ದಾವಣಗೆರೆ: ಸರ್ಕಾರಿ ಆಸ್ತಿಗಳಾಗಲಿ ಅಥವಾ ಕಟ್ಟಡಗಳಾಗಲಿ ಇವು ನಮ್ಮ ಆಸ್ತಿಗಳು ಎಂಬ ಭಾವನೆ ಸರ್ವಜನಿಕರಲ್ಲಿ ಎಲ್ಲಿಯವರೆಗೆ ಬರುವುದಿಲ್ಲವೋ, ಅಲ್ಲಿಯವರೆಗೆ ರ್ಕಾರಿ ಆಸ್ತಿಗಳು ಮತ್ತು ಕಟ್ಟಡಗಳ ಶಾಶ್ವತ ಬಾಳಿಕೆ ಅಸಾಧ್ಯ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಗ್ರಾಮಸ್ಥರನ್ನು ಎಚ್ಚರಿಸಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ಮತ್ತಿ ಗ್ರಾಮದಲ್ಲಿ ಶನಿವಾರ ರ್ಕಾರಿ ಪ್ರೌಢಶಾಲೆಯಲ್ಲಿ 6.10 ಲಕ್ಷ ರೂ. ವೆಚ್ಚದ ನರ್ಮಾಣ ಮಾಡಿದ ಅಡುಗೆ ಕೊಠಡಿ ಉದ್ಘಾಟಿಸಿ ಮಾತನಾಡಿದ ಅವರು, 2010-11ನೇ ಸಾಲಿನಲ್ಲಿ ನರ್ಮಾಣ ಮಾಡಿದ ರ್ಕಾರಿ ಪ್ರೌಢಶಾಲಾ ಕಟ್ಟಡ ಈಗಾಗಲೇ ಬಿರುಕು ಬಿಟ್ಟಿವೆ. ಅಲ್ಲದೇ ಕೊಠಡಿಗಳು ಶಿಥಿಲಗೊಂಡು ಮಳೆ ಬಂದಾಗ ಸೊರುತ್ತಿವೆ. ಕೆಲವೆಡೆ ಬಾಗಿಲು ಮುರಿದಿವೆ. ಕೊಠಡಿಗಳು ಸೊರುತ್ತಿರುವುದರಿಂದ ಮಕ್ಕಳ ಶಾಲೆಗೆ ಬಾರದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ನಿಮ್ಮಗಳ ಬೇಜವಾಬ್ದಾರಿಯಿಂದ ಮಕ್ಕಳ ಭವಿಷ್ಯದ ನೀವೇ ಚಿವುಟುತ್ತೀರಿ. ನೀವು ಶಾಲಾ ಕಟ್ಟಡ ನಿರ್ಮಿಸುವ ಸಂರ್ಭದಲ್ಲಿ ಗುತ್ತಿಗೆದಾರ ಎಷ್ಟು ಪ್ರಮಾಣದಲ್ಲಿ ಸಿಮೆಂಟ್, ಇಟ್ಟಿಗೆ, ಜಲ್ಲಿ ಬಳಸಿದ್ದಾನೆ ಎಂದು ಪರಿಶೀಲನೆ ಮಾಡಿದ್ದರೆ ಕಳಪೆ ಗುಣಮಟ್ಟದ ಕಟ್ಟಡ ನಡೆಯುತ್ತಿರಲಿಲ್ಲ ಎಂದರು.
ಅತೀ ಹೆಚ್ಷು ತೇವಾಂಶ ಪ್ರದೇಶದಲ್ಲಿ ಆಳವಾಗಿ ಬುನಾದಿ ತೆಗೆಯದೇ ಐದಾರು ಅಡಿ ಬುನಾದಿ ತೆಗೆದು ಶಾಲಾ ಕಟ್ಟಡ ನರ್ಮಿಸಿರುವುದೇ ಕಟ್ಟಡ ಬೇಗ ಹಾಳಾಗಲು ಕಾರಣವಾಗಿದೆ. ಇನ್ಮುಂದೆ ಯಾವುದೇ ರ್ಕಾರಿ ಕಟ್ಟಡಗಳನ್ನು ನಿರ್ಮಾಣ ಮಾಡುವ ಸಂರ್ಭದಲ್ಲಿ ಖುದ್ದು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಿದ ಹೆಚ್ಚು ವರ್ಷಗಳ ಕಾಲ ಬಾಳಿಕೆ ಬರುವ ಕಟ್ಟಡಗಳನ್ಬು ಕಾಣುತ್ತೀರಿ ಎಂದರು.
ಈ ಸಂರ್ಭದಲ್ಲಿ ಹನುಮಂತಪ್ಪ, ಶಿವಣ್ಣ, ಮುನೀರ್, ಮಂಜಣ್ಣ, ಗ್ರಾಪಂ ಸದಸ್ಯ ಸತೀಶ್, ಪಿಡಿಒ ವನಿತಾ, ಎಂಜಿನಿಯರ್ ವೆಂಕಟೇಶ್, ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಸಿಬ್ಬಂದಿಗಳು, ಊರಿನ ಮುಖಂಡರು, ಗ್ರಾಮಸ್ಥರು ಉಪಸ್ಥಿತರಿದ್ದರು.
ಭೂಮಿಪೂಜೆ: ಮತ್ತಿ ಗ್ರಾಮದಲ್ಲಿ 12 ಲಕ್ಷ ರೂ. ವೆಚ್ಚದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಶಾಸಕ ಕೆ.ಎಸ್.ಬಸವಂತಪ್ಪ ಭೂಮಿಪೂಜೆ ನೆರವೇರಿಸಿದರು. ಕಳಪೆ ಗುಣಮಟ್ಟದ ಕಟ್ಟಡ ನಿರ್ಮಾಣ ಮಾಡದಂತೆ ಗುತ್ತಿಗೆದಾರ ಮತ್ತು ಅಧಿಕಾರಿಗಳಿಗೆ ಇದೇ ಸಂದರ್ಭದಲ್ಲಿ ಸೂಚನೆ ನೀಡಿದರು.
–ಬಾಕ್ಸ್—
ಕೊಠಡಿಗಳ ಪರಿಶೀಲನೆ..
ಮತ್ತಿ ಗ್ರಾಮದಲ್ಲಿ 2010-11ನೇ ಸಾಲಿನಲ್ಲಿ ನಿರ್ಮಾಣ ಮಾಡಿರುವ ಸರ್ಕಾರಿ ಪ್ರೌಢಶಾಲೆಯ ಕೊಠಡಿಗಳನ್ನು ಪರಿಶೀಲನೆ ನಡೆಸಿದ ವೇಳೆ ಶಾಲೆಯ ಕೊಠಡಿಗಳು ಬಿರುಕು ಬಿಟ್ಟಿರುವುದು, ಹೆಂಚುಗಳು ಹೊಡೆದಿರುವುದು, ಬಾಗಿಲುಗಳು ಮುರಿದಿರುವುದು ಕಂಡು ಬಂತು. ಈ ಬಗ್ಗೆ ತನಿಖೆ ನಡೆಸಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಜಿಪಂ ಸಿಇಒ ಅವರಿಗೆ ಸೂಚಿಸುವುದಾಗಿ ಶಾಸಕ ಕೆ.ಎಸ್.ಬಸವಂತಪ್ಪ ತಿಳಿಸಿದ್ದಾರೆ.