ದಾವಣಗೆರೆ (Davangere) : ನಗರದಲ್ಲಿ ಕಾನೂನು & ಸುವ್ಯವಸ್ಥೆ ಕಾಪಾಡುವ ಹಾಗೂ ಸಾರ್ವಜನಿಕರಲ್ಲಿ ಭಯಮುಕ್ತ ವಾತಾವರಣ ನಿರ್ಮಾಣ ದೃಷ್ಠಿಯಿಂದ ಶುಕ್ರವಾರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್ ನೇತೃತ್ವದಲ್ಲಿ ‘ಪೊಲೀಸ್ ಪಥ ಸಂಚಲನ’ ನಡೆಯಿತು.
ಪೊಲೀಸ್ ಪಥ ಸಂಚಲನವು ಬೇತೂರು ರಸ್ತೆಯ ವೆಂಕಟೇಶ್ವರ ವೃತ್ತದಿಂದ ಆರಂಭವಾಗಿ ಅರಳಿಮರ ವೃತ್ತ, ಆಜಾದ್ ನಗರ, ಬಾಷಾ ನಗರ, ಹಳೆ ಬೇತುರ್ ರೋಡ್, ಹಗೆದಿಬ್ಬ ವೃತ್ತ, ದುರ್ಗಂಬಿಕ ದೇವಸ್ಥಾನದ ಮೂಲಕ ಸಾಗಿ ವೃತ್ತಕ್ಕೆ ಮುಕ್ತಾಯವಾಗಿತು.
Read also : Davanagere | ಮಲೇಬೆನ್ನೂರು : ಶ್ರೀ ಹಿಂದೂ ಮಹಾ ಗಣಪತಿ ವಿಸರ್ಜನೆ ವಾಹನಗಳ ಮಾರ್ಗ ಬದಲಾವಣೆ
ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ ಸಂತೋಷ , ಜಿ ಮಂಜುನಾಥ ರವರು, ನಗರ ಡಿವೈಎಸ್ಪಿ ಮಲ್ಲೇಶ್ ದೊಡ್ಮನಿ ರವರು, ಡಿಎಆರ್ ಡಿವೈಎಸ್ಪಿ ಪಿಬಿ ಪ್ರಕಾಶ್, ಪೊಲೀಸ್ ನಿರೀಕ್ಷಕರುಗಳಾದ ಗುರುಬಸವರಾಜ, ನೆಲವಾಗಲು ಮಂಜುನಾಥ, ಅಶ್ವಿನ್ ಕುಮಾರ, ಸುನೀಲ್ ಕುಮಾರ್, ನೂರ್ ಅಹಮ್ಮದ್, ಪ್ರಭಾವತಿ, ಮಲ್ಲಮ್ಮ, ಅಶ್ವಿನ್ ಕುಮಾರ್ , ಚೌಬೆ ರವರು ಸೇರಿದಂತೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.