ಬೆಂಗಳೂರು : ರಾಷ್ಟ್ರಕೂಟ ಪಿಕ್ಚರ್ಸ್ ಲಾಂಛನದಲ್ಲಿ ವಿ.ರವಿಕುಮಾರ್ ಹಾಗೂ ಶಂಶುದ್ದೀನ್ ಎ ನಿರ್ಮಾಣ ಮಾಡಿರುವ ಅಂಬರೀಶ್ ಎಂ ನಿರ್ದೇಶನದ “ನಾಟ್ ಔಟ್” ಸಿನಿಮಾ ಈ ವಾರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.
ನಾಯಕನಟನಾಗಿ ಅಜಯ್ ಪೃಥ್ವಿ, ನಾಯಕಿಯಾಗಿ ರಚನಾ ಇಂದರ್, ರವಿಶಂಕರ್, ಕಾಕ್ರೋಜ್ ಸುಧಿ, ಗೋಪಾಲಕೃಷ್ಣ ದೇಶಪಾಂಡೆ, ಸಲ್ಮಾನ್, ಗೋವಿಂದೇಗೌಡ, ಪ್ರಶಾಂತ್ ಸಿದ್ದಿ ಮುಂತಾದವರು ತಾರಾಬಳಗದಲ್ಲಿದ್ದಾರೆ. ಜ್ಯೂಡಾ ಸ್ಯಾಂಡಿ ಸಂಗೀತ ನಿರ್ದೇಶನ, ಹಾಲೇಶ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ ಈ ಚಿತ್ರಕ್ಕಿದೆ. “ನಾಟ್ ಔಟ್” ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಮೂಲಕ ಸದ್ದು ಮಾಡಿದೆ.
ಡಾರ್ಕ್ ಹ್ಯೂಮರ್ ಶೈಲಿಯ ವಿಭಿನ್ನವಾದ ಚಿತ್ರ ಇದ್ದಾಗಿದ್ದು, ಬೆಂಗಳೂರು -ಮೈಸೂರು ಮತ್ತು ಹಲವರು ಜಾಗಗಳು ಚಿತ್ರೀಕರಣ ಮಾಡಲಾಗಿದೆ.