ಹಾವೇರಿ:
ಹೆಗ್ಗೆರಿ ಕೆರೆಯಿಂದ ನಗರದ ಅಕ್ಕಮಹಾದೇವಿ ಹೊಂಡಕ್ಕೆ ನೀರು ಹರಿಸುವ ಯೋಜನೆ ಕಾಮಗಾರಿಯನ್ನು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ವೀಕ್ಷಣೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ಪ್ರಸ್ತುತ ಪೈಪ್ ಲೈನ್ಗೆ ಪರ್ಯಾಯವಾಗಿ ಮತ್ತೊಂದು ಪೈಪ್ ಲೈನ್ ಅಳವಡಿಸಿ ಸಿದ್ದವಾಗಿಟ್ಟುಕೊಳ್ಳಿ. ಪ್ರಸ್ತುತ ಬರಗಾಲದ ವೇಳೆ ನಗರದ ಯಾವುದೇ ಭಾಗಕ್ಕೆ ನೀರಿನ ಸಮಸ್ಯೆ ಆಗಬಾರದು. ಈ ನಿಟ್ಟಿನಲ್ಲಿ ಎಲ್ಲ ಅಗತ್ಯ ಕ್ರಮ ಕೈಗೊಳ್ಳುವಂತೆ ನಗರ ನೀರು ಸರಬರಾಜು ಇಲಾಖೆ ಅಭಿಯಂತರರಿಗೆ ಸೂಚಿಸಿದರು.
ಇದೇ ವೇಳೆ ನಗರಸಭೆಯ ಆಯುಕ್ತ ಪರಶುರಾಮ ಚಲವಾದಿ ಮೇಲೆ ಹರಿಹಾಯ್ದ ಸಚಿವರು, ನಗರದ ಸ್ವಚ್ಛತೆ ಮತ್ತು ಜನರಿಗೆ ಕುಡಿಯಲು ನೀರು ಕೊಡದ ನಿಮ್ಮಿಂದ ಏನು ಮಾಡಲು ಸಾಧ್ಯ. ನೀವು ಈ ಕೆಲಸಕ್ಕೆ ಸಮರ್ಥರೇ? ನಿಮ್ಮ ಕೆಲಸ ನೀವು ಸರಿಯಾದ ರೀತಿಯಲ್ಲಿ ಮಾಡಿದ್ದರೇ ನಮಗೇನು ಕೆಲಸ ಇಲ್ಲಿ? ನಿಮ್ಮ ಅಸಮರ್ಥತೆಯಿಂದ ನಿಮ್ಮ ಕೆಲಸವನ್ನು ನಾವಿ ಡಿಸಿ ಇಲ್ಲಿ ಬಂದು ಮಾಡುವಂತಾಗಿದೆ ಎಂದು ಕಿಡಿ ಕಾರಿದರು.
ಈ ವೇಳೆ ಡಿಸಿ ರಘುನಂದನಮೂರ್ತಿ, ಜಿಪಂ ಸಿಇಒ ಅಕ್ಷಯ ಶ್ರೀಧರ, ಎಎಸ್ಪಿ ಸಿ.ಗೋಪಾಲ, ಡಿಯುಡಿಸಿಯ ಅಧಿಕಾರಿ ಎಂ.ಸಿ. ಹೊಸಮನಿ ಇತರರಿಗೆ ಇದ್ದರು.
ನೀರು ಹರಿಸುವ ಕಾಮಗಾರಿ ವೀಕ್ಷಿಸಿದ ಸಚಿವ ಶಿವಾನಂದ ಪಾಟೀಲ
