ದಾವಣಗೆರೆ (Davangere district ) : ಒಳ ಮೀಸಲಾತಿ ಜಾರಿ ಮಾಡುವಂತೆ ನೀಡಿರುವ ಆದೇಶ ಹಿನ್ನೆಲೆ ಮಾದಿಗ ಸಮಾಜದಿಂದ ನಗರದ ಅಂಬೇಡ್ಕರ್ ವೃತ್ತದಲ್ಲಿ ಸಿಹಿ ಹಂಚಿ, ಪಟಾಕಿ ಸಿಡಿಸುವ ಮೂಲಕ ವಿಜಯೋತ್ಸವ ಆಚರಿಸಿ. ಒಳಮೀಸಲಾತಿಗಾಗಿ ಹೋರಾಟ ನಡೆಸಿದವರಿಗೆ ಸಮಾಜದವರು ಕೃತಜ್ಞತೆ ಸಲ್ಲಿಸಿದರು.
ಮಾದಿಗ ಸಮಾಜದ ಮುಖಂಡ ಆಲೂರು ನಿಂಗರಾಜ್, ಕರ್ನಾಟಕದಲ್ಲಿ ಮಾದಿಗ ಸಮಾಜಕ್ಕೆ ಉದ್ಯೋಗ ಸಾಮಾಜಿಕ, ಶೈಕ್ಷಣಿಕ ಹಾಗು ಇನ್ನಿತರೆ ಮೀಸಲಾತಿ ಸವಲತ್ತನ್ನು ಜಾತಿ ಜನಸಂಖ್ಯೆಗೆ ಅನುಗುಣವಾಗಿ (ಒಳಮೀಸಲಾತಿ) ಜಾರಿ ಮಾಡುವಂತೆ ಈ ಹಿಂದೆ ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಾಖ್ಯಾತರಾಗಿದ್ದ ಪ್ರೋ. ಬಿ. ಕೃಷ್ಣಪ್ಪನವರು 1996ರಲ್ಲಿ ಪ್ರತ್ಯೇಕ ಮೀಸಲಾತಿಗಾಗಿ ಹೋರಾಟದ ಹಣತೆ ಹಚ್ಚಿದರು ಎಂದು ನೆನಪಿಸಿಕೊಂಡರು.
ನಂತರ 1997ರಲ್ಲಿ ಪ್ರೋ.ಬಿ.ಕೆ. ಕೃಷ್ಣಪ್ಪ ಮೃತರಾದಾಗ ಕರ್ನಾಟಕದಲ್ಲಿದ್ದ ಮಾದಿಗ ಸಂಬಂಧಿತ ಕರ್ನಾಟಕದ ದಲಿತ ಸಂಘಟನೆಗಳು, ಮಾದಿಗ ಸಂಘಟನೆಗಳು, ಅಂಬೇಡ್ಕರ್ ಸಂಘಟನೆಗಳೆಲ್ಲವು ಸೇರಿ ಪ್ರತಿಭಟನೆ, ಧರಣಿ ಅರಬೆತ್ತಲೆ ಜೈಲು ಬೋರೋ ಚಳುವಳಿ ಉಪವಾಸ ಸತ್ಯಗ್ರಹಗಳಾದಂತಹ ಅನೇಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದರಿಂದ ಅಂದಿನ 2004ರಲ್ಲಿ ಮಾನ್ಯ ಮುಖ್ಯಮಂತ್ರಿಗಳಾಗಿದ್ದ ಎಸ್.ಎಂ. ಕೃಷ್ಣರವರು ಒಳ ಮೀಸಲಾತಿಗಾಗಿ ಅಧ್ಯಯನ ನಡೆಸಿ ವರದಿ ಕೊಡುವಂತೆ ನ್ಯಾಯಮೂರ್ತಿ ಎ.ಜೆ. ಸದಾಶಿವರವರನ್ನು ನೇಮಕ ಮಾಡಿತ್ತು. ನಂತರ ಸುಮಾರು ವರ್ಷಗಳ ಅಧ್ಯಯನ ಮಾಡಿ ವರದಿ ತಯಾರಿಸಿದ್ದರೂ ಕೂಡ ಸಾಮಾಜಿಕ ನ್ಯಾಯದ ಮಂಚೂಣಿ ನಾಯಕ ಎಂದು ಬಿಂಬಿಸಿಕೊಂಡಿದ್ದ ಸಿದ್ದರಾಮಯ್ಯನವರು ಸತತ 5 ವರ್ಷ ಪೂರ್ಣಾವಧಿ ಮುಖ್ಯಮಂತ್ರಿಗಳಾಗಿದ್ದರೂ ಕೂಡ ಮಾದಿಗ ಸಮಾಜಕ್ಕೆ ಏನು ಮಾಡಲಿಲ್ಲ ಎಂಬುದು ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.
ಇಂತಹ ಸಂದರ್ಭದಲ್ಲಿ ಸಂಘ ಪರಿವಾರದ ಮಾರ್ಗದರ್ಶನದಂತೆ ಪ್ರಧಾನಿ ನರೇಂದ್ರ ಮೋದಿ, ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್. ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ ಅವರು ಅಧಿಕಾರ ಅವಧಿಯಲ್ಲಿ ಕೇವಲ ಶೇ. 15 ಇದ್ದ ಮೀಸಲಾತಿಯನ್ನು ಶೇ. 17ಕ್ಕೆ ಹೆಚ್ಚಿಸಿದ್ದಲ್ಲದೇ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಜಾತಿಯಲ್ಲಿ ಬರುವ 101 ಜಾತಿಗಳಿಗೂ ಸಮನಾಗಿ ಅಂದರೆ ಮಾದಿಗ ಜಾತಿಗೆ ಶೇ. 6 ವಲಯ ಜಾತಿಗೆ ಶೇ. 5.5, ಭೋವಿ ಲಂಬಾಣಿ ಜಾತಿಗಳಿಗೆ 4.5 ಮತ್ತು ಇತರೆ ಹಕ್ಕಿಪಿಕ್ಕಿ ಜಾತಿಗಳಿಗೆ ಶೇ. 1 ಮೀಸಲಾತಿಯ ಆಯೋಗ ರಚನೆ ಮಾಡಿ ಅವಕಾಶ ಮಾಡಿಕೊಟ್ಟರು ಎಂದು ತಿಳಿಸಿದರು.
READ ALSO : DAVANAGERE JUDGMENT NEWS : ಪ್ರೀತಿಸು ಎಂದು ಚುಡಾಯಿಸಿದ ವ್ಯಕ್ತಿಗೆ ಕಾರಾಗೃಹ ಶಿಕ್ಷೆ !
ಈ ವಿಚಾರದಲ್ಲಿ ನಮ್ಮ ಸಮುದಾಯದ ಆಶಯಗಳನ್ನು ಈಡೇರಿಸುವಂತಹ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿಜಿಯವರು ಹೈದ್ರಾಬಾದಿನಲ್ಲಿ ನಡೆದ ಮಾದಿಗ ಸಮಾವೇಶದಲ್ಲಿ ಪಾಲ್ಗೊಂಡು ಭರವಸೆ ಕೊಟ್ಟಿದ್ದರು. ಆದರೆ ಕರ್ನಾಟಕದಲ್ಲಿದ್ದಂತಹ ಕಾಂಗ್ರೆಸ್ ಮೀಸಲಾತಿ ಜಾರಿ ಮಾಡುವಲ್ಲಿ ವಿಳಂಬ ಮಾಡಿ ಗೊಂದಲ ಉಂಟು ಮಾಡಿದ್ದರಿಂದ ನಮ್ಮ ಸಮಾಜದ ಮುಖಂಡರುಗಳು ಸುಪ್ರೀಂ ಕೋರ್ಟಿಗೆ ಹೋಗಿದ್ದರು. ಸುಪ್ರಿಂ ಕೋರ್ಟ್ನ 7 ನ್ಯಾಯಾಧೀಶರ ಪೀಠವು ಆಗಸ್ಟ್ 1ನೇ ರಂದು ಒಳ ಮೀಸಲಾತಿಯನ್ನು ಜಾತಿ ಜನಸಂಖ್ಯೆಗನುಗುಣಾವಾಗಿ ಹಂಚಿಕೆ ಮಾಡಬಹುದೆಂದು ಐತಿಹಾಸಿಕ ತೀರ್ಪನ್ನು ನೀಡಿದ್ದು ಇದು ನಿಜಕ್ಕೂ ಮಾದಿಗ ಸಮಾಜದ ನಡೆಸಿದ ಹೋರಾಟಕ್ಕೆ ಸಿಕ್ಕ ಫಲವಾಗಿದೆ ಎಂದರು.
ಈ ಹಿನ್ನೆಲೆಯಲ್ಲಿ ಇಲ್ಲಿನ ಕಾಂಗ್ರೆಸ್ ಸರ್ಕಾರವು ಕೋರ್ಟ್ ಆದೇಶವನ್ನು ತತ್ಕ್ಷಣದಿಂದಲೇ ಪುರಸ್ಕರಿಸಿ ಎಲ್ಲಾ ಇಲಾಖೆಗೂ ಆದೇಶವನ್ನು ಕಳಿಸಿ ಜಾರಿಗೊಳಿಸುವಂತೆ ಮಾಡಬೇಕೆಂದು ಒತ್ತಾಯಿಸಿದರು.
ದಲಿತ ಮುಖಂಡರಾದಂತಹ ಹೆಚ್. ಮಲ್ಲೇಶ್, ಎಂ. ಹಾಲೇಶ್, ಶಾಮನೂರು ರಾಜು, ಜಯಪ್ರಕಾಶ್, ಹಾಲೇಶ್ ಜಿಗಳಿ, ಹನುಮಂತಪ್ಪ ಗಾಂಧಿನಗರ, ಅಂಜಿನಪ್ಪ, ರಾಜಪ್ಪ, ದುರ್ಗೆಶ್ ನಿಟ್ಟುವಳ್ಳಿ, ಆನಂದ ಜಾಲಿಹಾಳ್, ನಿಂಗರಾಜ್ ರೆಡ್ಡಿ, ಸಾವಜ್ಜರ್ ಮಂಜು, ಷಣ್ಮುಖ, ಸೊಮ್ಹಾಪುರ ಹನುಮಂತಪ್ಪ, ರಾಮಚಂದ್ರಪ್ಪ, ರಾಘವೇಂದ್ರ, ರವಿ ಕೆಟಿಜೆ ನಗರ, ಮಾನು, ಚೇತನ್, ಜಯಣ್ಣ ಎಸ್.ಓ.ಜಿ. ಕಾಲೋನಿ, ಚಿಕ್ಕನಹಳ್ಳಿ ಹನುಮಂತಪ್ಪ, ಹಾಗೂ ಇತರರು ಪಾಲ್ಗೊಂಡಿದ್ದರು.