ಹರಿಹರ : ಹೆಚ್.ಐ.ವಿ. ಎಂಬ ವೈರಾಣುವಿನಿಂದ ಬರುವ ಏಡ್ಸ್ ರೋಗದಿಂದಾಗಿ ಮನುಷ್ಯನ ರೋಗ ನಿರೋಧಕ ಶಕ್ತಿ ಕ್ಷೀಣವಾಗುತ್ತದೆ ಎಂದು ಸರ್ಕಾರ ಅಸ್ಪತ್ರೆಯ ವೈದ್ಯರಾದ ಡಾ.ಶೈಲಜಾ ಪಾಟೀಲ್ ಹೇಳಿದರು.
ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರೆಡ್‌ಕ್ರಾಸ್ ಸಮಿತಿ ಮತ್ತು ಸರ್ಕಾರಿ ಆಸ್ಪತ್ರೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ‘ಹೆಚ್.ಐ.ವಿ/ಏಡ್ಸ್ ಜಾಗೃತಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರೋಗ್ಯ ಇಲಾಖೆಯ ಇತ್ತಿಚೀನ ಅವಲೋಕನದ ಪ್ರಕಾರ ಹೆಚ್.ಐ.ವಿ ವೈರಾಣುವಿಗೆ ಯುವಕರು ಹೆಚ್ಚು ತುತ್ತಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವಕರು ಜಾಗರುಕರಾಗಬೇಕು ಹಾಗೂ ಸಮಾಜದ ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸಬೇಕು ಎಂದು ವಿದ್ಯಾರ್ಥಿಗಳಿಗೆ ಮನವಿ ಮಾಡಿದರು.
ಹೆಚ್.ಐ.ವಿ. ಎಂಬ ವೈರಾಣುವಿನಿಂದ ಬರುವ ಏಡ್ಸ್ ರೋಗದಿಂದಾಗಿ ಮನುಷ್ಯನ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಈ ರೋಗವು ಹರಡಲು ಪ್ರಮುಖ ನಾಲ್ಕು ಕಾರಣಗಳಿವೆ ಇದರ ಬಗ್ಗೆ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಅವರು ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದರು.
ಏಡ್ಸ್ ಸೋಂಕಿತರ ರಕ್ತ ನೀಡುವುದರಿಂದ ಅಥವಾ ಪಡೆಯುವುದರಿಂದ, ಅಸುರಕ್ಷಿತ ಸೂಜಿ/ಸಿರಂಜು ಬಳಕೆ, ಸೋಂಕಿತ ತಾಯಿಯ ಎದೆಹಾಲು ಮಗವು ಸೇವಿಸುವುದರಿಂದ ಹಾಗೂ ಅಸುರಕ್ಷಿತ ಲೈಂಗಿಕ ಸಂಬAಧಗಳಿAದ ಈ ರೋಗಾಣು ಹರಡುತ್ತದೆ. ಸೋಂಕಿತರನ್ನು ಮಾತನಾಡಿಸುವುದರಿಂದ, ಕೈಕುಲುಕುವುದರಿಂದ, ಜೊತೆಯಲ್ಲಿರುವುದರಿಂದ ಈ ರೋಗ ಹರಡುವ ಸಾಧ್ಯತೆ ಇಲ್ಲ. ಏಡ್ಸ್ ರೋಗವನ್ನು ಸಂಪೂರ್ಣವಾಗಿ ವಾಸಿ ಮಾಡಲಾಗದು. ಆದರೆ, ಸರ್ಕಾರಿ ಆಸ್ಪತ್ರೆಗಳಲ್ಲಿನ ಎ.ಆರ್.ಟಿ ಕೇಂದ್ರದಲ್ಲಿ ಉಚಿತ ಔಷಧ ನೀಡಲಾಗುವುದು. ಯಾವುದೋ ಕಾರಣಕ್ಕೋ ಅಥವಾ ಸ್ವಯಂ ತಪ್ಪಿನಿಂದಲೋ ಬರುವ ಈ ರೋಗದ ಸೋಂಕಿತರಿಗೆ ಸರ್ಕಾರವು ಪ್ರತಿ ತಿಂಗಳು ಅರ್ಥಿಕ ಸಹಾಯ, ಆಶ್ರಯ ಮನೆಯೊಂದಿಗೆ ಇನ್ನು ಸಾಕಷ್ಟು ಸೌಲಭ್ಯಗಳನ್ನು ನೀಡುತ್ತಿದೆ ಎಂದು ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಹೆಚ್.ವಿರುಪಾಕ್ಷಪ್ಪ ಅವರು ಹಾಗೂ ಪತ್ರಿಕೋದ್ಯಮ ವಿಭಾಗದ ಅಧ್ಯಾಪಕರಾದ ಡಾ.ಯತೀಶ್ ಎಲ್.ಕೋಡಾವತ್ ಅವರು ಮಾತನಾಡಿದರು.
ಈ ಸಮಯದಲ್ಲಿ ಸುಮಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರು ಉಚಿತವಾಗಿ ರಕ್ತ ಪರೀಕ್ಷೆಯನ್ನು ನಡೆಸಲಾಯಿತು. ಏಡ್ಸ್ ರೋಗದ ಕುರಿತು ಆಯೋಜಿಸಿದ್ದ ಪ್ರಬಂಧ ಸ್ಪರ್ಧೇಯಲ್ಲಿ ವಿಜೇತರಾದವರಿಗೆ ಗೌರವಧನ ಮತ್ತು ಪ್ರಶಸ್ತಿ ವಿತರಿಸಲಾಯಿತು.
ಕನ್ನಡ ವಿಭಾಗದ ಮುಖ್ಯಸ್ಥರು, ಸಹ ಪ್ರಾಧ್ಯಾಪಕರು ಆದ ಡಾ.ಗೌರಮ್ಮ ಎಸ್.ಎಂ ಅವರು, ಅಧ್ಯಾಪಕರಾದ ಡಾ.ಎಸ್.ಆರ್.ಮಾಲತೇಶ್, ಸರ್ಕಾರಿ ಆಸ್ಪತ್ರೆಯ ತಾಂತ್ರಿಕ ತಜ್ಞರಾದ ಟಿಪ್ಪು ಸುಲ್ತಾನ ಅವರುಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಅರ್ಪಿತ್ರಾ ಪ್ರಾರ್ಥಿಸಿದರು, ರೆಡ್‌ಕ್ರಾಸ್ ಸಮಿತಿ ಸಂಯೋಜಕರಾದ ಡಾ.ಅನಂತನಾಗ್.ಹೆಚ್.ಪಿ, ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ವಿದ್ಯಾರ್ಥಿ ನಾಗವೇಣಿ ಪಿ.ಬಿ, ಪ್ರಜ್ವಲ್ ಕಾರ್ಯಕ್ರಮ ನಿರ್ವಹಿಸಿದರು. ಚೈತ್ರಾ ಎಂ.ಎಸ್ ವಂದಿಸಿದರು.