ದಾವಣಗೆರೆ (Davangere District) : ಹರಿಹರ ತಾಲೂಕು ಕೊಂಡಜ್ಜಿ ಗ್ರಾಮದ ಪೊಲೀಸ್ ಪಬ್ಲಿಕ್ ಶಾಲೆಯಲ್ಲಿ ಹಾಕಿ ಮಾಂತ್ರಿಕ ಧ್ಯಾನ್ ಚಂದ ರವರ ಜನ್ಮದಿನದ ಹಿನ್ನಲೆಯಲ್ಲಿ ರಾಷ್ಟ್ರೀಯ ಕ್ರೀಡಾ ದಿನದ ಅಂಗವಾಗಿ ಪೋಲಿಸ್ ಇಲಾಖೆ ಹಾಗೂ ಕಾರ್ಗಿಲ್ ಕಂಪನಿಯ ಸಹಯೋಗದಲ್ಲಿ ಫಿಟ್ ಫಾರ್ ಮ್ಯಾರಥಾನ್ ಆಯೋಜಿಸಲಾಗಿತ್ತು.
ಡಿವೈ ಎಸ್ ಪಿ ಪ್ರಕಾಶ್ ಪಿ ಬಿ ಮಾತನಾಡಿ, ದೈಹಿಕ ಆರೋಗ್ಯದಷ್ಟೇ ಮಾನಸಿಕ ಆರೋಗ್ಯವು ತುಂಬಾ ಮುಖ್ಯ. ಆದ್ದರಿಂದ ಮಕ್ಕಳು ದೈಹಿಕ ಮತ್ತು ಮಾನಸಿಕ ಆರೋಗ್ಯದ ಕಡೆ ಗಮನ ಕೊಡಬೇಕು. ಹಾಗಾಗಿ ಈ ರೀತಿಯ ಮ್ಯಾರಥಾನ್ ಗಳು ತುಂಬಾ ಮುಖ್ಯ ಎಂದು ತಿಳಿಸಿದರು.
Read also : Davanagere Municipal Corporation | ಆಸ್ತಿ ತೆರಿಗೆ ಪಾವತಿ ಶೇ 5 ರಿಯಾಯಿತಿ ಕಾಲಾವಧಿ ವಿಸ್ತರಣೆ
ಕಾರ್ಗಿಲ್ ಕಂಪನಿಯ ಕಾರ್ಯದರ್ಶಿ ವೆಂಕಟೇಶ್ ಮಾತನಾಡಿ. ವಿಶ್ವಕ್ಕೆ ಭಾರತವನ್ನು ಪರಿಚಯಿಸಿದ ಮೇರು ವ್ಯಕ್ತಿತ್ವ ಧ್ಯಾನ್ ಚಂದ್ ಅವರ ಜೀವನ ಒಂದು ಯಶೋಗಾಥೆ. ಮಕ್ಕಳು ಅವರಂತೆ ಕ್ರೀಡೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸಾಧನೆಯೆಡೆಗೆ ಮುನ್ನುಗ್ಗಬೇಕೆಂದು ತಿಳಿಸಿದರು.
ಪೊಲೀಸ್ ಪಬ್ಲಿಕ್ ಶಾಲೆಯ ಪ್ರಾಂಶುಪಾಲ ಯತೀಶ್ ಆಚಾರ್ ಮಾತನಾಡಿ, ಬ್ರಿಟಿಷ್ ಅಧಿಪತ್ಯದ ಕಾಲದಲ್ಲಿ ಭಾರತವನ್ನು ವಿಶ್ವಕ್ಕೆ ಪರಿಚಯಿಸಿದ ಎಂದು ತಿಳಿಸಿದರು.
ಹರಿಹರ ಗ್ರಾಮಾಂತರ ಪೊಲೀಸ್ ಠಾಣೆಯ ಪಿಎಸ್ಐ ಮಂಜುನಾಥ ಕುಪ್ಪೇಲೂರು, ಕಾರ್ಗಿಲ್ ಕಂಪನಿಯ ಕವನ್, ಪೊಲೀಸ್ ಸಿಬ್ಬಂದಿಗಳಾದ ಮಾರುತಿ, ಗಂಗಾಧರ, ವಿದ್ಯಾರ್ಥಿಗಳ ಪೋಷಕರು ಹಾಗೂ ವಿದ್ಯಾರ್ಥಿಗಳು ಮತ್ತು ಶಾಲೆಯ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.