ದಾವಣಗೆರೆ (Davanagere): ಕ್ರೀಡೆಗಳು ನಮ್ಮ ಜೀವನದಲ್ಲಿ ಬಹುಮುಖಿ ಮತ್ತು ಅವಿಭಾಜ್ಯ ಪಾತ್ರವನ್ನು ವಹಿಸುತ್ತವೆ ಎಂದು ಎಸ್.ಎಸ್.ಐ.ಎಂ.ಎಸ್.ಆರ್.ಸಿ ಯ ಪ್ರಾಂಶುಪಾಲರಾದ ಡಾ.ಪ್ರಸಾದ್ ಬಿ.ಎಸ್, ತಿಳಿಸಿದರು.
ನಗರದ ಎಸ್.ಎಸ್ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನ ಕೇಂದ್ರದಲ್ಲಿ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಬಾಪೂಜಿ ವಿದ್ಯಾಸಂಸ್ಥೆಯ ಎಲ್ಲಾ ಅಂಗಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಮಹಿಳೆಯರಿಗಾಗಿ ಪಾರ್ವತಿ – 2025 ಕಲೋತ್ಸವ ಹಾಗೂ ಕ್ರೀಡೋತ್ಸವದ ಸ್ಪರ್ಧಾ ಕೂಟಕ್ಕೆ ಚಾಲನೆ ನೀಡಿ ಮಾತನಾಡಿದರು.
ಕ್ರೀಡೆಗಳು ಭಾವನೆಯನ್ನು ಹೆಣೆಯುವ ಶಕ್ತಿಯನ್ನು ಹೊಂದಿವೆ. ಕ್ರೀಡೆಗಳು ನೀಡುವ ಸಕಾರಾತ್ಮಕ ಪಾಠಗಳು ಹಾಗೂ ಮೌಲ್ಯಯುತವಾಗಿವೆ. ಕ್ರೀಡೆಗಳು ಪಾತ್ರ ಮತ್ತು ವೈಯಕ್ತಿಕ ಬೆಳವಣಿಗೆಯನ್ನು ರೂಪಿಸುವ ಅಗತ್ಯ ಜೀವನ ಕೌಶಲ್ಯಗಳನ್ನು ಕಲಿಸುತ್ತವೆ ಎಂದರು. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದು ವಿಶೇಷವಾಗಿ ಪ್ರಯೋಜನಕಾರಿಯಾಗಿದ್ದು, ಇದರಿಂದ ನಾಯಕತ್ವದ ಗುಣಗಳು, ದೈಹಿಕ ಸದೃಢತೆ ಮತ್ತು ಪರಿಶ್ರಮದ ಮನೋಭಾವವನ್ನು ಅಭಿವೃದ್ಧಿಪಡಿಸಲು ಸಾಧಿಸಲು ಸಾಧ್ಯ ಎಂದರು.
ಕ್ರೀಡೋತ್ಸವದ ಅಡಿಯಲ್ಲಿ ಥ್ರೋಬಾಲ್, ಬ್ಯಾಡ್ಮಿಂಟನ್, ಕೇರಂ ಹಾಗೂ ಚೆಸ್ ಸ್ಪರ್ಧೆಗಳನ್ನು ನಡೆಸಲಾಯಿತು. ಥ್ರೋಬಾಲ್ ಸ್ಪರ್ಧೆಯಲ್ಲಿ 16 ತಂಡಗಳು, ಬ್ಯಾಡ್ಮಿಂಟನ್-16 ಕೇರಂ – 26 ಹಾಗೂ ಚೆಸ್ – 5 ತಂಡಗಳು ಭಾಗವಹಿಸಿದ್ದವು.
ಕಾರ್ಯಕ್ರಮದ ಸ್ವಾಗತ ಭಾಷಣವನ್ನು ಅಸೋಸಿಯೆಟ್ ಪ್ರೋ.ಪಿಸಿಯಾಲಜಿ ವಿಭಾಗದ ಡಾ.ದೀಪಾ ಎಚ್.ಎಸ್. ಅವರು ಮಾಡಿದರು. ನಿವೃತ್ತ ವೈದ್ಯರು ಹಾಗೂ ಪ್ರಸೂತಿ ಮತ್ತು ಸ್ತ್ರೀ ರೋಗ ವಿಭಾಗದ ಮುಖ್ಯಸ್ಥರಾದ ಡಾ.ಪ್ರೇಮ ಪ್ರಭುದೇವ್, ಬಾಪೂಜಿ ವಿದ್ಯಾಸಂಸ್ಥೆಯ ಸದಸ್ಯರಾದ ಡಾ.ಸಂಪನ್ನ ಮುತಾಲಿಕ್ ಅವರು ಮಾತನಾಡಿದರು.
ಎಸ್.ಎಸ್.ಐ.ಎಂ.ಎಸ್.ಆರ್.ಸಿಯ ಉಪ ಪ್ರಾಂಶುಪಾಲರು ಹಾಗೂ ಪಾರ್ವತಿ 2025 ರ ಕೋರ್ ಕಮಿಟಿ ಮೆಂಬರ್ ಡಾ.ಶಶಿಕಲಾ.ಪಿ., ವೈಧ್ಯಕೀಯ ಅಧೀಕ್ಷಕರು ಹಾಗೂ ಉಪ ಪ್ರಾಂಶುಪಾಲರಾದ ಡಾ.ಅರುಣ್ ಕುಮಾರ್ ಅಜ್ಜಪ್ಪ, ಹಾಗೂ ಎಸ್.ಎಸ್.ಐ.ಎಂ.ಎಸ್.ಆರ್.ಸಿ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ನಿರೂಪಣೆಯನ್ನು ಎಸ್.ಎಸ್ ನರ್ಸಿಂಗ್ ವಿಭಾಗದ ಅಧ್ಯಾಪಕರಾದ ಅಂಬಿಕ ನೆರವೇರಿಸಿ ವಂದಿಸಿದರು.