ದಾವಣಗೆರೆ (Davanagere): ಹಗಲು ಹೊತ್ತಿನಲ್ಲಿ ಮನೆಗೆ ನುಗ್ಗಿ ಒಂಟಿ ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ ಮನೆ ದರೋಡೆ ಮಾಡಿದ್ದ ಆರೋಪಿತರನ್ನು ಪೊಲೀಸರು ಬಂಧಿಸಿದ್ದು. 18 ಲಕ್ಷ ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.
ಮಾ 21 ರಂದು ಶಿವಮೂರ್ತಿ ಎಸ್ ಎಂಬುವವರು ವಿದ್ಯಾ ನಗರ ಠಾಣೆಗೆ ಹಾಜರಾಗಿ 180 ಗ್ರಾಂ ತೂಕದ ಬಂಗಾರದ ಆಭರಣ, 500 ಗ್ರಾಂ ಬೆಳ್ಳಿ ಸಾಮಾನುಗಳು ಹಾಗು 15 ಸಾವಿರ ರೂ ನಗದು ಹಣವನ್ನು ದರೋಡೆ ಮಾಡಿಕೊಂಡು ಹೋಗಿದ್ದಾರೆ ಎಂದು ದೂರು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿತರ ಪತ್ತೆಗೆ ಎಸ್ಪಿ ಉಮಾ ಪ್ರಶಾಂತ ನಿರ್ದೇಶನದಲ್ಲಿ, ಎಎಸ್ಪಿಗಳಾದ ವಿಜಯಕುಮಾರ. ಎಂ. ಸಂತೋಷ್, ಜಿ..ಮಂಜುನಾಥ, ದಾವಣಗೆರೆ ನಗರ ಡಿವೈಎಸ್ಪಿ ಶರಣ ಬಸವೇಶ್ವರ ಬಿ ಮಾರ್ಗದರ್ಶನದಲ್ಲ್ಲಿ ವಿದ್ಯಾನಗರ ಠಾಣೆ ನಿರೀಕ್ಷಕಿ ಶಿಲ್ಪಾ ವೈ.ಎಸ್, ಕೆಟಿಜೆ ನಗರ ಪೊಲೀಸ್ ಠಾಣೆಯ ನಿರೀಕ್ಷಕ ಸುನಿಲ್ ಕುಮಾರ ಹೆಚ್ ಎಸ್ ನೇತೃತ್ವದಲ್ಲಿ ಅಧಿಕಾರಿ ಸಿಬ್ಬಂದಿಗಳ ಪೊಲೀಸ್ ತಂಡ ರಚಿಸಿ, ವಿವಿಧ ಆಯಾಮಗಳಲ್ಲಿ ಪ್ರಕರಣದ ತನಿಖೆ ನಡೆಸಿ ಆರೋಪಿತರಾದ ನವೀನ್ ಕುಮಾರ, ಮಂಜಪ್ಪ, ಚಂದ್ರಪ್ಪ, ಸತೀಶ ಕೆ, ವಶಕ್ಕೆ ಪಡೆದಿದ್ದಾರೆ.
ನವೀನ್ ಕುಮಾರ.ಜಿ.ಎಸ್ ಈತನ ವಿರುದ್ಧ ದಾವಣಗೆರೆ ಜಿಲ್ಲೆಯ ದಾವಣಗೆರೆ ಗ್ರಾಮಾಂತರ, ಹದಡಿ, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಗಳು ಸೇರಿದಂತೆ, ಹಾಸನ, ಚಿಕ್ಕಮಗಳೂರು, ತುಮಕೂರು, ದಕ್ಷಿಣ ಕನ್ನಡ, ಉಡುಪಿ, ಮಂಗಳೂರು, ಬೆಂಗಳೂರು, ರಾಮನಗರ, ಚಿತ್ರದುರ್ಗ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಆಂದ್ರಪ್ರದೇಶ ರಾಜ್ಯದ ರತ್ನಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದಾಖಲಾಗಿರುವ ಸರಗಳ್ಳತನ, ಮನೆಕಳ್ಳತನ, ದೇವಸ್ಥಾನ ಕಳ್ಳತನ, ಬೈಕ್ ಕಳ್ಳತನ, ಅತ್ಯಾಚಾರ, ಕೊಲೆ ಮುಂತಾದ ಹಲವು ಪ್ರಕರಣಗಳಿಗೆ ಸಂಬಂಧಿಸಿದಂತೆ ಈಗಾಗಲೇ ಒಟ್ಟು 54 ಕ್ಕೂ ಹೆಚ್ಚು ಮನೆಗಳ್ಳತನ, ಬೈಕ್ ಕಳ್ಳತನ, ಸರಗಳ್ಳತನ, ಸುಲಿಗೆ ಹಾಗೂ ಆತ್ಯಚಾರ, ಕೊಲೆಯಂತ ಘೋರ ಪ್ರಕರಣಗಳು ದಾಖಲಾಗಿದೆ.
Read also : channagere | 10 ಸಾವಿರಕ್ಕೆ ಬೇಡಿಕೆ : ಲೋಕಾ ಬಲೆಗೆ ಬೆಸ್ಕಾಂ ಇಂಜೀನಿಯರ್
ಆರೋಪಿತರಿಂದ ಒಟ್ಟು 10 ಪ್ರಕರಣಗಳಿಗೆ ಸಂಬಂಧಿಸಿದಂತೆ 18,00,000/- ರೂ ಬೆಲೆ ಒಟ್ಟು 186 ಗ್ರಾಂ ತೂಕದ ಬಂಗಾರದ ಆಭರಣಗಳು, 475 ಗ್ರಾಂ ತೂಕದ ಬೆಳ್ಳಿ ಸಾಮಾನುಗಳು ಹಾಗು 05 ಬೈಕುಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಪ್ರಕರಣದ ಆರೋಪಿತರನ್ನು ಹಾಗೂ ಸ್ವತ್ತನ್ನು ವಶಪಡಿಸಿಕೊಳ್ಳುವ ಕಾರ್ಯಚರಣೆಯಲ್ಲಿ ಭಾಗವಹಿಸಿದ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಎಎಸ್ಪಿ ವಿಜಯಕುಮಾರ ಎಂ ಸಂತೋಷ್ ಹಾಗೂ ಮಂಜುನಾಥ ಜಿ ರವರು ಶ್ಲಾಘಿಸಿದ್ದಾರೆ.