Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ಕನ್ನಡ ರಾಜ್ಯೋತ್ಸವ ಸಂಭ್ರಮ ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯಲಿ : ದಿನೇಶ ಕೆ.ಶೆಟ್ಟಿ ಆಶಯ
ತಾಜಾ ಸುದ್ದಿ

ಕನ್ನಡ ರಾಜ್ಯೋತ್ಸವ ಸಂಭ್ರಮ ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯಲಿ : ದಿನೇಶ ಕೆ.ಶೆಟ್ಟಿ ಆಶಯ

Dinamaana Kannada News
Last updated: November 30, 2025 3:26 pm
Dinamaana Kannada News
Share
Davanagere
SHARE

ದಾವಣಗೆರೆ, ನ. 30, : ನಮ್ಮ ಕನ್ನಡ ನಾಡು, ನುಡಿ, ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಯಬೇಕೆಂದರೆ ಕನ್ನಡ ರಾಜ್ಯೋತ್ಸವ, ಕನ್ನಡದ ಪ್ರತಿಭೆಗಳನ್ನು ಗುರುತಿಸುವಂತಹ ಇಂತಹ ಕಾರ್ಯಕ್ರಮಗಳು ಪ್ರತಿ ವಾರ್ಡಿನಲ್ಲೂ ಹೆಚ್ಚೆಚ್ಚು ನಡೆಯುವಂತಾಗಬೇಕು ಎಂದು ದಾವಣಗೆರೆ ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ ಕೆ.ಶೆಟ್ಟಿ ಹೇಳಿದರು.

ಇಲ್ಲಿನ ವಿನೋಬನಗರದ 2ನೇ ಮುಖ್ಯ ರಸ್ತೆಯಲ್ಲಿ ಸಾರ್ವಜನಿಕರ ಸೇವಾ ಸಮಿತಿಯಿಂದ ಶನಿವಾರ ಸಂಜೆ ಆಯೋಜಿಸಿದ 28ನೇ ವರ್ಷದ ಕನ್ನಡ ರಾಜ್ಯೋತ್ಸವ, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ದಾವಣಗೆರೆಯಲ್ಲಿ ಪ್ರತಿವರ್ಷ ಬಿಡದಂತೆ ಕಳೆದ 28 ವರ್ಷಗಳಿಂದ ಕನ್ನಡ ರಾಜ್ಯೋತ್ಸವ ಆಚರಣೆ ಮಾಡುತ್ತಾ ಬಂದಿರುವುದು ಎಂದರೆ ಅದು ಈ ವಿನೋಬನಗರದ ಎ.ನಾಗರಾಜ ನೇತೃತ್ವ ಸಾರ್ವಜನಿಕ ಸೇವಾ ಸಮಿತಿ. ಈ ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಮಕ್ಕಳಿಗೆ ಕ್ರೀಡೆಗಳು, ರಂಗೋಲಿ ಸ್ಪರ್ಧೆಗಳನ್ನು ಆಯೋಜಿಸಿ ವಿಜೇತರಿಗೆ ಬಹುಮಾನ ವಿತರಣೆ, ವಾರ್ಡಿನ ಹಿರಿಯ ನಾಗರೀಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ, ಪೌರ ಕಾರ್ಮಿಕರು ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನಿಸುವಂತಹ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಅಲ್ಲದೇ ಈ ವಾರ್ಡಿನ ಪಾಲಿಕೆ ಮಾಜಿ ಸದಸ್ಯರಾಗಿರುವ ಎ.ನಾಗರಾಜ ಪಾಲಿಕೆ ಸದಸ್ಯರಾಗಿರಲಿ, ಇಲ್ಲದಿರಲಿ ವಾರ್ಡಿನ ಯಾವುದೇ ವ್ಯಕ್ತಿಗೆ ಯಾವುದೇ ಇಲಾಖೆಯಿಂದ ಆಗಬೇಕಾಗಿರುವಂತಹ ಕೆಲಸಗಳನ್ನು ಮಾಡಿಕೊಡುವಂತಹ, ಇನ್ನಿತರೆ ಕೆಲಸವನ್ನು ಮಾಡುವ ವ್ಯಕ್ತಿಯಾಗಿದ್ದಾರೆ. ಮುಂದಿನ ದಿನಗಳಲ್ಲಿ ಇವರ ಸೇವಾ ಕಾರ್ಯ ಇನ್ನೂ ಹೆಚ್ಚಿನದಾಗಿ ಮಾಡುವಂತಾಗಲಿ ಎಂದು ಹಾರೈಸಿದರು.

Read also : ದಾವಣಗೆರೆ:2ನೇ ವರ್ಷದ ಬಿ.ಇಡಿ ದಾಖಲಾತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

ಮಹಾನಗರ ಪಾಲಿಕೆ ಮಾಜಿ ಮೇಯರ್ ಕೆ.ಚಮನ್‌ಸಾಬ್ ಮಾತನಾಡಿ, ಕನ್ನಡ ಒಂದು ಭಾಷೆ ಅಷ್ಟೇ ಅಲ್ಲ. ಅದು ಒಂದು ಜೀವನ. ಪ್ರಪಂಚದ ಕೆಲವೇ ಜೀವಂತ ಭಾಷೆಗಳಲ್ಲಿ ಕನ್ನಡವೂ ಸಹಾ ಒಂದಾಗಿದೆ. ಈ ಭಾಷೆಗೆ ಎರಡೂವರೆ ಸಾವಿರ ವರ್ಷಗಳ ಇತಿಹಾಸ ಇರುವ ಈ ಕನ್ನಡ ಭಾಷೆಗೆ 8 ಜ್ಞಾನಪೀಠ ಪ್ರಶಸ್ತಿಗಳು ಬಂದಿರುವುದು ಸ್ವಾಗತಾರ್ಹ. ನಮ್ಮ ಕನ್ನಡ ಭಾಷೆಯನ್ನು ಸರ್ಕಾರ ಆಡಳಿತ ಭಾಷೆಯನ್ನಾಗಿ ಮಾಡಿದೆ. ಇದಕ್ಕೆಲ್ಲಾ ನೂರಾರು ಕನ್ನಡ ಕಟ್ಟಾಳುಗಳ ಶ್ರಮ ಕಾರಣ ಎಂದರು.

ಪಾಲಿಕೆ ಮಾಜಿ ಸದಸ್ಯ ಗಡಿಗುಡಾಳ್ ಮಂಜುನಾಥ ಮಾತನಾಡಿ, ನಮ್ಮ ನಾಡಿನ ಹೆಮ್ಮೆಯ ಕನ್ನಡ ರಾಜ್ಯೋತ್ಸವವನ್ನು ರಾಜ್ಯದಾದ್ಯಂತ ಅದ್ಧೂರಿಯಾಗಿ ಆಚರಣೆ ಮಾಡುತ್ತಿದ್ದಾರೆ. ಕನ್ನಡ ಶಾಲೆಗಳು ಮುಚ್ಚುವಂತಹ ಇಂತಹ ಸಂದರ್ಭದಲ್ಲಿ ನಾವೂ ಸಹಾ ನಮ್ಮ ಮನೆ, ವ್ಯವಹಾರಗಳಲ್ಲಿ ಕನ್ನಡ ಬಳಸಿ ಉಳಿಸುವಂತಾಗಬೇಕು ಎಂದು ಕರೆ ನೀಡಿದರು.

ಸಮಿತಿ ಅಧ್ಯಕ್ಷ, ವಾರ್ಡಿನ ಮಾಜಿ ಸದಸ್ಯ ಎ.ನಾಗರಾಜ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.  ಯೋಗ ಒಕ್ಕೂಟದ ಅಧ್ಯಕ್ಷ ವಾಸುದೇವ ರಾಯ್ಕರ್, ಅಭಾವೀಲಿಂ ಮಹಾಸಭಾ ಗೌರವಾಧ್ಯಕ್ಷ ಎಸ್.ಜಿ.ಉಳುವಯ್ಯ, ಎಚ್.ಡಿ.ನಾಗರಾಜ, ಅಜ್ಮತ್ ವುಲ್ಲಾ, ಎಚ್.ಎಂ.ರುದ್ರೇಶ, ಸಮಿತಿ ಪದಾಧಿಕಾರಿಗಳು, ಇತರರು ಇದ್ದರು.

ಈ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಎಂ.ಸ್ಪAದನಾ, ಎಚ್.ಎಲ್.ವಿಶ್ವನಾಥ, ಆರ್.ರಾಹುಲ್(ದ್ವಿತೀಯ ಪಿಯುಸಿ ಅತೀ ಹೆಚ್ಚು ಅಂಕ), ಎಂ.ಎಸ್.ಪ್ರೇರಣ ಶೀಲವಂತ್(ಸ್ಕೌಟ್ ಗೈಡ್ ರಾಜ್ಯ ಪ್ರಶಸ್ತಿ ಪುರಸ್ಕೃತರು), ಜ್ಯೋತಿ(ಪೌರ ಕಾರ್ಮಿಕರು), ಷಣ್ಮುಖ ಪ್ರಭು ಆಚಾರ್(ಕ್ರೀಡಾಪಟು), ಮಲ್ಲಪ್ಪ(ಹಿರಿಯ ನಾಗರೀಕ)ರನ್ನು ಸನ್ಮಾನಿಸಲಾಯಿತು. ನಂತರ ಭಾರತಿ ವಾದ್ಯವೃಂದದಿAದ ರಸಮಂಜರಿ ಕಾರ್ಯಕ್ರಮ ನಡೆಯಿತು.

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Applications invited ದಾವಣಗೆರೆ:2ನೇ ವರ್ಷದ ಬಿ.ಇಡಿ ದಾಖಲಾತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ
Next Article Davanagere ಕಾಟಾಚಾರದ ರಸ್ತೆ ದುರಸ್ತಿ ಮಾಡಬೇಡಿ : ಶಾಸಕ ಕೆ.ಎಸ್.ಬಸವಂತಪ್ಪ
Leave a comment

Leave a Reply Cancel reply

You must be logged in to post a comment.

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Political analysis | ಸುನೀಲ್ ಕುಮಾರ್ ಫೀಲ್ಡಿಗೆ ಎಂಟ್ರಿಯಾಗಿದ್ದು ಹೇಗೆ?

ಕೆಲ ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಚ ವಿಜಯೇಂದ್ರ ಅವರ ಕಿವಿಗೆ ಒಂದು ಸಂದೇಶ ತಲುಪಿದೆ.ಅವರಿಗೆ ಈ ಸಂದೇಶ ತಲುಪಿಸಿದ್ದು ಸ್ವತ:…

By Dinamaana Kannada News

Davanagere Electrical variation : ಆ.6 ರಂದು ವಿವಿಧ ಬಡಾವಣೆಯಲ್ಲಿ ವಿದ್ಯುತ್‌ ವ್ಯತ್ಯಯ

ದಾವಣಗೆರೆ .ಆ05 (Davanagere)   66/11 ಕೆ.ವಿ. ದಾವಣಗೆರೆ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಫೀಡರ್‌ನಲ್ಲಿ ಹೆಚ್ಚುವರಿ ಕಂಬಗಳನ್ನು ಅಳವಡಿಸಿಕೊಂಡು ಎಲ್.ಟಿ…

By Dinamaana Kannada News

ರಾಜ್ಯ ಸರ್ಕಾರದಿಂದ ಭೂ ಗ್ಯಾರಂಟಿ ಯೋಜನೆಯಡಿ ಹಂತಹಂತವಾಗಿ ಹಕ್ಕುಪತ್ರ ವಿತರಣೆ; ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

ದಾವಣಗೆರೆ (Davanagere):  ರಾಜ್ಯದಲ್ಲಿ ಭೂಮಿ ಹೊಂದಿರುವ ಬಡವರು, ಹಿಂದುಳಿದ ವರ್ಗದವರು, ಆದಿವಾಸಿಗಳು, ದಲಿತರು ಯಾವುದೇ ಕಾರಣಕ್ಕೂ ಅದರ ಮಾಲಿಕತ್ವದಿಂದ ವಂಚಿತರಾಗಬಾರದು…

By Dinamaana Kannada News

You Might Also Like

Daavanagere
ಅಪರಾಧ ಸುದ್ದಿ

ಮನೆ ಕಳ್ಳತನ ಪ್ರಕರಣ:12 ಗಂಟೆಯಲ್ಲಿ ಆರೋಪಿ ಬಂಧನ

By Dinamaana Kannada News
Daavanagere
ತಾಜಾ ಸುದ್ದಿ

ನಿಮ್ಹಾನ್ಸ್ ಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಭೇಟಿ:ಸಮಗ್ರ ಪರಿಶೀಲನೆ

By Dinamaana Kannada News
Dr. D. Francis
ಅಭಿಪ್ರಾಯ

poem|ಮನವು ಹೇಳದ ಮಾತು:ಡಾ.ಡಿ. ಫ್ರಾನ್ಸಿಸ್

By Dinamaana Kannada News
B. Srinivas
ಅಭಿಪ್ರಾಯ

poem|ತಾಯಂದಿರು:ಬಿ.ಶ್ರೀನಿವಾಸ

By ಬಿ.ಶ್ರೀನಿವಾಸ
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?