ದಾವಣಗೆರೆ.ಅ.4 (Davanagere); ಚೆಸ್ ಕ್ಲಬ್ ಆಯೋಜಿಸಿರುವ “ಪುನೀತ್ ರಾಜ್ ಕುಮಾರ್ ಕಪ್ ” ಪಂದ್ಯಾವಳಿಯನ್ನು ಎಂ.ಸಿ.ಸಿ ಬಿ ಬ್ಲಾಕಿನಲ್ಲಿ ಸಚಿವರ ನಿವಾಸದ ಆವರಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಎಸ್.ಮಲ್ಲಿಕಾರ್ಜುನ್ ಹಾಗೂ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಉದ್ಘಾಟನೆ ಮಾಡಿದರು.
ಪಾಲಿಕೆಯ ಮಹಾಪೌರರಾದ ಚಮನ್ ಸಾಬ್, ದೂಡ ಅಧ್ಯಕ್ಷರಾದ ದಿನೇಶ್ ಕೆ ಶೆಟ್ಟಿ, ಪಾಲಿಕೆ ಸದಸ್ಯರಾದ ಗಡಿಗುಡಾಳ್ ಮಂಜುನಾಥ್, ಎ.ಬಿ ರಹೀಮ್ ಸಾಬ್, ಸವಿತಾ ಹುಲ್ಮನೆ ಗಣೇಶ್, ಅನಿತಾ ಬಾಯಿ, ಕಾಂಗ್ರೆಸ್ ಮುಖಂಡರಾದ ಗಣೇಶ್ ಹುಲ್ಮನೆ, ಕಾರ್ಯಕರ್ತರು, ಕ್ರಿಡಾಪಟುಗಳು, ಮತ್ತಿತರರು ಉಪಸ್ಥಿತರಿದ್ದರು.