ದಾವಣಗೆರೆ, ಮೇ.20 : ದಾವಣಗರೆ ವಿನೋಬ ನಗರದ 1ನೇ ಮೇನ್ 7ನೇ ಕ್ರಾಸ್ ವಾಸಿಯಾದ ಅಂಜನ್ ಬಾಬು ತಂದೆ ಷಣ್ಮುಖಪ್ಪ (34) ನಾಗವೇಣಿ (24) ನಕ್ಷತ್ರ (1 ವರ್ಷ) ಇವರುಗಳು ಏ. 12 ರಂದು ಮನೆಯಿಂದ ಹೋದವರು ಇದುವರೆಗೂ ಮನೆಗೆ ವಾಪಸ್ ಬಂದಿರುವುದಿಲ್ಲ ಎಂದು ಪಿ.ಜೆ.ಬಡಾವಣೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಜನ್ ಬಾಬು 5.6 ಅಡಿ ಎತ್ತರ, ದುಂಡು ಮುಖ, ಎಣ್ಣೆಗೆಂಪು ಗೋಧಿ ಮೈ ಬಣ್ಣ, ಸಾಧರಣ ಮೈ ಕಟ್ಟು, ಕನ್ನಡ, ಹಿಂದಿ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ. ನಾಗವೇಣಿ ; 5 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು, ಕನ್ನಡ ಭಾಷೆ ಮಾತನಾಡುತ್ತಾರೆ.
ನಕ್ಷತ್ರ (1 ವರ್ಷ) 2 ಅಡಿ ಎತ್ತರ, ದುಂಡು ಮುಖ, ಗೋಧಿ ಮೈ ಬಣ್ಣ, ಸಾಧಾರಣ ಮೈ ಕಟ್ಟು ಇದ್ದಾರೆ. ಇವರ ಬಗ್ಗೆ ಮಾಹಿತಿ ದೊರಕಿದಲ್ಲಿ ಪಿ.ಜೆ ಬಡಾವಣೆ ಪೊಲೀಸ್ ಠಾಣೆ ದೂ.ಸಂ: 08192-272012, 08192-259213, 08192-253400, 08192-253100 ಗೆ ಕರೆ ಮಾಡಲು ಠಾಣಾಧಿಕಾರಿ ತಿಳಿಸಿದ್ದಾರೆ.