ಹರಿಹರ (Davanagere ): ಸಮಾಜದಲ್ಲಿ ಪರಿವರ್ತನೆ ತರುವ ಸಾಮರ್ಥ್ಯ ಇರುವ ಸಾಹಿತ್ಯ ಮಾತ್ರ ನೈಜ ಸಾಹಿತ್ಯ ಎಂದು ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟ್ನ ಟ್ರಸ್ಟಿ ರುದ್ರಪ್ಪ ಹನಗವಾಡಿ ಹೇಳಿದರು.
ಮಾನವ ಬಂಧುತ್ವ ವೇದಿಕೆ, ದಾವಣಗೆರೆ ವಿಶ್ವವಿದ್ಯಾನಿಲಯದ ಇಂಗ್ಲಿಷ್ ವಿಭಾಗದ ಸಹಯೋಗದಲ್ಲಿ ಮೈತ್ರಿ ವನದಲ್ಲಿ ಆಯೋಜಿಸಿದ್ದ ‘ಸಾಹಿತ್ಯದಲ್ಲಿ ಸಂವಿಧಾನದ ಆಶಯಗಳು’ ವಿಷಯ ಕುರಿತ ಒಂದು ದಿನದ ಕಾರ್ಯಾಗಾರದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಸಾಹಿತ್ಯದಲ್ಲಿ ಪ್ರಭುತ್ವದಲ್ಲಿರುವವರನ್ನು ಹೊಗುಳುವುದೆ ಸಾಹಿತಿಗಳ ಕೈಂಕರ್ಯವಾಗಿತ್ತು. ಆಗಿನ ಕಾಲದ ಜನ ಸಾಮಾನ್ಯರ, ಮಹಿಳೆಯರು, ಶೋಷಿತರ ಕಷ್ಟಗಳನ್ನು ದಾಖಲಿಸಿರುವುದು ಅಪರೂಪವಾಗಿಯೆ ಉಳಿಯಿತೆಂದು ಅವರು ಬೇಸರ ವ್ಯಕ್ತಪಡಿಸಿದರು.
ಪ್ರಸಕ್ತ ಕಾಲಮಾನದಲ್ಲಿರುವ ಸಾಮಾಜಿಕ ಪಿಡುಗುಗಳು, ಬಡ ಜನರ ಸಂಕಷ್ಟಗಳನ್ನು ನಿವಾರಿಸುವ, ಪ್ರಭುತ್ವದ ಲೋಪಗಳನ್ನು ಬಿಂಬಿಸುವ ಗುರಿ ಸಾಹಿತ್ಯ ರಚನಾಕಾರರಿಗೆ ಇರಬೇಕು. ಸಂವಿಧಾನದ ಅರಿವು ಹೊಂದಿದ್ದರಿAದಲೆ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸ್ಥಾಪಕ ಪ್ರೊ.ಬಿ.ಕೃಷ್ಣಪ್ಪನವರು ಸೊರಬದ ಚಂದ್ರಗುತ್ತಿ ದೇವಾಲಯದಲ್ಲಿ ನಡೆಯುತ್ತಿದ್ದ ದಲಿತ ಮಹಿಳೆಯರ ಬೆತ್ತಲೆ ಸೇವೆ ವಿರುದ್ಧ ಜನಾಂದೋಲನವನ್ನು ರೂಪಿಸಿದರು ಎಂದರು.
ಮಾನವ ಬಂಧುತ್ವ ವೇದಿಕೆ ರಾಜ್ಯ ಸಂಚಾಲಕ ಪ್ರೊ.ಎ.ಬಿ.ರಾಮಚಂದ್ರಪ್ಪ ಮಾತನಾಡಿ, ಬೋಧನೆ ಮಾಡುವ ಪಠ್ಯವು ಎಷ್ಟೆ ನಂಜಿನಿAದ ಕೂಡಿದ್ದರು ಅಧ್ಯಾಪಕರು ಅದನ್ನು ಸಮಕಾಲಿನ ಸ್ಥಿತಿಗತಿಗೆ ಅನ್ವಯಿಸಿ ಬೋಧಿಸಬೇಕೆಂದರು.
ಒಬ್ಬ ದಲಿತ ಮಹಿಳೆಯನ್ನು ಸಾವಿರಾರು ಜನರ ಸಮ್ಮುಖದಲ್ಲಿ ಬೆತ್ತಲೆ ಮೆರೆವಣಿಗೆ ಮಾಡಿದರೂ ಈಗಿನ ಪ್ರಭುತ್ವದಲ್ಲಿರುವವರು ಪ್ರತಿಕ್ರಿಯಿಸಲಿಲ್ಲ, ಆದರೆ ಬೇಟಿ ಪಡಾವೋ, ಬೇಟಿ ಬಚಾವೋ ಎಂಬ ಘೋಷಣೆ ಮೊಳಗಿಸಿ ಪ್ರಚಾರವನ್ನು ಮಾತ್ರ ಪಡೆಯಲಾಗುತ್ತಿದೆ ಎಂದು ಟೀಕಿಸಿದರು.
ಆದಿ ಕಾಲದಿಂದ ಇದ್ದ ಅನುಪಯುಕ್ತ ಸಾಹಿತ್ಯ ಪರಂಪರೆಗೆ ೧೨ನೇ ಶತಮಾನದಲ್ಲಿ ಬಸವಣ್ಣನವರ ವಚನ ಸಾಹಿತ್ಯ ಪ್ರತಿ ಏಟು ನೀಡಿತು. ಅನುಪಯುಕ್ತ ಸಾಹಿತ್ಯ ಮೇಳೈಸಿದಾಗ ಪ್ರತಿಸಂಸ್ಕೃತಿ ಬಿಂಬಿಸುವ ಪರ್ಯಾಯ ಸಾಹಿತ್ಯ ರಚನೆಯಾಗುಬೇಕಾಗುತ್ತದೆ ಎಂದರು.
Read also : Davanagere news | ಹೆಣ್ಣು ಮಕ್ಕಳ ಹಕ್ಕುಗಳ ಸಂರಕ್ಷಣೆ ಎಲ್ಲಾರ ಜವಾಬ್ದಾರಿ : ನ್ಯಾ.ಮಹಾವೀರ ಮ.ಕರೆಣ್ಣವರ
ನಿವೃತ್ತ ಕನ್ನಡ ಅಧ್ಯಾಪಕ ಪ್ರೊ.ದಾದಾಪೀರ್ ನವಿಲೇಹಾಳ್ ಮಾತನಾಡಿ, ಇನ್ನೊಬ್ಬರ ಸುಖ, ದುಃಖಗಳಿಗೆ ಸ್ಪಂದಿಸುವ ಗುಣ ಕನ್ನಡದ ನೆಲದಲ್ಲಿ ಕಾಣಬಹುದಾಗಿದೆ. ಸಂವಿಧಾನದ ಮೂಲ ಆಶಯಗಳಿಗೆ ಸ್ಪಂದಿಸಿ ರಚಿಸಿದ ಸಾಹಿತ್ಯ ಕನ್ನಡ ಭಾಷೆಯಲ್ಲಿ ಗಣನೀಯ ಸಂಖ್ಯೆಯಲ್ಲಿದೆ ಎಂದರು.
ಪ್ರೊ.ಬಿ.ಕೃಷ್ಣಪ್ಪ ಟ್ರಸ್ಟಿನ ಟ್ರಸ್ಟಿ ಆರ್.ನಾಗರಾಜ್ ಮಾತನಾಡಿದರು. ವಿದ್ಯಾರ್ಥಿನಿ ತನುಜ ಪ್ರಾರ್ಥಿಸಿದರು. ಇಂಗ್ಲಿಷ್ ವಿಭಾಗದ ಸಂಯೋಜನಾಧಿಕಾರಿ ಡಾ.ಫಕೀರೇಶ್ ಹಳ್ಳಳ್ಳಿ ಸ್ವಾಗತಿಸಿ, ನಿರೂಪಿಸಿದರು. ಸಹಾಯಕ ಪ್ರಾಧ್ಯಾಪಕ ಮದಕರಿ ನಾಯಕ ಎಚ್.ಆರ್. ವಂದಿಸಿದರು.