ದಾವಣಗೆರೆ (DAVANAGERE) : ರಾಜೀವ ಗಾಂಧಿ ಆರೋಗ್ಯ ವಿಶ್ವವಿದ್ಯಾಲಯದ ಸೆನೆಟ್ ಚುನಾವಣೆಯಲ್ಲಿ ಅತ್ಯಧಿಕ ಮತಗಳನ್ನು ಪಡೆಯುವ ಮೂಲಕ ಜಯದಾಖಲಿಸಿದ ದಾವಣಗೆರೆ ಜೆಜೆಎಂ ವೈದ್ಯಕೀಯ ಕಾಲೇಜಿನ ಔಷಧಶಾಸ್ತ್ರ ವಿಭಾಗದ ಪ್ರೋಫೆಸರ್ ಡಾ ಶ್ರೀನಿವಾಸ್ ಎಲ್ ಡಿ ಅವರಿಗೆ ಸಂಸದರಾದ ಡಾ.ಪ್ರಭಾ ಮಲ್ಲಿಕಾರ್ಜುನ್ ಶುಭಕೋರಿದರು.
ಪ್ರೊ.ಡಾ.ಶ್ರೀನಿವಾಸ್ ಎಲ್.ಡಿ ಅವರು ಪ್ರಥಮ ಪ್ರಾಶಸ್ತ್ಯದಲ್ಲಿ ಮತಗಳನ್ನ ಪಡೆದು ಅಭೂತಪೂರ್ವ ಜಯ ದಾಖಲಿಸಿದ್ದಾರೆ.ಕಳೆದ ಡಿ.10 ರಂದು ಜೆಜೆಎಂ ವೈದ್ಯಕೀಯ ಕಾಲೇಜು ಆವರಣದಲ್ಲಿ ಸೆನೆಟ್ ಚುನಾವಣೆಗೆ ಮತದಾನ ಪ್ರಕ್ರಿಯೆ ನಡೆದಿತ್ತು.
ರಾಜ್ಯಾದ್ಯಂತ ಅರ್ಹ ಅಭ್ಯರ್ಥಿಗಳು ಈ ಚುನಾವಣೆಗೆ ಸ್ಪರ್ಧೆ ಮಾಡಿದ್ದರು.ಪ್ರಸ್ತುತ ಚುನಾವಣೆಯಲ್ಲಿ ಚಲಾವಣೆಗೊಂಡು ಸ್ವೀಕೃತವಾದ 6,217 ಮತಗಳಲ್ಲಿ ಪ್ರೊ.ಡಾ.ಶ್ರೀನಿವಾಸ್ ಎಲ್ .ಡಿ ಅವರು ಒಟ್ಟು 875 ಮತಗಳನ್ನ ಪಡೆದು ಆಯ್ಕೆಯಾಗಿದ್ದಾರೆ.
ಇದರಲ್ಲಿ ಪ್ರಥಮ ಪ್ರಾಶಸ್ತ್ಯದ 670 ಮತಗಳನ್ನ ಪಡೆಯುವ ಮೂಲಕ ಎಣಿಕೆಯ ಮೊದಲ ಸುತ್ತಿನಲ್ಲಿಯೇ, ವಿಜಯದೆಡೆಗೆ ದಾಪುಗಾಲಿಟ್ಟು, ಗೆಲವು ದಾಖಲಿಸುವ ಮೂಲಕ ಅಂತಿಮವಾಗಿ ಡಾ.ಶ್ರೀನಿವಾಸ್ ಅವರು ಸೆನೆಟ್ ಗೆ ಆಯ್ಕೆಯಾಗಿದ್ದಾರೆ.
ಬಾಪೂಜಿ ವಿದ್ಯಾಸಂಸ್ಥೆ ಯ ಆಡಳಿತ ಮಂಡಳಿ ಸದಸ್ಯರಾದ ಸಂಪಣ್ಣ ಮುತಾಲೀಕ್, ಎಸ್ ಎಸ್ ಮೆಡಿಕಲ್ ಕಾಲೇಜು ಪ್ರಾಂಶುಪಾಲರಾದ ಡಾ ಬಿ.ಎಸ್ ಪ್ರಸಾದ್, ಎಸ್ಎಸ್ಐಎಮ್ಎಸ್ ವ್ಯವಸ್ಥಾಪಕರಾದ ರವಿ ಆರ್ ಜಿ, ಡಾ ಸತೀಶ್, ಡಾ ಹರೀಶ್, ಸುಶೃತ ಆಸ್ಪತ್ರೆಯ ಡಾ ಸತೀಶ್ ಬಿ ಜಿ, ಡಾ ಹರೀಶ್ ಬಿ ಜಿ, ಡಾ ಶಿವಶಂಕರ್, ಡಾ ಚಂದ್ರಪ್ಪ, ದವನ್ ಕಾಲೇಜಿನ ವೀರೇಶ್ ಪಟೇಲ್ ಶುಭಕೋರಿದ್ದಾರೆ..