Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > Blog > Davanagere | ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಲಿ ವೃತ್ತಿ ರಂಗಭೂಮಿ : ಡಾ.ಎ.ಬಿ. ರಾಮಚಂದ್ರಪ್ಪ
Blog

Davanagere | ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಲಿ ವೃತ್ತಿ ರಂಗಭೂಮಿ : ಡಾ.ಎ.ಬಿ. ರಾಮಚಂದ್ರಪ್ಪ

Dinamaana Kannada News
Last updated: March 16, 2025 2:01 pm
Dinamaana Kannada News
Share
National Career Theatre Festival
National Career Theatre Festival
SHARE

ದಾವಣಗೆರೆ (Davanagere): ವೃತ್ತಿ ರಂಗಭೂಮಿಯು ನಮ್ಮ ಸಂಕಟಗಳಿಗೆ, ತಲ್ಲಣಗಳಿಗೆ ಮದ್ದಾಗಬೇಕು. ಮುಖ್ಯವಾಗಿ ಜನಮುಖಿಯಾಗಿರಬೇಕು  ಹಿರಿಯ ಲೇಖಕ ಡಾ.ಎ.ಬಿ. ರಾಮಚಂದ್ರಪ್ಪ ಪ್ರತಿಪಾದಿಸಿದರು.

ಇಲ್ಲಿನ ವೃತ್ತಿ ರಂಗಭೂಮಿ ರಂಗಾಯಣವು ನಗರದ ದೃಶ್ಯಕಲಾ ಮಹಾವಿದ್ಯಾಲಯದಲ್ಲಿ ಆಯೋಜಿಸಿರುವ ರಾಷ್ಟ್ರೀಯ ವೃತ್ತಿ ರಂಗೋತ್ಸವ ಅಂಗವಾಗಿ ಭಾನುವಾರ ನಡೆದ ವಿಚಾರ ಸಂಕಿರಣವನ್ನು  ಸಮನ್ವಯಗೊಳಿಸಿ ಅವರು ಮಾತನಾಡಿದರು.

ಹೀಗೆಯೇ ರಂಗಭೂಮಿ ಮುಖೇನ ಯುವಜನರನ್ನು ಎಚ್ಚರಿಸುವುವದರ ಜೊತೆಗೆ ಮಹಿಳಾ ಸಬಲೀಕಣಗೊಳಿಸುವ  ಜವಾಬ್ದಾರಿ ವೃತ್ತಿ ರಂಗಭೂಮಿಗಿದೆ ಎಂದರು.

ರಂಗಭೂಮಿಯ ಮೂಲಕ ಸಂವಿಧಾನದ ಆಶಯಗಳನ್ನು ತಲುಪಿಸಬೇಕಿದೆ. ಯುವಜನರಿಗೆ ಈ ದೇಶದ ಸಂವಿಧಾನಿಕ ಮೌಲ್ಯಗಳನ್ನು, ಸಾಮಾಜಿಕ ಜವಾಬ್ದಾರಿಗಳನ್ನು ಮತ್ತು ಪಾರಂಪರಿಕ ಮೌಲ್ಯಗಳನ್ನು ತಲುಪಿಸುವುದರ ಜೊತೆಗೆ ಮಹಿಳೆಯರನ್ನು ಸಬಲೀಕರಣಗೊಳಿಸುವ  ದೊಡ್ಡ ಜವಾಬ್ದಾರಿ ರಂಗಭೂಮಿ ಮೇಲಿದೆ ಎಂದು ಹೇಳಿದರು.

ರಂಗಭೂಮಿಯ ಅರ್ಧ ಯಶಸ್ಸು ಮಹಿಳೆಯರದು. ಆದರೆ ಅವರನ್ನು ಇತ್ಯಾತ್ಮಕವಾಗಿ ನೋಡಿಲ್ಲ. ಏಕೆಂದರೆ ಭಾರತೀಯ ಪರಂಪರೆಯಲ್ಲಿ ದ್ವಿತೀಯ ದರ್ಜೆಯಾಗಿ, ಕನಿಷ್ಠವಾಗಿ ಮಹಿಳೆಯರನ್ನು ನೋಡಲಾಗಿದೆ. ರಾಮಾಯಣ, ಮಹಾಭಾರತ ಕಾಲದಿಂದಲೂ ಎಲ್ಲ ಅನಾಹುತಗಳಿಗೆ ಹೆಣ್ಣೇ ಕಾರಣ ಎಂದು ಬಿಂಬಿಸಲಾಗಿದೆ. ಹೀಗೆ ಗಂಡಾಳ್ವಿಕೆಯ ಮ‌ೂಲಕ ರಾಮಾಯಣ, ಮಹಾಭಾರತವನ್ನು ನೋಡದೆ ಹೆಣ್ಣಿನ ಮೂಲಕ ನೋಡಬೇಕು ಎಂದು ಕಿವಿಮಾತು ಹೇಳಿದರು.

ವೃತ್ತಿ ರಂಗಭೂಮಿಯನ್ನು ಆಳಿದವರು ಪುರುಷರೇ. ಹೀಗಿದ್ದಾಗ ಮಹಿಳೆಯರು ಪಾತ್ರ ನಿರ್ವಹಿಸುತ್ತಾರೆಂದರೆ ಕೀಳಾಗಿ ನೋಡುವವರೇ ಹೆಚ್ಚು. ಅವರನ್ನು ತುಚ್ಛೀಕರಿಸಿ ನೋಡದೆ, ಕೀಳಾಗಿ ಮಾತಾಡದೆ ಗೌರವದಿಂದ ಕಾಣಬೇಕು. ಇದು ಸಾಮಾಜಿಕ ಜವಾಬ್ದಾರಿ ಆಗಬೇಕು ಎಂದು ಸಲಹೆ ನೀಡಿದರು.

ಕನ್ನಡದ ಅಸ್ಮಿತೆಯನ್ನು ಅತ್ಯಂತ ಶ್ರೀಮಂತವಾಗಿ ಉಳಿಸಿದವರು ರಂಗಭೂಮಿಯ ಕಲಾವಿದರು. ಹಲವು ಕನ್ನಡಗಳನ್ನು ಉಳಿಸಿದ, ಜನಭಾಷೆಯನ್ನು ಕಲಾಮಾಧ್ಯಮವಾಗಿಸಿ ಉಳಿಸಿದ್ದು ರಂಗಭೂಮಿ. ಆದರೆ ನಾಟಕಕಾರರು ಬಳಸಿದ ಸಂಭಾಷಣೆ, ನಟರು ಬಳಸುವ ಸಂಭಾಷಣೆ ಕುರಿತು ಸಂಶೋಧನೆ ನಡೆಯಬೇಕಿದೆ ಎಂದರು.

ಇದಕ್ಕೂ ಮೊದಲು ‘ಯುವ ಚಿಂತನೆ, ರಂಗ ಪ್ರಯೋಗ, ಹೊರಳು ಹಾದಿಯ ಹಾಸ್ಯ’ ಕುರಿತು ಹಿರಿಯ ಪತ್ರಕರ್ತ ಅಜಿತ್ ಘೋರ್ಪಡೆ ಮಾತನಾಡಿ, ಯುವಕಲಾವಿದರಲ್ಲಿ ಪ್ರತಿಭೆಯಿದೆ. ಆದರೆ ಅಧ್ಯಯನದ ಕೊರತೆಯಿದೆ.  ಇದಕ್ಕಾಗಿ ಅಧ್ಯಯನದ ಜೊತೆಗೆ ಶಿಸ್ತು ಮತ್ತು ಶ್ರದ್ಧೆಯನ್ನು ರೂಢಿಸಿಕೊಳ್ಳಬೇಕಿದೆ ಎಂದರು.

ವೃತ್ತಿ ರಂಗಭೂಮಿಯ ನಾಟಕಗಳು ಹಾಸ್ಯ ಸಂಸ್ಕೃತಿಯನ್ನು ಹಾಳು ಮಾಡುತ್ತಿವೆ. ಇದಕ್ಕಾಗಿ ಸದಭಿರುಚಿಯ ನಾಟಕಗಳ ಮೂಲಕ ಸದಭಿರುಚಿಯ ಪ್ರೇಕ್ಷಕರನ್ನು ಹೆಚ್ಚಿಸಬೇಕಾದ ಅಗತ್ಯವಿದೆ ಎಂದು ತಿಳಿಸಿದರು.

‘ಮಹಿಳೆ ಮತ್ತು ಸಮಕಾಲೀನ ವೃತ್ತಿ ರಂಗ ನಾಟಕಗಳು’ ಕುರಿತು ನಾಟಕಕಾರ್ತಿ ಡಾ.ಸುಜಾತಾ ಅಕ್ಕಿ ಮಾತನಾಡಿ, ವೃತ್ತಿ ಕಂಪನಿಗಳಲ್ಲಿ ದ್ವಂದ್ವಾರ್ಥ ಸಂಭಾಷಣೆ ಹಾಗೂ ಅನವಶ್ಯಕ ನೃತ್ಯಗಳಿರುತ್ತವೆ. ಇದರೊಂದಿಗೆ ಕಲಾವಿದೆಯರಿಗೆ ಮರ್ಯಾದೆ ಮತ್ತು ಮಹತ್ವ ಕೊಡುವುದಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Read also : Davanagere | ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಅಗತ್ಯ: ಸಂಸದೆ ಡಾ. ಪ್ರಭಾ

ಹೆಣ್ಣನ್ನು ಕೇಂದ್ರೀಕರಿಸಿಕೊಂಡು ನಾಟಕಗಳ ಹೆಸರುಗಳನ್ನೇ ಬದಲಾಯಿಸಲಾಗುತ್ತಿದೆ ಜೊತೆಗೆ ವಾದ್ಯಗಳ ಅಬ್ಬರ ಹೆಚ್ಚುತ್ತಿದೆ. ಇದರಿಂದ ಸಂಭಾಷಣೆ ಕೇಳದ ಪರಿಸ್ಥಿತಿಯಿದೆ. ಇದಕ್ಕಾಗಿ ಒಳ್ಳೆಯ ಸಂದೇಶಗಳನ್ನು ನೀಡುವ ನಾಟಕಗಳು ಪ್ರದರ್ಶನಗೊಳ್ಳಲಿ ಎಂದರು.

ಸಾಮಾಜಿಕವಾಗಿ, ಆರ್ಥಿಕವಾಗಿ ಹಾಗೂ ರಾಜಕೀಯವಾಗಿ ಕೆಲ ಕಲಾವಿದೆಯರು ಪ್ರಾತಿನಿಧ್ಯ ಪಡೆದಿದ್ದಾರೆ. ಆದರೂ ಕಲಾವಿದೆಯರಿಗೆ ಗೌರವ, ಘನತೆ ಸಿಗಬೇಕು ಎಂದು ಪ್ರತಿಪಾದಿಸಿದರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ವೇದಿಕೆ ಮೇಲಿದ್ದರು

ಶೃತಿರಾಜ್ ರಂಗಗೀತೆಗಳನ್ನು ಹಾಡಿದರು. ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ರವಿಚಂದ್ರ ಸ್ವಾಗತಿಸಿದರು. ರಂಗಕರ್ಮಿ ಸಿದ್ಧರಾಜು ವಂದಿಸಿದರು.

TAGGED:Davanagere districtDavanagere NewsDinamana.comKannada news ದಾವಣಗೆರೆ ಜಿಲ್ಲೆಕನ್ನಡ ಸುದ್ದಿದಿನಮಾನ.ಕಾಂ
Share This Article
Twitter Email Copy Link Print
Previous Article Davanagere Davanagere | ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿ ಅಗತ್ಯ: ಸಂಸದೆ ಡಾ. ಪ್ರಭಾ
Next Article crime news Crime news | ದೇಶದ ಕುಖ್ಯಾತ ದರೋಡೆಕೋರರು ಅಂದರ್ | ಪ್ರಾಣದ ಹಂಗು ತೊರೆದು ಬಂಧಿಸಿದ ಹೊನ್ನಾಳಿ‌ -ನ್ಯಾಮತಿ  ಪೊಲೀಸರು !!

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow
- Advertisement -
Ad imageAd image

Popular Posts

ಶಾಮನೂರು ಎಂಬುದು ಜಾತಿ ನಿರಸನದ ‘ಮೋಸ್ಟ್ ಸೆಕ್ಯುಲರ್’ ಬ್ರಾಂಡ್ ನೇಮ್

ಶಾಮನೂರು ಎಂಬುದು ದಾವಣಗೆರೆ ನಗರಕ್ಕೆ ಲಗತ್ತಾಗಿರುವ ದಾವಣಗೆರೆ ಪರಿಸರದ ಒಂದು ಚಿರಪರಿಚಿತ‌ ಊರಿನ ಹೆಸರು. ಶಾಮನೂರು ಶಿವಶಂಕರಪ್ಪ ಈ ಊರಿನವರಲ್ಲ. ಪರಂತು…

By Dinamaana Kannada News

ತುಂಗಭದ್ರಾ ನದಿಯಲ್ಲಿನ ಪ್ರವಾಹ ನಿರೀಕ್ಷೆ :  ಸನ್ನದ್ದವಾಗಿರಲು ಡಿಸಿ ಸೂಚನೆ

ದಾವಣಗೆರೆ,ಜುಲೈ.23 :   ಮಲೆನಾಡಿನ ಭಾಗದಲ್ಲಿ ಸಾಕಷ್ಟು ಮಳೆಯಾಗುತ್ತಿರುವುದರಿಂದ ತುಂಗಭದ್ರಾ ನದಿಯಲ್ಲಿ ಹೆಚ್ಚು ನೀರು ಬರಬಹುದೆಂದು ಅಂದಾಜಿಸಿ ನದಿ ಪ್ರವಾಹದಿಂದ ಮುಳುಗಡೆಯಾಗುವ…

By Dinamaana Kannada News

Job fair | ಉದ್ಯೋಗ ಮೇಳ

ದಾವಣಗೆರೆ ಡಿ.16 (Davanagere)  : ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ವತಿಯಿಂದ ಡಿಸೆಂಬರ್ 20 ರಂದು ಬೆಳಿಗ್ಗೆ 10…

By Dinamaana Kannada News

You Might Also Like

heart attack
ತಾಜಾ ಸುದ್ದಿ

ದಾವಣಗೆರೆ | ಹೃದಯಾಘಾತದಿಂದ ಆಟೋ ಚಾಲಕ ಸಾವು

By Dinamaana Kannada News
Davanagere
ತಾಜಾ ಸುದ್ದಿ

ದಾವಣಗೆರೆ | ಬೀದಿನಾಟಕ, ಜಾನಪದ ಸಂಗೀತ ಕಲಾತಂಡಗಳಿಂದ ಅರ್ಜಿ ಆಹ್ವಾನ

By Dinamaana Kannada News
Harihara
ತಾಜಾ ಸುದ್ದಿ

ಹರಿಹರ | ವಿವಿಧ ಸೌಲಭ್ಯಗಳ್ನು ಪಡೆಯಲು ಅರ್ಜಿ ಆಹ್ವಾನ

By Dinamaana Kannada News
District Congress Davanagere
ತಾಜಾ ಸುದ್ದಿ

ದಾವಣಗೆರೆ | ಬಾಬೂಜೀ ಸಾಧನೆಗಳು ಅಪಾರ : ಕೆ.ಜಿ. ಶಿವಕುಮಾರ್

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?