ದಾವಣಗೆರೆ: ಇತ್ತೀಚಿಗೆ ದಾವಣಗೆರೆ ನಗರದಲ್ಲಿ ವಕ್ಫ್ ಮಸೂದೆ -2025 ಬಿಲ್ ವಿರುದ್ಧವಾಗಿ ಪ್ರಚೋದನಾತ್ಮಕವಾಗಿ ಮಾತನಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ವಿಡಿಯೋ ಆಧರಿಸಿ ಆಹಮ್ಮದ್ ಕಬೀರ್ ಖಾನ್ ಮತ್ತು ಇತರೆಯವರ ವಿರುದ್ಧ ಆಜಾದ್ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಲಾಗಿರುತ್ತದೆ.
ಸದರಿ ಪ್ರರಕಣದ ಆರೋಪಿತರ ಪತ್ತೆ ಕಾರ್ಯಕ್ಕೆ ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಐಪಿಎಸ್ ರವರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಶ್ರೀ ವಿಜಯಕುಮಾರ ಎಂ ಸಂತೋಷ್ ಹಾಗೂ ಶ್ರೀ ಜಿ ಮಂಜುನಾಥ ರವರ ಹಾಗೂ ನಗರ ಉಪ ವಿಭಾಗದ ಡಿವೈಎಸ್ಪಿ ಶ್ರೀ ಶರಣ ಬಸವೇಶ್ವರ ಬಿ ರವರ ಮಾರ್ಗದರ್ಶನದಲ್ಲಿ ಆಜಾದ್ ನಗರ ಪೊಲೀಸ್ ನಿರೀಕ್ಷಕರಾದ ಶ್ರೀ ಅಶ್ವಿನ್ ಕುಮಾರ ಹಾಗೂ ಅಧಿಕಾರಿ ಸಿಬ್ಬಂದಿಗಳ ತಂಡ ಮೇಲ್ಕಂಡ ಪ್ರಕರಣದಲ್ಲಿನ ಆರೋಪಿತರಾದ ಎ2. ಅಬ್ದುಲ್ ಗನಿ, 56 ವರ್ಷ , ಭಾಷನಗರ, ದಾವಣಗೆರೆ, ಎ3. ಮಹಮ್ಮದ್ ಜುಬೇರ್, 40 ವರ್ಷ , ಭಾಷನಗರ, ದಾವಣಗೆರೆ ರವರುಗಳನ್ನು ದಾವಣಗೆರೆಯಲ್ಲಿ ಬಂದಿಸಲಾಗಿರುತ್ತದೆ. ಪ್ರಕರಣದ ಎ1 ಆರೋಪಿತನನ್ನು ಶೀಘ್ರದಲ್ಲಿಯೇ ಬಂಧಿಸಲಾಗುವುದು.
ಸದರಿ ಪ್ರಕರಣದ ಆರೋಪಿತರನ್ನು ಬಂಧಿಸುವಲ್ಲಿ ಯಶಸ್ವಿಯಾದ ಪೊಲೀಸ್ ಅಧಿಕಾರಿ ಸಿಬ್ಬಂದಿಗಳನ್ನು ಪೊಲೀಸ್ ಅಧೀಕ್ಷಕರಾದ ಶ್ರೀಮತಿ ಉಮಾ ಪ್ರಶಾಂತ್ ಪ್ರಶಂಸಿಸಿರುತ್ತಾರೆ.
ಸಾರ್ವಜನಿಕರ ಗಮನಕ್ಕೆ
ದಾವಣಗೆರೆ ಜಿಲ್ಲೆಯ ಸಾರ್ವಜನಿಕರ ಗಮನಕ್ಕೆ ತರಬಯಸುವುದೇನೆಂದರೆ, ವಾಟ್ಸ್ಆಪ್, ಫೇಸ್ಬುಕ್, ಇನ್ಸ್ಟಾಗ್ರಾಮ್, ಟ್ವಿಟ್ಟರ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ರೀತಿಯ ಪ್ರಚೋದನಕಾರಿ, ವ್ಯಕ್ತಿ ನಿಂದನೆ, ಧಾರ್ಮಿಕ ನಿಂದನೆ, ದ್ವೇಷ ಭಾಷಣ, ದೇಶ ವಿರೋಧಿ ಪೋಸ್ಟ್ಗಳು ವಿಶೇಷವಾಗಿ ವಕ್ಷ್ ಬಿಲ್ ಸಂಬಂಧಿಸಿದಂತೆ ಹಾಗೂ ಇತ್ಯಾದಿ ಅಕ್ಷೇಪರ್ಹ ಪೋಸ್ಟ್ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕುವುದು ಮತ್ತು ಶೇರ್ ಮಾಡುವುದು, ಕೆಟ್ಟದಾಗಿ ಕಾಮೇಂಟ್ ಮಾಡುವುದು ಕಾನೂನಿಗೆ ಬಾಹಿರವಾಗಿದ್ದು, ಅಂತ ಪೋಸ್ಟ್ಗಳನ್ನು ಮಾಡುವಂತಹ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಸಾಮಾಜಿಕ ಜಾಲಾತಾಣಗಳ ಬಳಕೆಯಲ್ಲಿರಲಿ ಎಚ್ಚರ ಎಂದು ಈ ಮೂಲಕ ಜಿಲ್ಲಾ ಪೊಲೀಸ್ ಅಧೀಕ್ಷಕಕರವರು ತಿಳಿಸಿರುತ್ತಾರೆ.