ಮಲೇಬೆನ್ನೂರು (Davanagere) : ಕೇಂದ್ರ ಸರಕಾರ ಜಾರಿಗೆ ತರಲು ಹೊರಟಿರುವ 2024ರ ವಕ್ಫ್ ಮಸೂದೆ ಜಾರಿಗೆ ವಿರೋಧಿಸಿ ಪಟ್ಟಣದ ಹಜರತ್ ಸೈಯ್ಯದ್ ಹಬೀಬುಲ್ಲ ಷಾ ಖಾದ್ರಿ ರವರ ದರ್ಗಾ ಮೈದಾನದಿಂದ ನಾಡ ಕಛೇರಿವರೆಗೆ ಪಟ್ಟಣದ ಮುಸ್ಲಿಂ ಸಮುದಾಯ ಪ್ರತಿಭಟನೆ ನಡೆಸಿ ಉಪ ತಹಶೀಲ್ದಾರ್ ರವರ ಮೂಲಕ ಜಂಟಿ ಸಂಸದೀಯ ಸಮಿತಿಯ ಅಧ್ಯಕ್ಷರು ಹಾಗೂ ಸದಸ್ಯರು ನವದೆಹಲಿ ಅವರಿಗೆ ಸೋಮವಾರ ಮನವಿ ಪತ್ರ ಸಲ್ಲಿಸಲಾಯಿತು.
ಪುರಸಭಾ ಸದಸ್ಯರಾದ ಹಾಗೂ ದಲಿತ ವಿದ್ಯಾರ್ಥಿ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಾಬೀರ್ ಅಲಿ ಮಾತನಾಡಿ, ಕೇಂದ್ರ ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು ಕೇಂದ್ರ ಬಿಜೆಪಿ ಸರ್ಕಾರವು ಅಲ್ಪಸಂಖ್ಯಾತ ವಿರೋಧಿ ಮಸೂದೆಯನ್ನು ಜಾರಿಗೆ ತರಲು ಹೊರಟಿದ್ದು ಇದು ವಕ್ಫ್ ಆಸ್ತಿಯನ್ನು ಕಬಳಿಸಲು ಮತ್ತು ಬೇಕಾದವರಿಗೆ ಮಾರಾಟ ಮಾಡಿಕೊಳ್ಳಬಹುದಾದ ಕಾನೂನುಗಳನ್ನು ಮಾಡಲು ಹೊರಟಿದೆ. ಈ ಕಾನೂನು ಭಾರತೀಯ ಅಲ್ಪಸಂಖ್ಯಾತರ ವಿರುದ್ಧವಾಗಿದ್ದು ಈ ಕೂಡಲೇ ಈ ಮಸೂದೆಯನ್ನು ಕೈಬಿಡಬೇಕು ಎಂದು ಹೇಳಿದರು.
ವಕ್ಫ್‌ನ ಅಧಿಕಾರ ವ್ಯಾಪ್ತಿಯಿಂದ ಶತ್ರುಗಳ ಆಸ್ತಿಗಳನ್ನು ಹೊರಗಿಡುವುದು ದೊಡ್ಡ ಪ್ರಮಾಣದ ಹಾನಿಯನ್ನು ಉಂಟುಮಾಡುತ್ತದೆ. ತೊಂಬತ್ತು ದಿನಗಳನ್ನು ನಿಗದಿಪಡಿಸುವ ರೂಪಾಂತರದ ಅವಧಿಯು ಒಳಗೊಂಡಿರುವ ಅಗಾಧತೆಯ ದೃಷ್ಟಿಯಿಂದ ಸಾಕಾಗುವುದಿಲ್ಲ. ವಕ್ಫ್ ಕಾನೂನಿನ ಉದ್ದೇಶವು ವಕ್ಫ್ ಅನ್ನು ರಕ್ಷಿಸುವುದಾಗಿದೆ ಆದರೆ 2024ರ ವಕ್ಫ್ ಮಸೂದೆಯು ಮುಸ್ಲಿಮರನ್ನು ಕೆಳದರ್ಜೆಯ ಟ್ಯಾಗ್ ಅನ್ನು ಅಂಟಿಸುವ ಮೂಲಕ ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡುವ ಕಾನೂನುಗಳ ಸರಣಿಯ ಮುಂದುವರಿಕೆಯಲ್ಲಿ ಮಸೂದೆಯ ಉದ್ದೇಶವನ್ನು ನೀಡುತ್ತದೆ ಎಂದು ಹೇಳಿದರು.
Read also : Davanagere | ಮಕ್ಕಳಿಗೆ ಮೌಲ್ಯ ಆಧಾರಿತ ಶಿಕ್ಷಣ ಬೋಧಿಸಿ : ರೋ. ವಿಶ್ವಜಿತ್ ಕೆ.ಜಾಧವ್
ಪುರಸಭಾ ಸದಸ್ಯರಾದ ಖಲೀಲ್ ನಯಾಜ್, ಬುಡ್ಡವರ್ ರಫೀಕ್,ಎಂ ಬಿ ರುಸ್ತುಮ್, ದಾದಾಪೀರ್, ಷಾ ಅಬ್ರಾರ್ಮಾಜಿ ಸದಸ್ಯರಾದ ಅರಿಫ್ ಅಲಿ ಎ. ದಾದವಲಿ, ಯೂಸುಫ್ ಖಾನ್, ಹಾಗೂ ಮುಸ್ಲಿಂ ಮುಖಂಡರಾದ ಸೈಯ್ಯದ್ ಜಾಕೀರ್, ಬುಡ್ಡವರ್ ಸೈಫುಲ್ಲ, ಸುಲ್ತಾನ್ ಹುಸೈನ್ ,ಶಾಬಾಜ್, ಶಫಿಉಲ್ಲಾ, ಹಬೀಬುಲ್ಲ, ಅಯೂಬ್ ಖಾನ್, ಮುಂತಾದವರು ಭಾಗವಹಿಸಿದ್ದರು.