ಚನ್ನಗಿರಿ (channagere) : ಟಿಸಿ ಅಳವಡಿಸಲು 10 ಸಾವಿರಕ್ಕೆ ಬೇಡಿಕೆಯಿಟ್ಟಿದ್ದ ಬೆಸ್ಕಾಂ ಸಹಾಯಕ ಇಂಜೀನಿಯರ್ ಮೋಹನ ಕುಮಾರ ಶನಿವಾರ ಲೋಕಾಯುಕ್ತ ಪೊಲೀಸರ ಬಲೆ ಬಿದ್ದಿದ್ದಾರೆ.
ಚನ್ನಗಿರಿ ತಾಲೂಕಿನ ಸಂತೇಬೆನ್ನೂರು ಬೆಸ್ಕಾಂ ಕಚೇರಿಯಲ್ಲಿ ಮೋಹನ್ ಕುಮಾರ್ ರೈತರೊಬ್ಬರಿಂದ ಲಂಚ ಪಡೆಯುವಾಗ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಘಟನೆ ವಿವರ : ಚನ್ನಗಿರಿ ತಾಲೂಕಿನ ದೊಡ್ಡಮಲ್ಲಾಪುರ ಗ್ರಾಮದ ರೈತ ಬಿ.ಎಂ ಮಂಜುನಾಥ್ ಎಂಬುವವರು ಚಿಕ್ಕಪ್ಪ ಸೋಮಶೇಖರಪ್ಪ ರವರ ಜಮೀನಿನಲ್ಲಿದ್ದ ಟಿಸಿಯು (ವಿದ್ಯುತ್ ಪರಿವರ್ತಕ) ಕಳೆದ ಒಂದು ವರ್ಷದ ಹಿಂದೆ ಸುಟ್ಟುಹೋಗಿತ್ತು. ಸುಟ್ಟುಹೋಗಿದ್ದ ಟಿಸಿಯನ್ನು ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸಿಕೊಡುವ ಬಗ್ಗೆ ಸಂತೇಬೆನ್ನೂರು (ಸೆಕ್ಷನ್ ಆಫೀಸರ್) ಶಾಖಾಧಿಕಾರಿ ಮೋಹನ್ ಕುಮಾರ್‍ಗೆ ಈ ಹಿಂದೆ ಮನವಿ ಮಾಡಿದ್ದರು.
ಸಂತೇಬೆನ್ನೂರು ಬೆಸ್ಕಾಂ ಶಾಖಾಧಿಕಾರಿ ಮೋಹನ್ ಕುಮಾರ್ ಟಿಸಿ ಬದಲಾಯಿಸಿ ಬೇರೆ ಟಿಸಿಯನ್ನು ಅಳವಡಿಸಿಕೊಡಲು ರೈತ ಮಂಜುನಾಥ್‍ಗೆ ಹತ್ತುಸಾವಿರ ಹಣದ ಬೇಡಿಕೆ ಇಟ್ಟಿದ್ದರು.
Read also : ಒಳ ಮೀಸಲಾತಿ ಅನುಷ್ಠಾನಕ್ಕೆ ಕಾಂಗ್ರೆಸ್ ಸರ್ಕಾರ ನಿರ್ಲಕ್ಷ : ಮಾದಿಗ ಸಂಘಟನೆ ಒಕ್ಕೂಟ ಆಕ್ರೋಶ
ಲೋಕಾಯುಕ್ತ ಎಸ್ಪಿ ಎಂಎಸ್ ಕೌಲಾಪೂರೆ, ಉಪಾಧೀಕ್ಷಕಿ ಕಲಾವತಿ ಮಾರ್ಗದರ್ಶನದಲ್ಲಿ ಪೊಲೀಸ್ ನೀರಿಕ್ಷಕ ಹೆಚ್ ಗುರುಬಸವರಾಜ್ , ಸರಳ ಪಿ ತಂಡವು ಶನಿವಾರ ಬೆಸ್ಕಾಂ ಕಚೇರಿಯಲ್ಲಿ ರೈತನಿಂದ ಹಣ ಸ್ವೀಕರಿಸುವಾಗ ದಾಳಿ ನಡೆಸಿ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.