ದಾವಣಗೆರೆ, ಮಾ. 12: ನಗರದ ಪ್ರೀತಿಯವರಿಗೆ ಶಿಕ್ಷಣ, ಆಡಳಿತ ಹಾಗೂ ಮಾರ್ಕೆಟಿಂಗ್ ಸಾಧನೆಯನ್ನು ಗುರುತಿಸಿ ಅಮೆರಿಕದ ವಾಷಿಂಗ್ಟನ್ ಯೂನಿವರ್ಸಿಟಿ ಯು (ಡಿಜಿಟಲ್ ) ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ.
ಅಲ್ಲದೇ ಇವರ ಸಾಧನೆಯನ್ನು ಗುರುತಿಸಿ ಕೇಂದ್ರ ಸರ್ಕಾರದ ವೆಲ್ ರೆಡ್ ಫೌಂಡೇಷನ್ ವತಿಯಿಂದ ಡಾ.ಎ.ಪಿ.ಜೆ.ಅಬ್ದುಲ್ ಕಲಾಂ ನೇಷನ್ ಸ್ಟಾರ್ ಅವಾರ್ಡ್, ಬ್ಲೂ ಸ್ಟಾರ್ ಇವೆಂಟ್ಸ್ ಐಕಾನ್ ಆಫ್ ಇಂಡಿಯಾ-2025 ಪ್ರಶಸ್ತಿ, ಸೋಷಿಯಲಿ ಪಾಯಿಂಟ್ ಫೌಂಡೇಷನ್ ಪ್ರೈಡ್ ಆಫ್ ಇಂಡಿಯಾ-2025 ಪ್ರಶಸ್ತಿ ಹಾಗೂ ರಾಜಸ್ಥಾನ ರಾಜ್ಯದ ಕೋಟಾದ ಗ್ಯಾನ್ ಉದಯ್ ಫೌಂಡೇಷನ್ ಇಂಟರ್ ನ್ಯಾಷನಲ್ ಅಚೀವರ್ಸ್ ಅವಾರ್ಡ್ ನೀಡಿ ಗೌರವಿಸಿದೆ. ಇವರು ನಗರದ ಶ್ರೀಮತಿ ಸುಷ್ಮಾ ಸುಧೀರ್ ಪುತ್ರಿ.