ದಾವಣಗೆರೆ ಜೂ.13 : ದೀನ ದಯಾಳ್ ಅಂತ್ಯೋದಯ ಯೋಜನೆ-ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಪ್ರಸಕ್ತ ಸಾಲಿಗೆ ಸ್ವಯಂ ಉದ್ಯೋಗ ವ್ಯಕ್ತಿಗತ ಉದ್ಯಮಶೀಲತೆ (ಸಾಲ ಮತ್ತು ಸಹಾಯಧನ), ಗುಂಪು ಉದ್ಯಮ ಕಾರ್ಯಕ್ರಮದಡಿ, ಗುಂಪು ಉದ್ಯಮ ಕೈಗೊಳ್ಳಲು, ಎಸ್.ಹೆಚ್.ಜಿ ಬ್ಯಾಂಕ್ ಕ್ರೆಡಿಟ್ ಲಿಂಕೇಜ್ ಕಾರ್ಯಕ್ರಮದಡಿ ಸಾಲ ಪಡೆಯಲು,
ಕೌಶಲ್ಯಾಭಿವೃದ್ಧಿ ಮೂಲಕ ಉದ್ಯೋಗ ಮತ್ತು ಸ್ಥಳ ನಿಯುಕ್ತಿ ಕಾರ್ಯಕ್ರಮದಡಿ ವಿವಿಧ ತರಬೇತಿಯನ್ನು ಪಡೆಯಲು, ಮಹಿಳಾ ಸ್ವ ಸಹಾಯ ಸಂಘಗಳನ್ನು ರಚಿಸಲು, ವಿಕಲಚೇತನ ಪುರುಷರ ಸ್ವ ಸಹಾಯ ಸಂಘಗಳನ್ನು ರಚಿಸಲು, ಬೀದಿ ಬದಿ ವ್ಯಾಪಾರಿಗಳ ಸ್ವ ಸಹಾಯ ಸಂಘಗಳನ್ನು ರಚಿಸಲು ಆಸಕ್ತ ಅರ್ಹ ಫಲಾನುಭವಿ, ಗುಂಪುಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಭರ್ತಿ ಮಾಡಿದ ಅರ್ಜಿಗಳನ್ನು ಜುಲೈ 11 ರೊಳಗಾಗಿ ಕಚೇರಿಗೆ ಸಲ್ಲಿಸಬೇಕು. ಅರ್ಜಿಗಳನ್ನು ಸಲ್ಲಿಸುವ ಫಲಾನುಭವಿಗಳು ಮಲೆಬೆನ್ನೂರು ಪಟ್ಟಣ ನಿವಾಸಿಗಳಾಗಿರಬೇಕು, ಬಡತನ ರೇಖೆ ಕೆಳಗಿನ ಕುಟುಂಬದವರಾಗಿರಬೇಕು.
ಅರ್ಜಿಯೊಂದಿಗೆ ರೇಷನ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ನಿವಾಸಿ ದೃಢೀಕರಣ ಪತ್ರ, ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಅನುಭವ ಪ್ರಮಾಣ ಪತ್ರ, ಹುಟ್ಟಿದ ತಾರೀಖು ದೃಢೀಕರಣ ಪತ್ರ ಲಗತ್ತಿಸಿ. ಅರ್ಜಿಯನ್ನು ದ್ವಿ ಪ್ರತಿಯಲ್ಲಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿಗೆ ಪಟ್ಟಣ ಪಂಚಾಯಿತಿ ಕಚೇರಿ ಸಂಪರ್ಕಿಸಲು ಮಲೇಬೆನ್ನೂರು ಪುರಸಭೆ ಮುಖ್ಯಾಧಿಕಾರಿ ತಿಳಿಸಿದ್ದಾರೆ.