Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Font ResizerAa
  • ತಾಜಾ ಸುದ್ದಿ
  • ಸಿನಿಮಾ
  • ಅಭಿಪ್ರಾಯ
  • ಅಪರಾಧ ಸುದ್ದಿ
  • ವಿಶ್ವ
  • ಆರೋಗ್ಯ
  • ತಂತ್ರಜ್ಞಾನ
  • ಪ್ರಯಾಣ
  • ರಾಜಕೀಯ
  • Blog
Font ResizerAa
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking NewsDinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
  • ತಾಜಾ ಸುದ್ದಿ
  • ಅಪರಾಧ ಸುದ್ದಿ
  • My Saves
  • My Saves
  • My Interests
  • My Interests
  • My Feed
  • My Feed
  • History
  • ಪ್ರಯಾಣ
  • ಅಭಿಪ್ರಾಯ
  • ರಾಜಕೀಯ
  • ಆರೋಗ್ಯ
  • ತಂತ್ರಜ್ಞಾನ
  • ವಿಶ್ವ
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests
Have an existing account? Sign In
Follow US
© 2025 Dinamaana News.All Rights Reserved.
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News > Blog > ಆರೋಗ್ಯ > ನವೆಂಬರ್19 ವಿಶ್ವ ಸಿಓಪಿಡಿ”ಶ್ವಾಸಕೋಶದ ದೀರ್ಘ ಅಡಚಣೆಯ ಕಾಯಿಲೆ”: ಲೇಖನ  ಡಾ.ಎನ್.ಹೆಚ್.ಕೃಷ್ಣ, 
ಆರೋಗ್ಯ

ನವೆಂಬರ್19 ವಿಶ್ವ ಸಿಓಪಿಡಿ”ಶ್ವಾಸಕೋಶದ ದೀರ್ಘ ಅಡಚಣೆಯ ಕಾಯಿಲೆ”: ಲೇಖನ  ಡಾ.ಎನ್.ಹೆಚ್.ಕೃಷ್ಣ, 

Dinamaana Kannada News
Last updated: November 19, 2025 5:15 am
Dinamaana Kannada News
Share
Davanagere
SHARE
1)ಸಿಓಪಿಡಿ ಕಾಯಿಲೆ ಎಂದರೇನು?
ಇದು ಶ್ವಾಸಕೋಶಕ್ಕೆ ಸಂಬಂಧಿಸಿದ ಕಾಯಿಲೆ. ಇದರಲ್ಲಿ ಅತಿಯಾದ ಕಫ ಸೃಷ್ಟಿಯಾಗುವಿಕೆ, ತೀವ್ರ ಉಬ್ಬಸ ಮತ್ತು ಕ್ಷೀಣಿಸುತ್ತಾ ಹೋಗುವ ಶ್ವಾಸಕೋಶದ ಶಕ್ತಿ ಪ್ರಮುಖ ಲಕ್ಷಣಗಳು.
2) ಸಿಓಪಿಡಿ ಕಾಯಿಲೆ ಅಸ್ತಮ ಕಾಯಿಲೆಗಿಂತ ಹೇಗೆ ಭಿನ್ನ? 
ಅಸ್ತಮ ಕಾಯಿಲೆಯು ಮಕ್ಕಳಲ್ಲಿ ಹಾಗೂ ಸಣ್ಣ ವಯಸ್ಸಿನವರಲ್ಲಿ ಕಂಡುಬರುತ್ತದೆ. ಆದರೆ ಸಿಓಪಿಡಿ ಕಾಯಿಲೆಯು 30 ಅಥವಾ 40 ವರ್ಷ ಮೇಲ್ಪಟ್ಟವರಲ್ಲಿ ಕಂಡು ಬರುತ್ತದೆ. ಸರಿಯಾದ ಹಾಗೂ ಸತತವಾದ ಚಿಕಿತ್ಸೆಯಿಂದ ಅಸ್ತಮ ಕಾಯಿಲೆಯಲ್ಲಿ ಶ್ವಾಸಕೋಶದ ಕಳೆದುಕೊಂಡ ಶಕ್ತಿ ಮರಳಿ ಪಡೆಯಲು ಸಾಧ್ಯವಿದೆ. ಆದರೆ ಸಿಓಪಿಡಿ ಕಾಯಿಲೆಯಲ್ಲಿ ಸತತವಾದ ಚಿಕಿತ್ಸೆಯಿಂದ ಉತ್ತಮ ಆಗಬಹುದು ಆದರೆ ಕಳೆದುಕೊಂಡ ಶ್ವಾಸಕೋಶದ ಶಕ್ತಿಯನ್ನು ಸಂಪೂರ್ಣ ಮರಳಿ ಪಡೆಯಲು ಸಾಧ್ಯವಿಲ್ಲ.
3) ಸಿಓಪಿಡಿ ಕಾಯಿಲೆ ಬರಲು ಕಾರಣವೇನು? 
ದೀರ್ಘಕಾಲ ಕಾಡುವ ಅನಿಯಂತ್ರಿತ ಅಸ್ತಮ, ಧೂಮಪಾನ, ವಾತಾವರಣದಲ್ಲಿ ಅತ್ಯಂತ ಸಣ್ಣ ಕಣಗಳು ಇರುವಂತಹ ಸ್ಥಳದಲ್ಲಿ ಕೆಲಸ ಮಾಡುವುದು (ಉದಾಹರಣೆಗೆ ಹತ್ತಿ ಗಿರಣಿ, ಕಲ್ಲಿದ್ದಲು ಗಣಿ ಇತ್ಯಾದಿ), ಹೊಗೆ ಇರುವಂತಹ ವಾತಾವರಣದಲ್ಲಿ ಕೆಲಸ ಮಾಡುವುದು ಇವೆಲ್ಲಾ ಸಿಓಪಿಡಿ ಕಾಯಿಲೆ ಬರಲು ಕಾರಣವಾಗುತ್ತದೆ.
4) ಸಿಓಪಿಡಿ ಕಾಯಿಲೆಗೆ ಚಿಕಿತ್ಸೆ ಹಾಗೂ ಪರಿಹಾರವೇನು? 
ಈ ಕಾಯಿಲೆಗೆ ಸತತ ಹಾಗೂ ಜೀವನಪರ್ಯಂತ ಇನ್ಹೇಲರ್ ಔಷಧಿಗಳು ಬೇಕಾಗುತ್ತವೆ. ತುಂಬಾ ಗಂಭೀರ ರೋಗಿಗಳಲ್ಲಿ ನೆಬುಲೈಸರ್ ಮಷೀನ್ ಮೂಲಕ ಔಷಧಿಗಳು ಕೊಡಬೇಕಾಗುತ್ತದೆ.
ಶ್ವಾಸಕೋಶದ ಲಘು ವ್ಯಾಯಾಮಗಳು, ಹೆಚ್ಚು ಪ್ರೋಟೀನ್ ಇರುವ ಆಹಾರ ಸೇವನೆ, ಮಿತವಾದ ವಾಕಿಂಗ್ ಕೂಡ ಒಳ್ಳೆಯದು. ಮುಖ್ಯವಾಗಿ ಧೂಮಪಾನಿಗಳಾಗಿದ್ದರೆ ಅದನ್ನು ತ್ಯಜಿಸುವುದು ಅತ್ಯಂತ ಮುಖ್ಯ.
Davanagere
5) ಸಿಓಪಿಡಿ ರೋಗಿಗಳಲ್ಲಿ ಸಹಾಯ ಮಾಡುವಂತಹ ವ್ಯಾಕ್ಸೀನ್ ಗಳು ಯಾವುದು? 
ಅತ್ಯಂತ ಪ್ರಮುಖವಾಗಿ ನ್ಯೂಮೋಕಾಕಲ್ ವ್ಯಾಕ್ಸೀನ್. ಇದನ್ನು 50 ರಿಂದ 60 ವರ್ಷ ಮೇಲ್ಪಟ್ಟವರಿಗೆ ನೀಡುತ್ತಾರೆ. ವಿಶೇಷವಾಗಿ ಸಿಓಪಿಡಿ ರೋಗಿಗಳು ಮಾರಣಾಂತಿಕ ನ್ಯೂಮೋನಿಯಾ ಕಾಯಿಲೆಗೆ ತುತ್ತಾಗದಂತಿರಲು ಇದು ತಡೆಗಟ್ಟುತ್ತದೆ.  ಇದರಲ್ಲಿ ಎರಡು ಬಗೆ, ಒಂದು ಐದು ವರ್ಷಕ್ಕೊಮ್ಮೆ ತೆಗೆದುಕೊಳ್ಳುವಂತಹುದು ಮತ್ತೊಂದು ಜೀವಮಾನಕ್ಕೆ ಒಂದೇ ಡೋಸ್ ತೆಗೆದುಕೊಳ್ಳುವಂತಹುದು. ಇದರ ಜೊತೆ ಪ್ರತಿವರ್ಷ ತೆಗೆದುಕೊಳ್ಳುವಂತಹ ಇನ್ಫ್ಲೂಎಂಜಾ ವ್ಯಾಕ್ಸಿನ್ ಕೂಡ ಪರಿಣಾಮಕಾರಿ. ಸರ್ಪ ಹುಣ್ಣು ತಡೆಗಟ್ಟುವಂತಹ ವ್ಯಾಕ್ಸೀನ್ ಕೂಡ ಸಹಾಯಕಾರಿ.
6)  ಸಿಓಪಿಡಿ ಕಾಯಿಲೆಯಲ್ಲಿ ಶ್ವಾಸಕೋಶಗಳಲ್ಲಿ  ಏನಾಗಿರುತ್ತದೆ? 
ನಮ್ಮ ಉಸಿರಾಟದ ನಾಳಗಳು ಹಿಗ್ಗುವ ಕುಗ್ಗುವ ಶಕ್ತಿಯನ್ನು ಕಳೆದುಕೊಂಡು ಬಿಡುತ್ತವೆ ಮತ್ತು ಕಫ ಸೃಷ್ಟಿ ಮಾಡುವ ಕಾರ್ಖಾನೆಗಳ ರೀತಿ ಕೆಲಸ ಮಾಡುತ್ತವೆ. ಶ್ವಾಸಕೋಶದ ಮೂಲ ರಚನೆ ಕೂಡ ಈ ಕಾಯಿಲೆಯಲ್ಲಿ ಹಾಳಾಗುತ್ತಾ ಹೋಗುತ್ತದೆ.

7) ಸಿಓಪಿಡಿ ಕಾಯಿಲೆಯನ್ನು ಪತ್ತೆ ಹಚ್ಚಲು ಮಾಡುವಂತಹ ಪರೀಕ್ಷೆಗಳು ಯಾವುವು? 

ಎಕ್ಸ್ ರೇ ಮತ್ತು ಸಿಟಿ ಸ್ಕ್ಯಾನ್:  ಇದರಿಂದ ಶ್ವಾಸಕೋಶದ ಮೂಲ ಆಕಾರದಲ್ಲಿ ಏನಾದರೂ ಹಾಳಾಗಿದ್ದರೆ ಅದು ಕಂಡು ಬರುತ್ತದೆ.

ಲಂಗ್ ಫಂಕ್ಷನ್ ಟೆಸ್ಟ್: ಇದು ಅತ್ಯಂತ ಪ್ರಮುಖ ಪರೀಕ್ಷೆ ಆಗಿದ್ದು ಇದರಲ್ಲಿ ಶ್ವಾಸಕೋಶದ ಶಕ್ತಿಯನ್ನು ಅಳೆಯಲು ಸಾಧ್ಯವಾಗುತ್ತದೆ.  ಅದರಲ್ಲೂ ಶ್ವಾಸಕೋಶಗಳ ನಾಳಗಳನ್ನು ಔಷಧಿ ಕೊಟ್ಟು ಕಿರಿದನ್ನು ಹಿರಿದು ಮಾಡಿ ಮತ್ತೆ ಶಕ್ತಿ ಅಳೆಯುವ ವಿಸ್ತೃತ ಪರೀಕ್ಷೆ ತುಂಬಾ ಸಹಾಯಕ.

ರಕ್ತ ಪರೀಕ್ಷೆ: ಇದರಲ್ಲಿ ಸಿಬಿಸಿ, ಸೆಲ್ ಕೌಂಟ್ ಹಾಗೂ ಈಎಸ್ಆರ್ ಪರೀಕ್ಷೆಗಳಿಂದ ಆಗಿರುವಂತಹ ಹಾನಿ ಮತ್ತು ಇನ್ಫೆಕ್ಷನ್ ಪ್ರಮಾಣಗಳನ್ನು ಅಳೆಯಬಹುದಾಗಿದೆ.

8) ಸಿಓಪಿಡಿ ಕಾಯಿಲೆಯಲ್ಲಿ ಕಂಡುಬರುವಂತ ಉಬ್ಬಸದ ವಿಭಿನ್ನ ತೀವ್ರ ಸ್ತರಗಳು ಯಾವುವು? 

  1. ಓಡಿದಾಗ ಬರುವ ಉಬ್ಬಸ. 
  2. ಮೆಟ್ಟಿಲು ಹತ್ತಿದಾಗ ಬರುವ ಉಬ್ಬಸ. 
  3. ಸಮ ಭೂಮಿಯಲ್ಲಿ ನೇರ ನಡೆದಾಗ ಬರುವ ಉಬ್ಬಸ. 
  4.  ಒಂದೇ ಕಡೆ ಕುಳಿತಿದ್ದರೂ ಅಥವಾ ಮಲಗಿದ್ದರೂ ಕೂಡ ಕಾಡುವ ಉಬ್ಬಸ. 

9) ಸಿಓಪಿಡಿ ಕಾಯಿಲೆ ಒಬ್ಬರಿಂದ ಒಬ್ಬರಿಗೆ ಹರಡುವುದೇ? ಅಥವಾ ಅನುವಂಶಿಕವಾಗಿ ಬರುವುದೇ?

ಈ ಕಾಯಿಲೆಯು ಅಸ್ತಮ ಕಾಯಿಲೆಯ ಹಾಗೆ ಅನುವಂಶಿಕವಾಗಿ ತಂದೆ ತಾಯಿಗಳಿಂದ ಮಕ್ಕಳಿಗೆ ಬರುವುದಿಲ್ಲ. ಈ ಕಾಯಿಲೆಯು ಟಿಬಿ ಕಾಯಿಲೆಯ ಹಾಗೆ ಒಬ್ಬರಿಂದ ಒಬ್ಬರಿಗೆ ಕೆಮ್ಮು ಮತ್ತು ಸೀನಿನಿಂದ ಹರಡುವುದಿಲ್ಲ.

10) ಸಿಓಪಿಡಿ ಕಾಯಿಲೆಯ ರೋಗಿಗಳು ಇನ್ನೂ ಬೇರೆ ಯಾವ ಕಾಯಿಲೆಗಳಿಗೆ ಸುಲಭವಾಗಿ ತುತ್ತಾಗಬಲ್ಲರು?   

ಕ್ಷಯ ರೋಗ, ನ್ಯೂಮೋನಿಯಾ, ಕೋವಿಡ್ ತರಹದ ವೈರಸ್ ಕಾಯಿಲೆಗಳು, ಇನ್ಫ್ಲು ಎಂಜಾ, ಸರ್ಪ ಹುಣ್ಣು ಇತ್ಯಾದಿ ಕಾಯಿಲೆಗಳು ಇವರನ್ನು ಸುಲಭವಾಗಿ ಆವರಿಸಿಕೊಳ್ಳಬಹುದು.

ಲೇಖಕರು: 
ಡಾ.ಎನ್.ಹೆಚ್.ಕೃಷ್ಣ, 
ಚೆಸ್ಟ್ ಕೌನ್ಸಿಲ್ ಆಫ್ ಇಂಡಿಯಾದ (ಸಿಸಿಐ) ಸಂಸ್ಥಾಪಕ ಅಧ್ಯಕ್ಷರು, 
ದಾವಣಗೆರೆ. 
drkrishna_nh@yahoo.com

TAGGED:Davanagere NewsDinamana.comKannada Newsಕನ್ನಡ ಸುದ್ದಿದಾವಣಗೆರೆ ಜಿಲ್ಲೆ .ದಿನಮಾನ.ಕಾಂ
Share This Article
Twitter Email Copy Link Print
Previous Article Davanagere ಕಟ್ಟ ಕಡೆಯ ವ್ಯಕ್ತಿಗೂ ಸಹಕಾರ ಸಂಘದ ಫಲ ಲಭಿಸಲಿ: ಶಾಸಕ ಕೆ.ಎಸ್‌.ಬಸವಂತಪ್ಪ
Next Article Davanagere ದಾವಣಗೆರೆ|ವಿವಿಧತೆಯಲ್ಲಿ ಏಕತೆ – ಭಾರತ ಸಂಸ್ಕೃತಿಯ ವೈಶಿಷ್ಣತೆ : ಬಿ. ರವಿಚಂದ್ರ

ಕನ್ನಡ ತಾಜಾ ಸುದ್ದಿಗಳ ವಿಸ್ಮಯ ಲೋಕ

Get All Kannada Latest News on Dinamaana.com Kannada News Portal
FacebookLike
TwitterFollow
InstagramFollow
LinkedInFollow
MediumFollow
QuoraFollow

Popular Posts

Davanagere news | ಎಸ್ಎಎಸ್ಎಸ್ ಯೋಗ ಕೇಂದ್ರದ ವಿದ್ಯಾರ್ಥಿಗಳು ಸಾಧನೆ

ದಾವಣಗೆರೆ (Davangere District) :  ಇತ್ತೀಚಿಗೆ ಚಿಕ್ಕಮಗಳೂರು (Chikmagalur District) ಜಿಲ್ಲೆ ಕಡೂರು ಪಟ್ಟಣದ ಪುಟ್ಟಮ್ಮ ಬೆಂಕಿ ಕಲ್ಯಾಣ ಮಂಟಪದಲ್ಲಿ…

By Dinamaana Kannada News

Davanagere | ಧರ್ಮ -ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಿ : ಎಸ್ಪಿ ಉಮಾ ಪ್ರಶಾಂತ್ ಕರೆ

ದಾವಣಗೆರೆ (Davanagere) : ಯುವ ಸಮೂಹ ಧರ್ಮ -ಜಾತಿ ಎಂಬ ದ್ವೇಷ ಬಿಟ್ಟು, ವಿಶ್ವಮಾನವರಾಗಬೇಕು  ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ …

By Dinamaana Kannada News

Davanagere | ರಾಜ್ಯ ಬಜೆಟ್‌ನಲ್ಲಿ ಹೊರಗುತ್ತಿಗೆ ನೌಕರರಿಗೆ ಅನ್ಯಾಯ

ದಾವಣಗೆರೆ (Davanagere) : ರಾಜ್ಯ ಸರಕಾರ ಮಂಡಿಸಿದ ಬಜೆಟ್ ನಲ್ಲಿ ನಗರ ಸ್ಥಳೀಯ ಸಂಸ್ಥೆಗಳ ಹೊರಗುತ್ತಿಗೆ ನೌಕರರಿಗೆ ಗುತ್ತಿಗೆ ಪದ್ಧತಿ…

By Dinamaana Kannada News

You Might Also Like

Davanagere
ತಾಜಾ ಸುದ್ದಿ

ಸಾಂಕ್ರಾಮಿಕವಲ್ಲದ ರೋಗಗಳ ಕುರಿತಾದ ಮಾಹಿತಿ ಒದಗಿಸಲು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

By Dinamaana Kannada News
Davanagere
ತಾಜಾ ಸುದ್ದಿ

ವಿಟಿಯು ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ. ಗಣೇಶ್ ಡಿ. ಬಿ.

By Dinamaana Kannada News
Constitution
ಅಭಿಪ್ರಾಯ

ಸಂವಿಧಾನ : ಬಿ.ಶ್ರೀನಿವಾಸ 

By Dinamaana Kannada News
Davanagere
ತಾಜಾ ಸುದ್ದಿ

ಜಿಲ್ಲೆಯ ವಿವಿಧೆಡೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಅನಿರೀಕ್ಷಿತ ಭೇಟಿ,ಪರಿಶೀಲನೆ

By Dinamaana Kannada News
Dinamaana (ದಿನಮಾನ.ಕಾಂ)-Kannada News | Kannada Latest News | Kannada Live News | Breaking News
Facebook Twitter Youtube Rss Medium

About US

Dinamaana (ದಿನಮಾನ): Dinamaana.com: Your go-to source for fast, reliable Kannada news.

Address: Prakash H.N
Rome No. 20
Mudegowdru Building
P.J. extantion
Davanagere -577002
9945549009

Top Categories
  • ವಿಶ್ವ
  • ವಿಶ್ವ
  • ಅಭಿಪ್ರಾಯ
  • ಅಭಿಪ್ರಾಯ
  • ರಾಜಕೀಯ
  • ರಾಜಕೀಯ
  • Tech
  • Tech
  • ಆರೋಗ್ಯ
  • ಆರೋಗ್ಯ
  • ಪ್ರಯಾಣ
  • ಪ್ರಯಾಣ
Usefull Links
  • Categories
    • ಅಭಿಪ್ರಾಯ
    • ರಾಜಕೀಯ
    • ತಂತ್ರಜ್ಞಾನ
    • ಪ್ರಯಾಣ
    • ಆರೋಗ್ಯ
    • ವಿಶ್ವ
  • Personalized
    • My Feed
    • My Saves
    • My Interests

© Dinamaana Kannada News Portal. Powerd By Newbie Techy. All Rights Reserved.

Install App (ದಿನಮಾನ.ಕಾಂ) to your Homescreen!

Install App
Welcome Back!

Sign in to your account

Lost your password?