪ್ಪ ವಶಕ್ಕೆ ಪಡೆದು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಲೋಕಾಯುಕ್ತ ಅಧೀಕ್ಷಕ ಎಂ.ಎಸ್.ಕೌಲಾಪೂರೆ, ಲೋಕಾಯುಕ್ತ ಉಪಾಧೀಕ್ಷಕರಾದ ಕಲಾವತಿ ಮಾರ್ಗದರ್ಶ ನದಲ್ಲಿ ಲೋಕಾಯುಕ್ತ ಪೊಲೀಸ್ ನಿರೀಕ್ಷಕರಾದ ಮಧುಸೂದನ್, ಹೆಚ್.ಎಸ್.ರಾಷ್ಟ್ರಪತಿ ಮತ್ತು ಸಿಹೆಚ್‌ಸಿ ಸಿಬ್ಬಂದಿಗಳಾದ ಆಂಜನೇಯ್, ಸುಂದರೇಶ್, ಆಶಾ ಸಿಪಿಸಿ ಸಿಬ್ಬಂದಿಗಳಾದ ಮಲ್ಲಿಕಾರ್ಜುನ, ಲಿಂಗೇಶ್, ಧನರಾಜ್, ಮಂಜುನಾಥ, ಗಿರೀಶ್, ಬಸವರಾಜ, ಜಂಷಿದಾ ಖಾನಾಂ, ಕೋಟಿನಾಯ್ಕ್, ಬಸವರಾಜ ಇತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.