ದಾವಣಗೆರೆ (DAVANAGERE ) : ನಗರದ ಪುಟಾಣಿ ಸ್ತುತಿ ಎಸ್. 7ನೇ ವಯಸ್ಸಿನಲ್ಲಿ ಕಣ್ಣು ಮುಚ್ಚಿ ಪಿರಾಮಿಂಕ್ಸ್ ರೂಬಿಕ್ ಕ್ಯೂಬ್ (Pyraminx Rubic Cube) ಅತ್ಯಂತ ವೇಗವಾಗಿ 26.95 ಸೆಕೆಂಡ್ ಗಳಲ್ಲಿ ವಿವಿಧ ಬಣ್ಣಗಳ ಪಿರಾಮಿಂಕ್ಸ್ ರೂಬಿಕ್ ಕ್ಯೂಬಿಕ್ ನ್ನು ಒಂದೆಡೆ ಸೇರಿಸುವ ಮೂಲಕ ವಿಶ್ವ ದಾಖಲೆ ಮಾಡಿದ್ದಾಳೆ.
ದಾವಣಗೆರೆಯ ವೈಬಿಎಸ್ (YBS) ಕುಟುಂಬದ ಕುಡಿಯಾಗಿರುವ ಸ್ತುತಿ, ಲಯನ್ಸ್ ಕ್ಲಬ್ ಮಾಜಿ ಅಧ್ಯಕ್ಷರು, ಎಸ್.ಕೆ.ಪಿ.ಬ್ಯಾಂಕ್ ನಿರ್ದೇಶಕ ವೈ.ಬಿ.ಸತೀಶ್ , ಶ್ರೀಮತಿ ಶ್ರೀಲಕ್ಷ್ಮೀ ಅವರ ಮೊಮ್ಮಗಳು ಹಾಗೂ ಕರ್ನಾಟಕ ಆರ್ಯವೈಶ್ಯ ಯುವಜನ ಮಹಾಸಭಾದ ರಾಜ್ಯಾಧ್ಯಕ್ಷರು, ದಾವಣಗೆರೆ ಎಸ್.ಕೆ.ಪಿ. ರಸ್ತೆಯ ವಾಸವಿ ಯುವಜನ ಸಂಘದ ಅಧ್ಯಕ್ಷರಾದ ಸುನಿಲ್ ಎಸ್ ಮತ್ತು ಶ್ರೀಮತಿ ಚಂದ್ರಿಕಾ ದಂಪತಿಗಳ ಪುತ್ರಿ.
ನಗರದ ಆರಿಜಿನ್ ಪಬ್ಲಿಕ್ ಶಾಲೆಯಲ್ಲಿ 2ನೇ ತರಗತಿ ಓದುತ್ತಿರುವ ಸ್ತುತಿ ಗಾಂಧಾರಿ ವಿದ್ಯೆ (Mid Brain Activation) ತರಬೇತಿ ಪಡೆದಿರುವ ಸ್ತುತಿ ಕಣ್ಣು ಮುಚ್ಚಿ ಬಣ್ಣಗಳನ್ನು ಗುರುತಿಸುವುದು, ಓದುವುದರಲ್ಲಿ, ಬರೆಯುವುದರಲ್ಲಿ, ಚಿತ್ರಗಳಿಗೆ ಬಣ್ಣ ತುಂಬುವುದರಲ್ಲಿ ಉತ್ಕೃಷ್ಟ ಜ್ಞಾನ ಹೊಂದಿದ್ದಾಳೆ ಹಾಗೂ ಭರತನಾಟ್ಯ, ಚೆಸ್ ಸ್ಪರ್ಧೆಯಲ್ಲಿ ಪ್ರವೀಣೆ.