ಹರಿಹರ (Davangere District) : ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಆಗಿ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ 2013ರಲ್ಲಿ ಜಾರಿಗೆ ಬಂದಿತು. ಕಾನೂನು ಮ್ಯಾನುಯಲ್ ಸ್ಕ್ಯಾವೆಂಜರ್‍ಗಳನ್ನು ನೇಮಿಸಿಕೊಳ್ಳುವುದು, ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‍ಗಳನ್ನು ರಕ್ಷಣಾ ಸಾಧನಗಳಿಲ್ಲದೆ ಹಸ್ತಚಾಲಿತವಾಗಿ ಸ್ವಚ್ಛಗೊಳಿಸುವುದು ಮತ್ತು ಅಸ್ವಸ್ಥ ಶೌಚಾಲಯಗಳ ನಿರ್ಮಾಣವನ್ನು ನಿಷೇದ ಮಡಿದೆ ಎಂದು ಡಿಎಂಎ ಕಚೇರಿಯ ಕೋ-ಅರ್ಡಿನೇಟರ್ ವಿಜಯಲಕ್ಷ್ಮಿ ಹೇಳಿದರು.
ನಗರಸಭೆ ಸಭಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಹಣಕಾಸು & ಅಭಿವೃದ್ಧಿ ನಿಗಮ ಪೌರಾಡಳಿತ ನಿರ್ದೇಶನಾಲಯ ಮತ್ತು ದಾವಣಗೆರೆ ಜಿಲ್ಲಾಡಳಿತ ಹಾಗೂ ಹರಿಹರ ನಗರಸಭೆ ಇವರ ಸಂಯೋಗದೊಂದಿಗೆ “ನಮಸ್ತೆ” ಯೋಜನೆಯಡಿ ಒಳಚರಂಡಿ ಮತ್ತು ಸೇಫ್ಟಿಕ್ ಟ್ಯಾಂಕ್ಗಳು ಸ್ವಚ್ಛಗೊಳಿಸುವ ಕುರಿತು ಕಾರ್ಯಗಾರವನ್ನು ಉದ್ದೇಶಿಸಿ ಮಾತನಾಡಿದ ಅವರು, ನಗರ ಸ್ಥಳೀಯ ಸಂಸ್ಥೆಗಳಿಂದ ಉತ್ತಮವಾದ ರಕ್ಷಾ ಕವಚ, ಸಮವಸ್ತ್ರ, ಉದ್ದನೆಯ ಶೂ, ಹ್ಯಾಂಡ್ ಗ್ಲೌಸ್, ಬೆಳಗಿನ ಉಪಹಾರ ಸೌಲಭ್ಯಗಳನ್ನು ಕಲ್ಪಿಸಬೇಕೆಂದು ಸೂಚನೆ ನೀಡಿದರು. ನಗರದ ಸ್ವಚ್ಛತೆ ಮತ್ತು ಸೌಂದರ್ಯೀಕರಣಕ್ಕೆ ಶ್ರಮಿಸುತ್ತಿರುವ ಪೌರಕಾರ್ಮಿಕರ ಸೇವೆ ಶ್ಲಾಘನೀಯವೆಂದು ಎಂದರು.
Read also : Davanagere news | ನಾಯಿಗಳ ಹಾವಳಿ : ನಗರಸಭಾ ಸದಸ್ಯರಿಂದ ನಗರಸಭೆ ಕಚೇರಿಗೆ ಬೀಗ
ಮ್ಯಾನ್‍ಹೋಲ್ ಸ್ವಚ್ಛತೆಗೆ ಯಂತ್ರ ಬಳಸಿ ಕೊಳಚೆ ಪ್ರದೇಶ, ಮ್ಯಾನ್‍ಹೋಲ್‍ಗಳನ್ನು ಸ್ವಚ್ಛಗೊಳಿಸಲು ಮಾನವ ಸಂಪನ್ಮೂಲ ಬಳಸದೆ ಕಡ್ಡಾಯವಾಗಿ ಯಂತ್ರಗಳನ್ನು ಬಳಸಬೇಕು. ಆಧುನಿಕ ತಂತ್ರಜ್ಞಾನ ಯಂತ್ರಗಳನ್ನು ಬಳಕೆ ಮಾಡಿ ಸ್ವಚ್ಛತಾ ಕಾರ್ಯಕ್ಕೆ ಜನರನ್ನು ಬಳಕೆ ಮಾಡುವುದನ್ನು ಕೈಬಿಡಿ. ಮ್ಯಾನ್‍ಹೋಲ್‍ಗಳ ಸ್ವಚ್ಛತೆಗೆ ಜನರನ್ನು ಬಳಸಿದ್ದು ಕಂಡುಬಂದರೆ ತಕ್ಷಣವೇ ಪೆÇಲೀಸ್ ಇಲಾಖೆಗೆ ದೂರು ದಾಖಲಿಸಿ ಕಾನೂನಾತ್ಮಕ ಕ್ರಮಕೈಗೊಳ್ಳಿ ಎಂದು ಸೂಚನೆ ನೀಡಿದರು.
ಯೋಜನಾ ನಿರ್ದೇಶಕ ಮಾಲತೇಶ್ ಮಾತನಾಡಿ ನಗರ ಸ್ವಚ್ಛತೆಯಲ್ಲಿ ಪೌರಕಾರ್ಮಿಕರು ಪಾತ್ರ ಮಹತ್ವದು, 2013ರಲ್ಲಿ ಸಫಾಯಿ ಕರ್ಮಚಾರಿ ಕಾಯ್ದೆ ಜಾರಿಗೊಳಿಸಲಾಗಿದ್ದು, ಪೌರಕಾರ್ಮಿಕರು ಪುನರವಸತಿ ಸೌಲಭ್ಯ ಪಡೆದುಕೊಳ್ಳಬೇಕು. ಕಾರ್ಮಿಕರು ಆರೋಗ್ಯಕ್ಕೆ ಹೆಚ್ಚಿನ ಒತ್ತು ನೀಡಿ ಸ್ವಚ್ಛತಾ ಕಾರ್ಯದಲ್ಲಿ ನಿರತರಾಗಬೇಕೆಂದು ಸಲಹೆ ನೀಡಿದರು. ಪೌರಕಾರ್ಮಿಕರು ಅನಾರೋಗ್ಯಕ್ಕೆ ತುತ್ತಾಗದೆ ತಮ್ಮ ಆರೋಗ್ಯವನ್ನು ಕಾಪಾಡಿಕೊಂಡು ನಗರದ ಸ್ವಚ್ಛತೆ, ಆರೋಗ್ಯ ಕಾಪಾಡುವಲ್ಲಿ ಮುಂಚೂಣಿಯಲ್ಲಿರುವ ಪೌರ ಕಾರ್ಮಿಕರು ಸ್ವಂತ ಮತ್ತು ಅವರ ಕುಟುಂಬದ ಸ್ವಚ್ಛತೆ ಹಾಗೂ ಆರೋಗ್ಯಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ನಗರಸಭೆ ಪೌರಾಯುಕ್ತ ಸುಬ್ರಹ್ಮಣ್ಯ ಶೆಟ್ಟಿ ಮಾತನಾಡಿ, ಪೌರಕಾರ್ಮಿಕರು ಮಾಡುವ ಕೆಲಸ ದೇವರು ಕೆಲಸವಾಗಿದೆ. ಬೆಳೆಗ್ಗಿನ ಜಾವ 5 ಗಂಟೆಯಿಂದಲೇ ನಗರದ ವಿವಿಧ ಬಡಾವಣೆಯಲ್ಲಿ ಬಿಸಾಡಿರುವ ಕಸ ವಿಲೇವಾರಿ, ಒಳಚರಂಡಿ ಸ್ವಚ್ಛತೆ ಸೇರಿದಂತೆ ಇನ್ನಿತರ ಸ್ವಚ್ಛತಾ ಕಾರ್ಯದಲ್ಲಿ ಪೌರಕಾರ್ಮಿಕರು ನಿರತರಾಗಿರುತ್ತಾರೆ. ಪೌರಕಾರ್ಮಿಕರು ಸರ್ಕಾರದ ವಿವಿಧ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಹಾಗೂ ಪೌರಕಾರ್ಮಿಕರು, ಸಫಾಯಿ ಕರ್ಮಚಾರಿಗಳು ಅಗತ್ಯವಿರುವ ಸುರಕ್ಷತಾ ವಸ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸಬೇಕೆಂದರು.
ಇದೆ ವೇಳೆ ಡಿಎಂಎ ಕಚೇರಿಯ ಕೋ-ಆರ್ಡಿನೇಟರ್ ವಿದ್ಯ ಕಾಳಮ್ಮ, ಐಈಡಿ ಕಂಪನಿ ಕೋ-ಆರ್ಡಿನೇಟರ್ ಲೋಕೇಶ್,
ಹಿರಿಯ ಆರೋಗ್ಯ ನಿರೀಕ್ಷಕ ಸಂತೋಷ್, ರವಿಪ್ರಕಾಶ್, ವ್ಯವಸ್ಥಾಪಕ ಶಿವಕುಮಾರ್, ಕರಿಯಪ್ಪ, ಇಂಜಿನಿಯರ್ ಪ್ರಕಾಶ್ ಹರಿಹರ ರೈಲ್ವೆ ನಿಲ್ದಾಣದ ಸ್ವಚ್ಛತೆಯ ಸಿಬ್ಬಂದಿಗಳು ಹಾಗೂ ನಗರಸಭೆ ಯುಜಿಡಿ, ಪೌರ ಕಾರ್ಮಿಕರು ಇದ್ದರು.