ದಾವಣಗೆರೆ: ಜಿಲ್ಲೆಯ ಅನ್ನದಾತರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದೆ. ಮೆಕ್ಕೆಜೋಳ ಮಾರಾಟಕ್ಕೆ ಜಿಲ್ಲೆಯ ರೈತರ ಅಲೆಯುವಂತಿಲ್ಲ. ರೈತರಿಂದ ನೇರವಾಗಿ ಮೆಕ್ಕೆಜೋಳ ಖರೀದಿಸಲು ಕೆಎಂಎಫ್ ಮುಂದಾಗಿದ್ದು, ಆ ಪ್ರಕ್ರಿಯೆ ಆರಂಭವಾಗಿದೆ.
ಮೆಕ್ಕೆಜೋಳಕ್ಕೆ ಸರ್ಕಾರ ಕನಿಷ್ಠ ಬೆಂಬಲ ಬೆಲೆ ನಿಗದಿ ಮಾಡಿದ್ದು, ಕ್ವಿಂಟಾಲ್ ಗೆ ₹2400 ದರದಲ್ಲಿ ಖರೀದಿಸಲಿದೆ. ( ಸರ್ಕಾರ ನಿಗದಿಪಡಿಸಿರುವ ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಬೆಂಬಲ ಬೆಲೆ ₹2225 ಎರಡು ಗೋಣಿ ಚೀಲದ ಬೆಲೆ ಮತ್ತು ಸಾಗಾಣೆ ವೆಚ್ಚ ₹175 ). ಒಟ್ಟು 12 ಖರೀದಿ ಕೇಂದ್ರ ತೆರೆಯಲಾಗುತ್ತಿದ್ದು ನವೆಂಬರ್ 14 ರೊಳಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲು ನಿರ್ಧರಿಸಲಾಗಿದೆ.
ಎಲ್ಲೆಲ್ಲಿ ಖರೀದಿ ?
ಎಚ್.ಡಿ ಕೋಟೆ, ದಾವಣಗೆರೆ, ಹಾವೇರಿ, ಚಿತ್ರದುರ್ಗ, ಹಗರಿಬೊಮ್ಮನಹಳ್ಳಿ, ಪಿರಿಯಾಪಟ್ಟಣ, ಗೌರಿಬಿದನೂರು, ಶಿಗ್ಗಾವಿ, ಹೊನ್ನಾಳಿ, ಗದಗ, ಹಿರೇಕೆರೂರು ಮತ್ತು ರಾಣೆಬೆನ್ನೂರು ಮಾರುಕಟ್ಟೆಗಳಲ್ಲಿ ಕೆಎಂಎಫ್ ಮೆಕ್ಕೆಜೋಳ ಖರೀದಿಸಲಿದೆ.