ದಾವಣಗೆರೆ (Davanagere) : ಮುಸ್ಲಿಂ ಎಜುಕೇಷನ್ ಫಂಡ್ ಅಸೋಸಿಯೇಷನ್ನಿಂದ ವಸತಿ ನಿಯಲಯದ ಅವರಣದಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಆಚರಿಸಲಾಯಿತು.
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆಯಲ್ಲಿ ಮುಸ್ಲಿಮ್ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ವಿಧಾನ ಪರಿಷತ್ ಸದಸ್ಯ ಕೆ. ಅಬ್ದುಲ್ ಜಬ್ಬಾರ್ ವಿತರಿಸಿದರು.
ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಮೊಹಮ್ಮದ್ ಸಿರಾಜ್, ಜಿಲ್ಲಾ ವಕ್ಫ್ ಆಡಳಿತಾಧಿಕಾರಿ ಸೈಯದ್ ಮೊಅಜಂ ಪಾಷ, ಶಾಮೀರ್ ಆಲಂ ಖಾನ್, ಏಜಾಜ್ ಸಂತೆಬೆನ್ನೂರು, ಕೋಳಿ ಶೇಖ್ ಇಬ್ರಾಹೀಮ್, ಅಬುಸ್ವಾಲೇಹಾ, ಅಬ್ದುಲ್ ಜಬ್ಬಾರ್, ಶೇಖ್ ಅಹಮದ್, ವಿದ್ಯಾರ್ಥಿಗಳು, ಪೋಷಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.