ಬಾಬುಸಾಬ್ ನದಾಫ
ಹಜರೇಸಾಬ್ ನದಾಫ
ಅಲ್ಲಿ ಪಾಕ್ ಪೇಡೆಗೋ*
ಅರಳಿದ ಹೂವಿನ ಮಕರಂದಕೋ
ಮುತ್ತಿಕೊಂಡಿವೆ ಸಾಲು ಸಾಲು ಇರುವೆಗಳು!
ಬದುಕಬೇಕು ನಾವೂ
ಕವಿತೆಯೆಲ್ಲ ಹಿಂದೆ ಬಿಟ್ಟು
ಬದುಕಿ ಬಾಳಬೇಕು
ಸಾಧ್ಯವಾದರೆ ಹೀಗೇ ಅಪ್ಪ-ಮಕ್ಕಳಂತೆ
ಜೋಡಿ ನದಾಫರಂತೆ!
ನದಾಫ
ಯಾರನ್ನೂ ಎಂದೂ ನೋಯಿಸಿದವರಲ್ಲ
ಹೌದು,
ಹೂವಿಗೆ ಹಲ್ಲುಗಳಿರುವುದಿಲ್ಲ.
ಅಂತೂ ಈಡೇರಿತು
ಆಶೆ,
ಕವಿತೆಯೆಲ್ಲಾ ಕರಗಿ ಮನುಷ್ಯನಾಗಿ ಅರಳಿದ ನಿನ್ನದೇ ಹೂವು
ಗೋರಿಯ ಮೇಲೆ!
ಬಿ.ಶ್ರೀನಿವಾಸ
Read Also : poem | ತಾಯಿಯ ಪ್ರೀತಿ…