ದಾವಣಗೆರೆ (Davanagere): ಕಿರುಕುಳ ನೀಡಿ ಹೆಂಡತಿ ಕೊಲೆ ಮಾಡಿದ ಪ್ರಕರಣದ ಆರೋಪಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ದಿ15/10/2014 ರಂದು ಚಂದ್ರಮ್ಮ ಎಂಬುವವರು ಚನ್ನಗಿರಿ ಪೊಲೀಸ ಠಾಣೆಗೆ ಹಾಜರಾಗಿ ಕೊರಟಿಗೆರೆ ಗ್ರಾಮದ ಕೆ.ಎಸ್.ಮಹದೇವ್ ಎಂಬವವರಿಗೆ ನನ್ನ ಮಗಳಾದ ಎ.ಜಿ.ಶೈಲಾ ಅವರನ್ನು 4 ತಿಂಗಳ ಹಿಂದೆ 3 ಲಕ್ಷ ರೂ ನಗದು, 18 ತೊಲ ಬಂಗಾರ ವರದಕ್ಷಿಣಿ ನೀಡಿ ವಿವಾಹ ಮಾಡಿಕೊಡಲಾಗಿತ್ತು. ಅದರೆ ಆರೋಪಿ ಮಗಳೊಂದಿಗೆ ಸರಿಯಾಗಿ ಜೀವನ ನಡೆಸದೆ ದೈಹಿಕ. ಮಾನಸಿಕ ಹಿಂಸೆ ನೀಡಿ 15/10/2014 ರಂದು ಬೆಳಿಗಿನ ಜಾವ 4-45 ಗಂಟೆಯಲ್ಲಿ ಶೈಲಾಳಿಗೆ ಯಾವುದೋ ವಿಷ ಆಹಾರ ತಿನ್ನಿಸಿ ಉದ್ದೇಶ ಪೂರ್ವಕವಾಗಿ ಸಾಯಿಸಿದ್ದಾರೆ. ಆರೋಪಿತರ ಮೇಲೆ ಕಾನೂನು ಕ್ರಮ ಜರುಗಿಸಿ ಎಂದು ಸಂತೆಬೆನ್ನೂರು ಠಾಣೆಗೆ ದೂರು ನೀಡಿದ್ದರು.
ಪ್ರಕರಣದಲ್ಲಿ ತನಿಖಾಧಿಕಾರಿ ಪಂಪಾಪತಿ ಎಂ.ಜಿ, ತನಿಖೆ ಕೈಗೊಂಡು ಆರೋಪಿಯು ಮೃತೆ ಶೈಲಾ ರವರಿಗೆ ಸೆವೋಪ್ಲೋರೆನ್ ಅನಸ್ತೆಸಿಯ ಮೆಡಿಷನ್ನ್ನು ಪ್ರಯೋಗಿಸಿ ಕೈಯಿಂದ ಅವಳ ಮೂಗನ್ನು ಉಸಿರಾಡದಂತೆ ಒತ್ತಿ ಹಿಡಿದು ಉಸಿರುಕಟ್ಟಿಸಿ ಸಾಯಿಸಿರುವುದು ತನಿಖೆಯಿಂದ ದೃಡಪಟ್ಟ ಹಿನ್ನಲೆಯಲ್ಲಿ ಆರೋಪಿತರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾಪಟ್ಟಿಯನ್ನು ಸಲ್ಲಿಸಿದ್ದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ಶ್ರೀಮತಿ ರಾಜೇಶ್ವರಿ ಎನ್. ಹೆಗಡೆ ವಿಚಾರಣೆ ನಡೆಸಿ ಆರೋಪಿ ಕೆ.ಎಸ್ ಮಹಾದೇವಪ್ಪ ಮೇಲೆ ಆರೋಪ ಸಾಬೀತಾಗಿದ್ದರಿಂದ ದಿನಾಂಕ:23-11-2024 ರಂದು ಜೀವಾವಧಿ ಕಾರಾಗೃಹ ಶಿಕ್ಷೆ ಮತ್ತು 1ಲಕ್ಷ ರೂ ದಂಡ ವಿಧಿಸಿ ಆದೇಶಿಸಿದ್ದಾರೆ.
ದಂಡದ ಮೊತ್ತದ ಹಣದಲ್ಲಿ 80,000/- ರೂ ಹಣವನ್ನು ಪ್ರಕರಣದ ಸಂತ್ರಸ್ಥೆ ತಂದೆ-ತಾಯಿ ರವರಿಗೆ ನೀಡುವಂತೆ ಹಾಗೂ ಉಳಿದ 20,000/-ರೂ ಮೊತ್ತ ಹಣವನ್ನು ಸರ್ಕಾರಕ್ಕೆ ಮುಟ್ಟುಗೋಲು ಹಾಕಿಕೊಳ್ಳುವಂತೆ ಆದೇಶಿಸಲಾಗಿದೆ ಸರ್ಕಾರಿ ವಕೀಲರಾದ ಮಂಜುನಾಥ್ .ಬಿ ರವರು ನ್ಯಾಯ ಮಂಡನೆ ಮಾಡಿದ್ದಾರೆ.
ಪ್ರಕರಣದಲ್ಲಿ ತನಿಖೆ ಕೈಗೊಂಡು ಭಾಗಶಃ ತನಿಖೆಮಾಡಿದ ಸಿಪಿಐ ರವಿನಾಯ್ಕ , ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ಪಂಪಾಪತಿ ಎಂ.ಜಿ, , ಸಿಬ್ಬಂದಿಗಳನ್ನು , ಸರ್ಕಾರಿ ವಕೀಲರಾದ ಮಂಜುನಾಥ್ .ಬಿ ರವರನ್ನು ಪೊಲೀಸ್ ಅಧೀಕ್ಷಕರಾದ ಉಮಾ ಪ್ರಶಾಂತ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ವಿಜಯಕುಮಾರ ಎಂ. ಸಂತೋಷ & ಮಂಜುನಾಥ. ಜಿ ರವರು ಶ್ಲಾಘೀಸಿದ್ದಾರೆ.
Read also : Political analysis | ರಮೇಶ್ ಚೆನ್ನಿತಾಲ ಕೊಟ್ಟ ಬಿಗ್ ಮೆಸೇಜ್