ದಾವಣಗೆರೆ (Davanagere ): ನಕಲಿ ಪ್ರಮಾಣಪತ್ರ ಸೃಷ್ಠಿಸಿ ಸರಿಯಾದ ವೀಸಾ ಹೊಂದದೆ ಭಾರತದಲ್ಲಿ ವಾಸ ಮುಂದುವರಿಸಿದ ಆರೋಪಿಗೆ ಒಂದು ವರ್ಷ ಕಾರಾಗೃಹ ಶಿಕ್ಷೆ ಮತ್ತು 1.5 ಲಕ್ಷ ದಂಡ ವಿಧಿಸಿ ನ್ಯಾಯಾಲಯ ತೀರ್ಪು ನೀಡಿದೆ.
ಪೊಲೀಸ್ ಜಿಲ್ಲಾ ವಿಶೇಷ ವಿಭಾಗದ ಪೊಲೀಸ್ ನಿರೀಕ್ಷಕ ರಮೇಶ್‌ರಾವ್ ಅವರು 20.03.2012 ರಂದು ಕೆಟೆಜೆ ನಗರದ ಪೊಲೀಸ್ ಠಾಣೆಗೆ ಭಗತ್ ಸಿಂಗ್ ನಗರದ ಕೆಎಸ್ ಆರ್ ಟಿಸಿ ಹಿಂಭಾಗ ವಾಸವಾಗಿರುವ ವಿಜಯಕಮಾರ್ ಎಂಬುವವರು ಮೂಲತಃ ಮಲೇಶಿಯಾದ ಕೌಲಲಾಂಪುರದವರು 16.08.1985 ರಂದು ಎಂಬಿಬಿಎಸ್ ವ್ಯಾಸಂಗ ಮಾಡಲು ದಾವಣಗೆರೆ ಬಂದು ನಂತರ 1995 ರಲ್ಲಿ ಭಾರತೀಯ ಪ್ರಜೆ ತ್ರೀವೇಣೆ ಶಾನಭಾಗ್ ಅವರನ್ನು ಮದುವೆಯಾಗಿದ್ದಾರೆ.
ನಂತರ ಎಂಬಿಬಿಎಸ್ ಪದವಿಯಲ್ಲಿ ಅನುತ್ತೀರ್ಣನಾಗಿದ್ದರು ಸಹ ಎಂ.ಡಿ.ವ್ಯಾಸಂಗ ಮಾಡುತ್ತಿರುವುದಾಗಿ ಸುಳ್ಳು ದಾಖಲೆ ಸೃಷ್ಠಿಸಿ, ಕಾಲೇಜಿನಿಂದ ಬೋನಫೈಡ್ ಪ್ರಮಾಣ ಪ್ರಮಾಣ ಪತ್ರ ಪಡೆದು, ಪ್ರಾಂಶುಪಾಲರ ಸಹಿ ಪೂರ್ಜರಿ ಮಾಡಿದ್ದಾನೆ. ಅಲ್ಲದೇ ತನ್ನ ವಾಸ ಮುಂದುವರೆಸುವ ಸಲುವಾಗಿ ಎಕ್ಸ್ ವೀಸಾವನ್ನು ಪಡೆಯದೆ ಭಾರತದಲ್ಲಿರಲು ಕಾನೂನಿನಲ್ಲಿ ಅವಕಾಶವಿದ್ದರು ಸಹ ಸರಿಯಾದ ವೀಸಾವನ್ನು ಹೊಂದದೆ ಭಾರತದಲ್ಲಿ ವಾಸವಾಗಿದ್ದಾರೆ. ಆದ್ದರಿಂದ ಆರೋಪಿಯ ವಿರುದ್ಧ ಕಾನೂನು ಕ್ರಮ ಜರುಗಿಸಿ ಎಂದು ದೂರು ನೀಡಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸ್ ನಿರೀಕ್ಷಕ ಶಿವಪ್ರಸಾದ್ .ಎಂ ಆರೋಪಿ ಕೆ. ವಿಜಯಕುಮಾರ್ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ರಾಜೇಶ್ವರಿ ಎನ್. ಹೆಗಡೆ ರವರು ವಿಚಾರಣೆ ನಡೆಸಿ ಆರೋಪಿ ಕೆ. ವಿಜಯಕುಮಾರ್ ಆರೋಪ ಸಾಬೀತಾಗಿದ್ದರಿಂದ 26-10-2024 ರಂದು ಆರೋಪಿತನಿಗೆ 1 ವರ್ಷ ಕಾರಾಗೃಹ ಶಿಕ್ಷೆ , ಆರೋಪಿತನು ಈಗಾಗಲೇ 1 ವರ್ಷ ನ್ಯಾಯಾಂಗ ಬಂಧನದಲ್ಲಿ ಇರುವುದರಿಂದ ಶಿಕ್ಷಾ ಅವಧಿ ಸೆಟ್ ಆಪ್ ಮಾಡಲಾಗಿದೆ. 1,50,000/- ರೂ ದಂಡ ವಿಧಿಸಿ ತೀರ್ಪು ನೀಡಿದೆ.
READ ALSO : Davanagere |ಕನ್ನಡ ರಾಜ್ಯೋತ್ಸವ : ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 33 ಜನರಿಗೆ ಸನ್ಮಾನ
ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ ತನಿಖಾಧಿಕಾರಿ ಶಿವಪ್ರಸಾದ್, ಸಿಬ್ಬಂದಿಗಳನ್ನು , ನ್ಯಾಯಮಂಡನೆ ಮಾಡಿದ ಸರ್ಕಾರಿ ವಕೀಲ ಮಂಜುನಾಥ್ .ಬಿ ರವರನ್ನು ಎಸ್ಪಿ ಉಮಾ ಪ್ರಶಾಂತ್, ಎಎಸ್ಪಿಗಳಾದ ವಿಜಯಕುಮಾರ್ ಎಂ. ಸಂತೋಷ & ಜಿ. ಮಂಜುನಾಥ ರವರು ಶ್ಲಾಘಿಸಿದ್ದಾರೆ.