ದಾವಣಗೆರೆ (Davanagere): ಭೂಮಿಕ ನಗರದಿಂದ ರಾಮನಗರಕ್ಕೆ ಸಾಗುವ ರಸ್ತೆಯಲ್ಲಿ ಅವೈಜ್ಞಾನಿಕವಾಗಿ ನಿರ್ಮಾಣಗೊಂಡಿರುವ ಕೆಳ ಸೇತುವೆಯಿಂದ ಹಲವಾರು ಅಪಘಾತಗಳಿಗೆ ಹಾಗೂ ಟ್ರಾಫಿಕ್ ಜಾಂಗೆ ಎಡೆಮಾಡಿಕೊಟ್ಟಿರುತ್ತದೆ.
ಈ ಸೇತುವೆಯು ಕಿರಿದಾಗಿದ್ದು ರಾಜ್ಯ ಸಾರಿಗೆ ಸಂಸ್ಥೆಯ ಡಿಪೋ ಘಟಕಕ್ಕೆ ಹೋಗುವ ಭಾರಿ ವಾಹನಗಳು ಮತ್ತು ಆಸ್ಪತ್ರೆಯ ಆ್ಯಂಬುಲೆನ್ಸ್ ಗಳು ಜತೆಯಲ್ಲಿ ಇತರೆ ಭಾರಿ ವಾಹನಗಳು ಸಾಗುತ್ತಿರುತ್ತವೆ. ಸೇತುವೆಯು 2x4x.4.5 ಮೀ. ವಿಸ್ತಾರ ಹೊಂದಿದ್ದು ಹಲವಾರು ಅವಘಡಗಳಿಗೆ ಕಾರಣವಾಗಿವೆ.
ಇದರ ಬಗ್ಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಅವರು ಪೊಲೀಸ್ ಇಲಾಖೆ, ರಾಜ್ಯ ರಸ್ತೆ ನಿಗಮ, ಲೋಕೋಪಯೋಗಿ ಇಲಾಖೆ, ಇತರೆ ಇಲಾಖೆಗಳಿಂದ ಮಾಹಿತಿ ತರಿಸಿ ಇದರ ಬಗ್ಗೆ ಸಂಸತ್ತಿನಲ್ಲಿ ಸಂಸದರು ಪ್ರಶ್ನಿಸಿದ್ದು ಅತೀ ಶೀಘ್ರವೇ ಇದಕ್ಕೆ ಪರಿಹಾರವಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಡಲು ಒತ್ತಡ ಹೇರಿದರು.
JOB NEWS | ಅಂಗನವಾಡಿ ಕಂ ಕ್ರಷ್ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ