Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ತಾಜಾ ಸುದ್ದಿ > ನೀರ್ಥಡಿ ಗ್ರಾಮ ಪ್ರವಾಸಿ ತಾಣವಾಗಲಿ : ಶಾಸಕ ಕೆ.ಎಸ್.ಬಸವಂತಪ್ಪ 
ತಾಜಾ ಸುದ್ದಿ

ನೀರ್ಥಡಿ ಗ್ರಾಮ ಪ್ರವಾಸಿ ತಾಣವಾಗಲಿ : ಶಾಸಕ ಕೆ.ಎಸ್.ಬಸವಂತಪ್ಪ 

Dinamaana Kannada News
Last updated: May 19, 2025 11:57 am
Dinamaana Kannada News
Share
Davanagere
Davanagere
SHARE
ದಾವಣಗೆರೆ (Davangere): ಮದಕರಿ ನಾಯಕನ ಆಳ್ವಿಕೆಯ ಕಾಲದಲ್ಲಿ ನಿರ್ಮಾಣಗೊಂಡಿರುವ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಸ್ಥಾನ ಇದ್ದು, ಪ್ರವಾಸಿ ತಾಣವಾಗಬೇಕಿದೆ ಎಂದು ಶಾಸಕ ಕೆ.ಎಸ್.ಬಸವಂತಪ್ಪ ಹೇಳಿದರು.
ಮಾಯಕೊಂಡ ಕ್ಷೇತ್ರದ ವ್ಯಾಪ್ತಿಯ ನೀರ್ಥಡಿ ಗ್ರಾಮದಲ್ಲಿ ಸೋಮವಾರ  ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಆಂಜನೇಯ ದೇವಸ್ಥಾನ ನಿರ್ಮಾಣಕ್ಕೆ 15 ಲಕ್ಷ ರೂ. ಬಿಡುಗಡೆ ಮಾಡಿದ್ದು, ಗ್ರಾಮಸ್ಥರೆಲ್ಲರೂ ಸಹಕಾರ ನೀಡುವ ಮೂಲಕ ದೇವಸ್ಥಾನ ನಿರ್ಮಾಣಕ್ಕೆ ಕೈಜೋಡಿಸಬೇಕೆಂದರು.
ನೀರ್ಥಡಿ ಗ್ರಾಮ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಸ್ಥಾನದಿಂದ ಪ್ರಸಿದ್ಧಿ ಪಡೆದಂತೆ. ಅದರಂತೆ ಗ್ರಾಮದಲ್ಲಿ ಅನೇಕ ದೇವಸ್ಥಾನಗಳು ಇವೆ. ಇದರಲ್ಲಿ ಪ್ರಮುಖವಾಗಿರುವುದು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ. ಏಕೆಂದರೆ ಊರು ಕಾಯುವ ದೇವರೆಂದರೆ ಅದು  ಶ್ರೀ ಆಂಜನೇಯ ಸ್ವಾಮಿ ಆಗಿದ್ದು, ಭಕ್ತರು ಬಂದು ದೇವರ ದರ್ಶನ ಪಡೆಯಲು ಅನುಕೂಲವಾಗುವ ರೀತಿಯಲ್ಲಿ ದೇವಸ್ಥಾನ ನಿರ್ಮಾಣ ಮಾಡಬೇಕೆಂದರು.
ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಹೆಬ್ಬಾಳು ವಿರಕ್ತಮಠದ ಶ್ರೀ ಮಹಾಂತರುದ್ರ ಮಹಾಸ್ವಾಮಿಗಳು, ಶಾಸಕರು 15 ಲಕ್ಷ ರೂ ಅನುದಾನ ಬಿಡುಗಡೆ ಮಾಡಿದ್ದು, ಕೆಡಿಮೆ ಬಂದರೆ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅದರ ಜೊತೆಗೆ ನಮ್ಮದು ಬಡ ಹಳ್ಳಿ ಎಂದು ಇಲ್ಲಿನ ಮುಖಂಡರು ಹೇಳಿದ್ದಾರೆ.
Read also : Political Analysis | ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ
ಆದರೆ ನೀರ್ಥಡಿ ಗ್ರಾಮದಲ್ಲಿ ಎಲ್ಲರೂ ಎರಡು ಎಕರೆ, ಮೂರು ಎಕರೆ, ಐದು ಎಕರೆ, ಹತ್ತು ಎಕರೆ ಅಡಿಕೆ ತೋಟಗಳು ಇವೆ. ಹೀಗಿರುವಾಗ ನೀವು ಏಕೆ ಬಡವರಾಗಿತ್ತೀರಿ. ನೀವು ಶ್ರೀಮಂತರಿದ್ದೀರಿ. ಸರ್ಕಾರದ ಅನುದಾನ ಕಾಯದೆ ನೀವೆಲ್ಲರೂ ಸೇರಿ ದೇವಸ್ಥಾನ ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ದೇವಸ್ಥಾನ ನಿರ್ಮಾಣಕ್ಕೆ ಧನ ಸಹಾಯ ಮಾಡುವ ಮೂಲಕ ಕೈಜೋಡಿಸುವಂತೆ ಸಲಹೆ ನೀಡಿದರು.
ನೀರ್ಥಡಿ ಗ್ರಾಮದಿಂದ ಮಾಯಕೊಂಡಕ್ಕೆ ನೇರವಾಗಿ ಸಂಪರ್ಕ ಕಲ್ಪಿಸುವ ರಸ್ತೆ ಅಭಿವೃದ್ಧಿ ಮಾಡುವುದಾಗಿ ಶಾಸಕರು ಈ ಹಿಂದಿಯೇ ಭರವಸೆ ನೀಡಿದ್ದರು. ಈ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಸಿ ಇಲ್ಲಿನ ಜನರಿಗೆ ಅನುಕೂಲ ಕಲ್ಪಿಸಬೇಕು. ಅಷ್ಠೇ ಅಲ್ಲದೇ ಮಳೆ ಬಂದಾಗ ನೀರು ಹುಣಿಸೆಕಟ್ಟೆ ಗ್ರಾಮಕ್ಕೆ ನುಗ್ಗುತ್ತದೆ. ಮಳೆ ನೀರು ತಡೆಗಟ್ಟುವ ಬಗ್ಗೆ ಗಮನ ಹರಿಸಬೇಕೆಂದರು.
ಈ ಸಂದರ್ಭದಲ್ಲಿ ಗ್ರಾಪಂ ಮಾಜಿ ಸದಸ್ಯರಾದ ಶಿವಣ್ಣ , ಬಸಣ್ಣ,ಗ್ರಾಪಂ ಸದಸ್ಯ ನಾಗಣ್ಣ, ಮುಖಂಡರಾದ ದೇವೇಂದ್ರಪ್ಪ, ಸಿರಿಸ್ವಾಮಿ,ಮಂಜುನಾಥ್ , ಪ್ರಭಣ್ಣ,  ಬಸಣ್ಣ, ನಾಗರಾಜ್ , ಭೀರಣ್ಣ ,ಲೋಕೇಶ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಸ್ಥಾನ ಅವ್ಯವಸ್ಥೆಗೆ ಬೇಸರ..
ಇದೇ ಸಂದರ್ಭದಲ್ಲಿ ಗ್ರಾಮದಲ್ಲಿರುವ ಮದಕರಿ ನಾಯಕರ ಅವಧಿಯ ಐತಿಹಾಸಿಕ ದೇವಾಲಯ ಶ್ರೀ ರಂಗನಾಥ ಸ್ವಾಮಿ ದೇವಾಲಯಕ್ಕೆ ಭೇಟಿ ನೀಡಿದ ಶಾಸಕ ಕೆ.ಎಸ್.ಬಸವಂತಪ್ಪ ದೇವರ ದರ್ಶನ ಮಾಡಿದರು. ಬಳಿಕ ದೇವಸ್ಥಾನದ  ಅವ್ಯವಸ್ಥೆ ನೋಡಿ ಬೇಸರ ವ್ಯಕ್ತ ಪಡಿಸಿದರು. ಬಳಿಕ ಗ್ರಾಮಸ್ಥರೊಂದಿಗೆ ದೇವಸ್ಥಾನದ ಅಭಿವೃದ್ಧಿ ಬಗ್ಗೆ ಚರ್ಚೆ ನಡೆಸಿದರು.
TAGGED:Davanagere districtDavanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Political analysis Political Analysis | ಶುರುವಾಗಲಿದೆ ನಿಖಿಲ್ ಪಟ್ಟಾಭಿಷೇಕ ಯಾತ್ರೆ
Next Article ksrtc ksrtc bus | ಮೇ.20 ರಂದು ಸಾರಿಗೆ ಬಸ್ಸುಗಳ ಸಂಚಾರದಲ್ಲಿ ವ್ಯತ್ಯಯ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere news | ಕುರ್ಕಿ ಬಳಿ ಭದ್ರಾ ಕಾಲುವೆಯ ಸೇತುವೆ ಕುಸಿತ : ಸ್ಥಳಕ್ಕೆ ದೌಡಾಯಿಸಿದ ಶಾಸಕ ಬಸವಂತಪ್ಪ, ಪರಿಶೀಲನೆ

ದಾವಣಗೆರೆ (Davanagere) : ತಾಲೂಕಿನ ಕುರ್ಕಿ ಗ್ರಾಮದ ಬಳಿ ಹರಿಯುತ್ತಿರುವ ಭದ್ರಾ ಕಾಲುವೆಯ 6/3ನೇ ಸೇತುವೆ ಮಂಗಳವಾರ ಕುಸಿದು ಬಿದ್ದಿದ್ದು,…

By Dinamaana Kannada News

DAVANAGERE | ವೃತ್ತಿ ನಾಟಕ ಶಿಬಿರಕ್ಕೆ ಅರ್ಜಿ ಆಹ್ವಾನ

ದಾವಣಗೆರೆ ಡಿ.21 (Davanagere) : ವೃತ್ತಿ ರಂಗಭೂಮಿ ರಂಗಾಯಣ ಕೇಂದ್ರ ಹಾಗೂ ಕರ್ನಾಟಕ ನಾಟಕ ಅಕಾಡೆಮಿಯ ಸಹಯೋಗದೊಂದಿಗೆ 5 ದಿನಗಳ…

By Dinamaana Kannada News

ಪರಿಶಿಷ್ಟ ಪಂಗಡದ ಕಾನೂನು ಪದವೀಧರರ ವೃತ್ತಿ ತರಬೇತಿ ಅರ್ಜಿ ಆಹ್ವಾನ

ದಾವಣಗೆರೆ .ಜೂ.15   :  ಆಡಳಿತ  ನ್ಯಾಯಧೀಕರಣದಲ್ಲಿ ಪರಿಶಿಷ್ಟ ವರ್ಗದ ಕಾನೂನು ಪದವೀಧರರಿಗೆ ವೃತ್ತಿ ಕಾನೂನು ತರಬೇತಿ ನೀಡಲು ಕಾನೂನು ಪದವಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ತೊಗರಿಬೇಳೆ- ಕಬ್ಬಿಗೆ ಬೆಂಬಲ ಬೆಲೆ ನಿಗದಿಗೆ ಒತ್ತಾಯ:ಸಿಎಂ‌ ಪತ್ರದೊಂದಿಗೆ ಕೇಂದ್ರ ಸಚಿವರಿಗೆ ಮನವಿ ನೀಡಿದ ಸಂಸದರ ನಿಯೋಗ

By Dinamaana Kannada News
Davanagere
Blog

ಕೃಷಿ ಉತ್ಪಾದಕತೆಯ ಮೇಲೆ ಹವಾಮಾನ ಬದಲಾವಣೆಯ ಕ್ರಮ : ಕೃಷಿ ಸಚಿವಾಲಕ್ಕೆ ಮಾಹಿತಿ ಕೇಳಿದ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್

By Dinamaana Kannada News
Dr. B Shivakumar
ಆರೋಗ್ಯ

ಜಿಗಣೆ ಚಿಕಿತ್ಸೆಅದರ ಔಷಧೀಯ ಮಹತ್ವ: ಡಾ.ಬಿ.ಶಿವಕುಮಾರ್

By ಡಾ.ಬಿ. ಶಿವಕುಮಾರ್
Mallikarjuna Kadakola
ತಾಜಾ ಸುದ್ದಿ

ಕಡಕೋಳ ನೆಲದ ನೆನಪುಗಳು ಕೃತಿಗೆ ರಾಷ್ಟ್ರೀಯ ಪುರಸ್ಕಾರ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?