ದಾವಣಗೆರೆ .ಜೂ.7 ; ಪ್ರಸಕ್ತ ಸಾಲಿಗೆ ಮೈಸೂರಿನ ರಂಗಾಯಣದ ಭಾರತೀಯ ರಂಗಶಿಕ್ಷಣ ತರಬೇತಿಗೆ ಡಿಪ್ಲೋಮಾ ಕೋರ್ಸ್‍ನ್ನು ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ರಂಗ ತರಬೇತಿ ಕೋರ್ಸ್ ಗೆ ಸೇರಬಯಸುವ ವಿದ್ಯಾರ್ಥಿಗಳು ರಂಗಭೂಮಿಯ ಪ್ರಾಥಮಿಕ ಅನುಭವ ಹೊಂದಿರಬೇಕು. ಕನಿಷ್ಠ ದ್ವಿತೀಯ ಪಿಯುಸಿ (10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ವಯೋಮಿತಿ ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕಡೆಯ ದಿನಾಂಕಕ್ಕೆ 18 ವರ್ಷಗಳು ತುಂಬಿದ ಮತ್ತು 28 ವರ್ಷದೊಳಗಿರಬೇಕು. ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ವ್ಯವಸ್ಥೆ ಕಲ್ಪಿಸಲಾಗುವುದು ಮತ್ತು ಮಾಹೆಯಾನ ರೂ.5,000/-ಗಳ ವಿದ್ಯಾರ್ಥಿ ವೇತನ ಪಾವತಿಸಲಾಗುವುದು.
ಭಾರತೀಯ ರಂಗಶಿಕ್ಷಣ ಕೇಂದ್ರಕ್ಕೆ ಸೇರಬಯಸುವ ವಿದ್ಯಾರ್ಥಿಗಳು ಜೂನ್ 5 ರಿಂದ ರಂಗಾಯಣದ ವೆಬ್ ಸೈಟ್ http://rangayanamysore karnataka gov in ನಲ್ಲಿ ಅರ್ಜಿಯನ್ನು ಡೌನ್‍ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿ ಅವಧಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ಸಾಮಾನ್ಯ ವರ್ಗ ರೂ.230/-, ಪ.ಜಾ. ಪ.ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ. 180/-ಗಳು (ರಂಗಕೈಪಿಡಿ ಶುಲ್ಕ ರೂ.30/- ಒಳಗೊಂಡಂತೆ) ಡಿ.ಡಿ.ಯನ್ನು ನಿರ್ದೇಶಕರು, ರಂಗಾಯಣ, ಮೈಸೂರು (ಡೆಪ್ಯೂಟಿ ಡೈರೆಕ್ಟರ್ ರಂಗಾಯಣ ಮೈಸೂರು ) ಇವರ ಹೆಸರಿನಲ್ಲಿ ಪಡೆದು ರಂಗಾಯಣದ ವಿಳಾಸಕ್ಕೆ ಜೂನ್ 20 ರೊಳಗಾಗಿ ಕಳುಹಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ:0821-2512639, 9148827720 ನ್ನು ಸಂಪರ್ಕಿಸಲು ವೃತ್ತಿ ರಂಗಭೂಮಿ ರಂಗಾಯಣದ ವಿಶೇಷಾಧಿಕಾರಿ ತಿಳಿಸಿದ್ದಾರೆ.