ಮುಂಜಾವಿನ ಹೊಂಗಿರಣಕೆ
ಬೀಸುವ ತಂಬೆಲರಿಗೆ
ಮೈ-ಗೊಡವುತ ಕಂಪನು ಸೂಸಿವೆ
ಹೂವುಗಳು….
ಹೊಂಗಿರಣಕೆ ಕಣ್‌ರಳಿಸಿ
ಸಂಗಾತಿಯ ಮನ ಮೆಚ್ಚಿಸಿ
ಮಕರಂಧವ ಹೀರುತ ಹಾರಡಿವೆ
ದುಂಬಿಗಳು………..
ಒಳ ಇರುಳಿನ ಕಸ ಸಾರಿಸಿ
ಹೊಸ ವರುಷದ ಭರವಸೆಗೆ
ನವ ಉದಯವ ಕಾಯುತ ಕುಳಿತಿವೆ.
ನಯನಗಳು………….
Read also : ಬದಲಾದ ಕಾಲದಲ್ಲಿ ಬದುಕಿನ ಮೌಲ್ಯಗಳು:ಗೀತಾ ಭರಮಸಾಗರ
ಈ ಹರುಷದ ಹರಿಗೋಲಿಗೆ
ನನ್ನೊಡಲಿನ ಕದ ತೆರೆಯಲು
ಆರ್ಭಟಿಸಿದೆ ಮನ ತೀರದ ಉಲ್ಲಾಸದ
ಕಡಲುಗಳು…………
ರಚನೆ:- ಮಂಜುನಾಥ.ಜಿ
Civil police canstable.
Pn ps: 8088202854


