ಹರಿಹರ (Harihara): ಅಪಾಯದ ಅಂಚಿನಲ್ಲಿರುವ ತುಂಗಭದ್ರ ನದಿಯಲ್ಲಿ 10 ವರ್ಷಗಳ ಅವಧಿಗೆ ಮರಳುಗಾರಿಕೆ ನಿಷೇಧಿಸುವುದು ಹಾಗೂ ನದಿ ಖರಾಬ್ ಜಮೀನನ್ನು ರಕ್ಷಿಸಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಸ್ಥಾಪಿತ) ತಾಲ್ಲೂಕು ಘಟಕದಿಂದ ಶುಕ್ರವಾರ ಇಲ್ಲಿನ ತಾಲ್ಲೂಕು ಕಚೇರಿಯ ಶಿರಸ್ತೆದಾರ್ ಅಶೋಕ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ತುಂಗಭದ್ರ ನದಿಯು ಮಧ್ಯ, ಉತ್ತರ ಮತ್ತು ಕಲ್ಯಾಣ ಕರ್ನಾಟಕದ ಜೀವ ನದಿಯಾಗಿದೆ.ಕಳೆದ 2 ದಶಕಗಳಿಂದ ಸಕ್ರಮ ಹಾಗೂ ಅಕ್ರಮ ವಿಧಾನದಲ್ಲಿ ಅತಿಯಾದ ಮರಳು ಗಾರಿಕೆ ನಡೆಸಿರುವುದು ಹಾಗೂ ನದಿ ದಡದ ನದಿ ಖರಾಬ್ ಪ್ರದೇಶದ ಜಮೀನಿನಲ್ಲಿಯೂ ಅತಿಯಾದ ಮಣ್ಣುಗಣಿಗಾರಿಕೆ ನಡೆಸಿದ ಪರಿಣಾಮ ಈ ನದಿಯ ಅಸ್ತಿತ್ವಕ್ಕೆ ತೀವ್ರಅಪಾಯಎದುರಾಗಿದೆಎಂದುನಂತರ ಮಾತನಾಡಿದ ಕದಸಂಸ ತಾಲ್ಲೂಕು ಸಂಚಾಲಕ ಪಿ.ಜೆ.ಮಹಾಂತೇಶ್ ಹೇಳಿದರು.
ಶಿವಮೊಗ್ಗ, ದಾವಣಗೆರೆ, ಹಾವೇರಿ, ವಿಜಯನಗರ, ಕೊಪ್ಪಳ ಹಾಗೂ ಇತರೆ ಜಿಲ್ಲೆಗಳಲ್ಲಿ ಈ ನದಿಯು ಹರಿದು ಬರುವ ಪ್ರದೇಶಗಳ ಬ್ಲಾಕ್ಗಳಿಗೆ ಸರ್ಕಾರದಿಂದಲೆ ಮರಳುಗಾರಿಕೆ ನಡೆಸಲು ಟೆಂಡರ್ ನೀಡಲಾಗುತ್ತಿದೆ. ಬಹುತೇಕ ಟೆಂಡರ್ದಾರರು ನಿಯಮ ಉಲ್ಲಂಘಿಸಿ ನದಿಯ ಒಡಲನ್ನು ಬಗೆದು ಮರಳುಗಾರಿಕೆ ನಡೆಸುತ್ತಿದ್ದಾರೆ. ಉಳಿದಂತೆ ಟೆಂಡರ್ ಪ್ರದೇಶಕ್ಕೆ ಒಳಪಡದ ಹಾಗೂ ಟೆಂಡರ್ ಅವಧಿ ಮುಗಿದಾಗ ಅಕ್ರಮ ಮರಳುಗಾರಿಕೆಯು ನಡೆಯುತ್ತಿರುವುದು ವಾಸ್ತವ ವಿಷಯವಾಗಿದೆ. ಹೀಗೆ ಅಕ್ರಮ ಮತ್ತು ಸಕ್ರಮರೂಪದಲ್ಲಿ ಅತಿಯಾದ ಮರಳುಗಾರಿಕೆಯು ನದಿ ದಡ ಹಾಗೂ ನದಿ ಒಡಲಿನ ರಚನೆಯನ್ನೆ ಹದಗೆಡಸಿದೆ. ನದಿ ಪಾತ್ರದಲ್ಲಿ ಮರಳಿಗಾಗಿ 10 ರಿಂದ 20 ಅಡಿ ಆಳದವರೆಗೆ ಗುಂಡಿಗಳನ್ನು ತೋಡಿದ್ದು ನದಿಯನ್ನು ಆಶ್ರಯಿಸಿದ ಜಲಚರ, ಪ್ರಾಣಿ,ಪಕ್ಷಿ, ಜನ, ಜಾನುವಾರುಗಳ ಅಸ್ತಿತ್ವಕ್ಕೆ ತೀವ್ರಧಕ್ಕೆ ಒದಗಿಸಿದೆ.
ನದಿಗೆ ಇಳಿಯುವ ಅಸಂಖ್ಯಾತ ಜನ, ಜಾನುವಾರುಗಳು ಈ ಗುಂಡಿಗಳಲ್ಲಿ ಸಿಲುಕಿ ಅಮೂಲ್ಯವಾದ ಪ್ರಾಣವನ್ನು ಕಳೆದುಕೊಂಡಿದ್ದಾರೆ.ಇದರಲ್ಲಿ ಬೆರಳೆಣಿಕೆಯಷ್ಟು ಪ್ರಕರಣಗಳು ದಾಖಲಾಗಿದ್ದರೆ, ಉಳಿದವುಗಳನ್ನು ವ್ಯವಸ್ಥಿತವಾಗಿ ಮುಚ್ಚಿಹಾಕಲಾಗಿದೆ. ಇನ್ನು ಈ ನದಿಯ ನೂರಾರು ಎಕರೆ ನದಿ ಬದಿಯ ನದಿ ಖರಾಬ್ ಜಮೀನಿನ ಫಲವತ್ತಾದ ಮಣ್ಣು, ಸಾವಿರಾರು ಗಿಡ,ಗಂಟಿ, ಕುರುಚಲು ಕಾಡುಗಳು ಮಣ್ಣು ಮಾಫಿಯಾಕ್ಕೆ ಬಲಿಯಾಗಿದೆ. ಅಕ್ರಮ ಹಾಗೂ ಅತಿಯಾದ ಮಣ್ಣು ಗಣಿಗಾರಿಕೆಯಿಂದಾಗಿ ಈ ನದಿಯ ಬಹುತೇಕ ನದಿ ಖರಾಬ್ ಜಮೀನು 10 ರಿಂದ 20 ಅಡಿ ಆಳದ ಗುಂಡಿಮಯವಾಗಿದೆ.
ಮಣ್ಣು ಮಾಫಿಯಾಕ್ಕೆ ನದಿ ದಡದ ಹಲವು ರುದ್ರಭೂಮಿ, ಖಬರಸ್ತಾನ್ಗಳು ಅಸಿತ್ವ ಕಳೆದುಕೊಂಡಿವೆ, ನದಿಗೆ ತಲುಪಲುಇದ್ದ ಬಂಡಿರಸ್ತೆ, ಕಾಲುದಾರಿಗಳು ಮಾಯವಾಗಿವೆ. ಒಟ್ಟಾರೆನೂರಾರು ವರ್ಷಗಳಿಂದ ಮಧ್ಯ ಮತ್ತು ಕಲ್ಯಾಣಕರ್ನಾಟಕದ ಜೀವ ನದಿ ಎನಿಸಿದ ಈ ನದಿಯು ಅಳಿವಿನ ಅಂಚಿಗೆತಲುಪುತ್ತಿದೆ. ಹೀಗಾಗಿ ಸರ್ಕಾರಕ್ಕೆ ಕೆಲವು ವರ್ಷಗಳ ಕಾಲ ಆದಾಯಕ್ಕೆ ತೊಂದರೆಯಾದರೂ ಪರವಾಯಿಲ್ಲ, ನದಿಯನ್ನು ಉಳಿಸುವ ಸಲುವಾಗಿ ಈ ನದಿಯ ಬ್ಲಾಕ್ಗಳಲ್ಲಿ 10 ವರ್ಷಗಳ ಅವಧಿಗೆ ಮರಳು ಗಣಿಗಾರಿಕೆಯನ್ನೂ ಸಂಪೂರ್ಣವಾಗಿ ಸ್ಥಗಿತಗೊಳಿಸಬೇಕು ಹಾಗೂ ನದಿ ಖರಾಬ್ ಜಮೀನಿನ ರಕ್ಷಣೆಗಾಗಿ ಸೂಕ್ತ ತುರ್ತು ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿದರು.
Read also : ರಂಗಭೂಮಿ ದಿನಾಚರಣೆ | ಶಿಕ್ಷಣ,ಸಾಮಾಜಿಕ ಬದಲಾವಣೆಗೆ ರಂಗಭೂಮಿ ಪ್ರಬಲ ಸಾಧನ : ಅರುಣಕುಮಾರ್
ಸಂಘಟನೆಯ ಪದಾಧಿಕಾರಿಗಳಾದ ಚೌಡಪ್ಪ ಸಿ.ಭಾನುವಳ್ಳಿ, ಭಾನುವಳ್ಳಿ ಗ್ರಾಮ ಪಂಚಾಯ್ತಿ ಸದಸ್ಯ ಮಂಜಪ್ಪ, ರಾಜಪ್ಪ ಬೆಣ್ಣೆ, ಜಿಗಳಿಯ ಚೌಡಪ್ಪ, ಸ್ವಾಮಿ ಲಿಂಗಪ್ಪ, ಪರಶುರಾಮ್, ರಾಜಪ್ಪ, ಹನುಮಂತರಾಜ್ಎಚ್.ಯಲವಟ್ಟಿ, ಎಳೆಹೊಳೆ ಹನುಮಂತಪ್ಪ, ಕೀರ್ತಿ ಟಿ., ರಾಜು, ಮಹೇಶ್, ಸೋಮಶೇಖರ್, ಯುವರಾಜ್ ಹೊಸಪಾಳ್ಯ, ಕಡ್ಲೆಗೊಂದಿ ತಿಮ್ಮಣ್ಣಇದ್ದರು.