ದಾವಣಗೆರೆ (Davanagere): ಒಳಮೀಸಲಾತಿ ಜಾರಿಗೆ ನ್ಯಾ.ನಾಗಮೋಹನದಾಸ್ ಅವರು ರಾಜ್ಯದ ಎಲ್ಲಾ ಜಿಲ್ಲೆಗಳ ಅಧಿಕಾರಿಗಳಿಗೆ ಅಂಕಿ-ಅಂಶ ಸಂಗ್ರಹಿಸಿಲು ಕೋರಿರುವುದರಿಂದ ಮಾಹಿತಿ ಸಂಗ್ರಹಿಸಲು ನಿಮ್ಮ ಮನೆಗೆ ಬರುವವರಿಗೆ ಪರಿಶಿಷ್ಠ ಜಾತಿ “ಆದಿಕರ್ನಾಟಕ” ಮತ್ತು ಒಳ ಜಾತಿ “ಮಾದಿಗರು” ಎಂದು ನಮೂದಿಸುವಂತೆ ಮಾದಿಗ ಒಳಮೀಸಲಾತಿ ಹೋರಾಟ ಸಮಿತಿ ಸಮುದಾಯದವರಲ್ಲಿ ಮನವಿ ಮಾಡಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹಿರಿಯ ಹೋರಾಟಗಾರ ಬಿ.ಎಂ.ಹನುಮಂತಪ್ಪ, ಒಳಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಜಾರಿ ಮಾಡಲು ನಿಖರ ಅಂಕಿ-ಅಂಶ ನೀಡುವಂತೆ ನ್ಯಾ.ನಾಗಮೋಹನದಾಸ್ ಅವರನ್ನು ರಾಜ್ಯ ಸರಕಾರ ಕೋರಿದೆ. ಈ ನಿಟ್ಟಿನಲ್ಲಿ ಸರಕಾರದ ಪರವಾಗಿ ನೌಕರರು ಎಲ್ಲಾ ಗ್ರಾಮ, ಪಟ್ಟಣ, ನಗರಗಳಿಗೆ ಭೇಟಿ ನೀಡುತ್ತಾರೆ.
ಅಂತಹ ಸಂದರ್ಭದಲ್ಲಿ ಮಾದಿಗ ಯುವಕರು, ನಿವೃತ್ತ ನೌಕರರು, ವಿದ್ಯಾವಂತರು ತಮ್ಮ ಕಾಲೋನಿಗಳಲ್ಲಿ ಪ್ರತಿ ಮನೆಗೆ ತೆರಳಿ ಇಲ್ಲಿಯ ತನಕ ನೀವು ಪರಿಶಿಷ್ಟ ಜಾತಿಯಲ್ಲಿ ಆದಿಕರ್ನಾಟಕ ಎಂದು ದಾಖಲು ಮಾಡುತ್ತಿದ್ದೀರಿ.ಅದರೆ, ಈಗ ನಮ್ಮ ಜನಸಂಖ್ಯೆಗೆ ಅನುಗುಣವಾಗಿ ಸರಕಾರ ಒಳಮೀಸಲಾತಿ ನೀಡಬೇಕಿದೆ.ಅದಕ್ಕಾಗಿ ನಿಮ್ಮ ಮನೆಗೆ ಭೇಟಿ ನೀಡುವವರಿಗೆ ಸ್ಪಷ್ಟವಾಗಿ ಮಾದಿಗರು ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು.
ಅಂಕಿ-ಅಂಶ ಸಂಗ್ರಹಣೆ ಏಪ್ರಿಲ್ 6 ರ ನಂತರ ಎಲ್ಲಾ ಸರಕಾರಿ ನೌಕರರು ಎಲ್ಲಾ ಕಡೆ ಭೇಟಿ ನೀಡಲಿದ್ದಾರೆ. ಅದ್ದರಿಂದ ಎಚ್ಚರಿಕೆಯಿಂದ ಮಾಹಿತಿ ನೀಡಬೇಕು ಎಂದು ಹೇಳಿದರು.
Read also : ತುಂಗಭದ್ರಾ ನದಿಗೆ ನೀರು : ಅನಧಿಕೃತ ವಿದ್ಯುತ್ ಪಂಪ್ ನಿಷೇಧ
ಈ ವೇಳೆ ಹೆಚ್.ಮಲ್ಲೇಶ್, ನಿವೃತ್ತ ಎಎಸ್ಪಿ ರವಿನಾರಾಯಣ, ಹಲಗೇರಿ ಮಂಜಪ್ಪ, ರಾಮಪ್ಪ ಇತರರು ಇದ್ದರು.