ದಾವಣಗೆರೆ : ಸಾರ್ವಜನಿಕ ರಸ್ತೆ ಮೇಲೆ ಬಾಲಕನಿಗೆ ಆಟೋರಿಕ್ಷಾ ಚಾಲಾಯಿಸಲು ನೀಡಿದ ಆಟೋ ರೀಕ್ಷಾ ಮಾಲೀಕನಿಗೆ ಟ್ರಾಫೀಕ್ ಪೊಲೀಸರು ಇಂಡಿಯನ್ ಮೋಟಾರ್ ವೆಹಿಕಲ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು 26 ಸಾವಿರ ರೂ ದಂಡ ವಿಧಿಸಿದ್ದಾರೆ.
ನಗರದಲ್ಲಿ ಅಪ್ರಾಪ್ತ ವಯಸ್ಕರು ವಾಹನ ಚಾಲನೆ ಮಾಡುವುದನ್ನು ತಡೆಯಲು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಸೂಚನೆಯಂತೆ ದಾವಣಗೆರೆ ಟ್ರಾಫಿಕ್ ಪೊಲೀಸ್ ಸಿಪಿಐ ನಲವಾಗಲು ಮಂಜುನಾಥ್ ರವರ ನೇತೃತ್ವದಲ್ಲಿ ಉತ್ತರ ಸಂಚಾರ ಠಾಣೆ ಪಿಎಸ್‌ಐ ಗಳೊಂದಿಗೆ ವಿಶೇಷ ಕಾರ್ಯಾಚರಣೆ ನಡೆಸಿ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ರಹೀಮ್ ವಿಮೆ ಚಾಲ್ತಿ ಇಲ್ಲದ ಆಟೋರಿಕ್ಷಾ ವನ್ನು ಅಪ್ರಾಪ್ತ ವಯಸ್ಸಿನ (17 ವರ್ಷದ ಬಾಲಕ) ಬಾಲಕನಿಗೆ ಸಾರ್ವಜನಿಕ ರಸ್ತೆ ಮೇಲೆ ಚಲಾಯಿಸಲು ನೀಡಿದ್ದರು.
ಆಟೋ ರೀಕ್ಷಾ ವಶಕ್ಕೆ ಪಡೆದು ದಾವಣಗೆರೆ ನ್ಯಾಯಾಲಯಕ್ಕೆ ಆಟೋ ರೀಕ್ಷಾ ಮಾಲೀಕರಾದ ರಹೀಂ ಮೇಲೆ ದೋಷಾರೋಪಣೆ ಪತ್ರ ಸಲ್ಲಿಸಿದ್ದು, ಅದಕ್ಕೆ ನ್ಯಾಯಾಲಯವು ಆರೋಪಿ ಆಟೋ ರೀಕ್ಷಾ ಮಾಲೀಕ ತನ್ನ ಆಟೋವನ್ನು ಅಪ್ರಾಪ್ತ ವಯಸ್ಕನಿಗೆ ಚಾಲನೆ ಮಾಡಲು ಕೊಟ್ಟಿದ್ದಕ್ಕೆ ಆಟೋ ರೀಕ್ಷಾ ಮಾಲೀಕನಿಗೆ 26,000/- ರೂಗಳ ದಂಡ ವಿಧಿಸಿದೆ.
ಆದ್ದರಿಂದ ಅಪ್ರಾಪ್ತ ವಯಸ್ಸಿನ ಮಕ್ಕಳ ಕೈಗೆ ವಾಹನ ಚಾಲನೆ ಮಾಡಲು ಕೊಡುವ ಪಾಲಕರಿಗೆ, ವಾಹನ ಮಾಲೀಕರಿಗೆ ದಾವಣಗೆರೆ ಸಂಚಾರ ಪೊಲೀಸರು ಬಿಸಿ ಮುಟ್ಟಿಸಿ ಅರಿವು ಮೂಡಿಸಿದ್ದಾರೆ. ಇದೇ ರೀತಿ ಸಂಚಾರ ನಿಯಮ ಉಲ್ಲಂಘನೆ ಮಾಡುವ ಸವಾರರ ಮೇಲೆ ವಿಶೇಷ ಕಾರ್ಯಾಚರಣೆ ನಡೆಸಿ ಕ್ರಮ ಜರುಗಿಸಲಾಗುವುದು ಹಾಗೂ ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಪೊಲೀಸ್ ಅಧೀಕ್ಷಕರು ತಿಳಿಸಿರುತ್ತಾರೆ.