ದಾವಣಗೆರೆ : ಕಳೆದುಕೊಂಡಿದ್ದ ಚಿನ್ನಾಭರಣ ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಪೊಲೀಸರು ಹಸ್ತಾಂತರಿಸಿದ್ದಾರೆ.
ಜ 12 ರಂದು ಜಾಲಿನಗರದ ಹೈದರ್ ಆಲಿ ಅವರು ಬೈಕಿನಲ್ಲಿ ಮನೆಗೆ ಹೋಗುತ್ತಿರುವ ವೇಳೆ ಅಭರಣಗಳಿದ್ದ ಬ್ಯಾಗ್ ರಸ್ತೆಯಲ್ಲಿ ಕಳೆದುಕೊಂಡಿದ್ದರು. ಬ್ಯಾಗ ಕಳೆದಿಕೊಂಡಿರುವ ಕುರಿತು ಬಸವನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದರು.
ಕಾರ್ಯಪ್ರವೃತ್ತರಾದ ಪೊಲೀಸರು ವೆನಿಟಿ ಬ್ಯಾಗ್ ಹಚ್ಚಿ ಅದರಲ್ಲಿದ್ದ ಬಂಗಾರದ ಹ್ಯಾಂಗಿಂಗ್, ಮಾಂಗಲ್ಯ ಸರ್ 2 ಒಂದು ಹಸೀರು ಮಣಿಯ ಲಾಕೆಟ್ ಸರ್ ಒಟ್ಟು ಸುಮಾರು 30 ಗ್ರಾಂ ಬಂಗಾರ, ಬೆಳ್ಳಿಯ 100 ಗ್ರಾಂ ಇರುವ ಒಂದು ಸೊಂಟದ ಚೈನ್ ಮತ್ತು ಗುಂಡು ಹಾಗೂ ಒಂದು ವಿವೋ ಮೊಬೈಲ್ ಫೋನ್ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ.
Read also : ಪ್ರವಾಸಿಗರ ಸುಲಿಗೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ
ಬಸವನಗರ ಠಾಣೆಯ ಪಿಎಸ್ಐ ಪ್ರಮಿಳಮ್ಮ ಮತ್ತು ಸಿಬ್ಬಂದಿ ಫಕೃದ್ದೀನ್ ಸ್ವತ್ತನ್ನು ಕೆಲವೇ ಗಂಟೆಗಳಲ್ಲಿ ಪತ್ತೆ ಮಾಡಿ ವಾರಸುದಾರರಿಗೆ ಮರಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್ ಪ್ರಶಂಸಿಸಿದ್ದಾರೆ.
