ಹರಿಹರ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಆರೋಪಿಗಳಾದ ಚಿತ್ರ ನಟ ದರ್ಶನ್ ಸೇರಿದಂತೆ ಇತರೆ ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಕುಮಾರ್ ಶೆಟ್ಟಿ) ವತಿಯಿಂದ ಶುಕ್ರವಾರ ಗ್ರೇಡ್2 ತಹಸೀಲ್ದಾರ್ ಶಶಿಧರಯ್ಯಗೆ ಮನವಿ ಸಲ್ಲಿಸಿದರು.
ನಗರದ ಶಿವಮೊಗ್ಗ ವೃತ್ತ ದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಶಿವಮೊಗ್ಗ ರಸ್ತೆ, ಗಾಂಧಿ ವೃತ್ತದ ಮೂಲಕ ತಹಸೀಲ್ದಾರ್ ಕಚೇರಿ ಬಳಿ ಅಂತ್ಯಗೊಂಡಿತು. ಮೆರವಣಿಗೆಯುದ್ದಕ್ಕೂ ಕೊಲೆ ಆರೋಪಿಗಳಿಗೆ ದಿಕ್ಕಾರ ಎಂದು ಘೋಷಣೆ ಕೂಗಿದರು.
ನಂತರ ಮಾತನಾಡಿದ ಕರವೇ ಪದಾಧಿಕಾರಿಗಳು ಕನ್ನಡ ಚಿತ್ರರಂಗ ಹೆಸರಾಂತ ನಟರಲ್ಲಿರೊಬ್ಬದಾರ ದರ್ಶನ್ ಹಾಗೂ ಅವರ ಸಹಚರರು ಒಬ್ಬ ಆಮಾಯಕ ವ್ಯಕ್ತಿಯನ್ನು ಚಿತ್ರ ಹಿಂಸೆಕೊಟ್ಟು ಆಮಾನುಶವಾಗಿ ಹತ್ಯೆ ಮಾಡಿರುವುದನ್ನು ನಮ್ಮ ಸಂಘಟನೆ ತೀವ್ರವಾಗಿ ಖಂಡಿಸುತ್ತೇವೆ.
ಸಾರ್ವಜನಿಕರ ಜೀವನದಲ್ಲಿರುವ ನಟರು ಇನ್ನೊಬ್ಬರಿಗೆ ಮಾದರಿಯಾಗುವಂತೆ ತಮ್ಮ ಜೀವನವನ್ನು ನಡೆಸಬೇಕು ಆದರೆ ನಟ ದರ್ಶನ್ ಇದಕ್ಕೆ ವ್ಯತಿರಿಕ್ತ ವ್ಯಕ್ತಿವನ್ನು ಹೊಂದಿದ್ದು ಇವರಿಂದ ಸಮಾಜ ಎನ್ನನ್ನು ನೀರಿಕ್ಷಿಸಲು ಸಾಧ್ಯ ಇಂತಹ ಮನಸ್ಥಿತಿ ಇರುವ ವ್ಯಕ್ತಿಗಳು ಬದುಕಲು ಯೋಗ್ಯರಲ್ಲ ಎಂದರು.
ಪೊಲೀಸ್ ಇಲಾಖೆಯ ಮೇಲೆ ಎಷ್ಟೆ ಒತ್ತಡ ಬಂದರು ಅದನ್ನು ಗಣನೆಗೆ ತೆಗೆದುಕೊಳ್ಳದೆ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಆರೋಪಿಗಳಿಗೆ ಶೀಘ್ರ ಗಲ್ಲು ಶಿಕ್ಷೆಗೆ ಗುರಿಪಡಿಸಬೇಕು ಹಾಗೂ ರೇಣುಕಾಸ್ವಾಮಿ ಕುಟುಂಬಕ್ಕೆ 1 ಕೋಟಿ ರೂಗಳನ್ನು ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ ತಾಲೂಕು ಅಧ್ಯಕ್ಷ ವೈ.ರಮೇಶ್ ಮಾನೆ, ನಗರಾಧ್ಯಕ್ಷ ಪ್ರೀತಮ್ ಬಾಬು, ಕಾರ್ಯದರ್ಶಿ ವಿನಾಯಕ, ಉಳ್ಳಾಗಡ್ಡಿ ಚನ್ನಬಸಪ್ಪ, ಚಂದ್ರಶೇಖರಪ್ಪ, ಎ.ಇ.ಸುರೇಶ್ಸ್ವಾಮಿ, ಆಲಿ ಆಕ್ಬರ್, ಸಿದ್ದಣ್ಣ, ಶಂಕರ್, ಗಣೆಶ್ ಮಾನೆ, ವೀರಭದ್ರಯ್ಯ, ರಮೇಶ್, ಸುರೇಶ್ ಹಾಗೂ ಇತರರಿದ್ದರು.