ದಾವಣಗೆರೆ (Davanagere): ರಾಷ್ಟ್ರೀಯ ಅಹಿಂದ ಒಕ್ಕೂಟದ ದಾವಣಗೆರೆ ಜಿಲ್ಲಾಧ್ಯಕ್ಷರನ್ನಾಗಿ ದಾವಣಗೆರೆ ಕನ್ನಡಿಗ ಪತ್ರಿಕೆಯ ಸಂಪಾದಕರಾದ ರವಿ.ಆರ್.ಇವರನ್ನು ನೇಮಕಮಾಡಲಾಗಿದೆ ಎಂದು ರಾಷ್ಟ್ರೀಯ ಅಹಿಂದ ಒಕ್ಕೂಟದ ರಾಜ್ಯಾಧ್ಯಕ್ಷರಾದ ಮುತ್ತಣ್ಣ ಶಿವಳ್ಳಿ ಇವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಎರಡನೇ ಹಂತದ ಅಹಿಂದ ನಾಯಕರನ್ನ ಗುರುತಿಸುವುದು, ಮತ್ತು ಅವರನ್ನು ರಾಜಕೀಯವಾಗಿ, ಆರ್ಥಿಕವಾಗಿ, ಸಾಮಾಜಿಕವಾಗಿ, ಹಾಗೂ ಶೈಕ್ಷಣಿಕವಾಗಿ ಅಭಿವೃದ್ಧಿ ಹೊಂದಲು ಮತ್ತು ವೈಯಕ್ತಿಕವಾಗಿ ಬೆಳೆಯಲು ವೇದಿಕೆ ಕಲಿಸುವುದರ ಮೂಲಕ ಅವರನ್ನು ಪ್ರೋತ್ಸಾಹಿಸುವುದು ಈ ಒಕ್ಕೂಟದ ಉದ್ದೇಶವಾಗಿದೆ.
ರಾಷ್ಟ್ರೀಯ ಆಹಿಂದ ಒಕ್ಕೂಟದ ಪ್ರೊ. ಬೀರಲಿಂಗೇಶ್ವರ ಪೂಜಾರಿ, ಶ್ರೀಗುರನಗೌಡ ಎಸ್ ಪಾಟೀಲ್ ಬಿ .ಶಿವಣ್ಣ ಕಾರ್ಯಕಾರಿಣಿ ಸದಸ್ಯರ ಶಿಫಾರಸ್ಸಿನ ಮೇಲೆ ರವಿ.ಆರ್.ಅವರನ್ನು ಆಯ್ಕೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Read also : Davanagere | ರಾಜ್ಯ ಪರಿಷತ್‌ಗೆ ಜಿ.ಓಬಳಪ್ಪ ಆಯ್ಕೆ