Kannada News | Sanduru Stories | Dinamaana.com | 09-06-2024
ಹಸಿವು ಮನುಷ್ಯನನ್ನಷ್ಟೇ ಕೊಲ್ಲುವಂತಿದ್ದರೆ (Sanduru Stories)
ಹಸಿವು ಮನುಷ್ಯನನ್ನಷ್ಟೇ ಕೊಲ್ಲುವಂತಿದ್ದರೆ ಅವರು ಅಷ್ಟು ತಲೆಕೆಡಿಸಿಕೊಳ್ಳುತ್ತಿರಲಿಲ್ಲ. ಅವರಿಂದ ಮತ್ತೇನನ್ನೋ ಕಿತ್ತುಕೊಳ್ಳುತ್ತಿರುವ, ಅವರ ಜೊತೆ ನಿರಂತರ ಹೋರಾಟ ಮಾಡುತ್ತಿರುವವರ ಹಾಗೆ ಸಾಮಾನ್ಯ ಜನರು ಕಾಣುತ್ತಾರೆ.
ಅವಸಾನದ ಹಾದಿಯಲ್ಲಿ ಊರುಗಳು.. (Sanduru Stories)
ಏನೇ ಸುರಿದರೂ ಅದು ಕಣ್ಣೀರಿನಂತೆಯೇ ಕಾಣುತ್ತದೆ. ಅವಸಾನದ ಹಾದಿಗೆ ಬಂದು ನಿಂತ ಊರುಗಳಿಗೆ , ಊರ ದೇವರುಗಳಿಗೆ ಜಾತ್ರೆ, ಪರಿಷೆಯೆಂದು ಯಾಕೆ ಸುಣ್ಣಬಣ್ಣ ಬಳಿಯಬೇಕು ಎಂಬ ನಿರ್ಲಿಪ್ತ ಭಾವ.
ಕೆಲಕಾಲದ ಹಿಂದೆ , ಮಳೆ ಸುರಿಯುವಾಗ ನೀರು ಗಿಡ ಮರಗಳ ಬೇರುಗಳನ್ನೂ ಸ್ಪರ್ಶಿಸಿ, ಕಚಗುಳಿಯಿಟ್ಟು, ಮೈದಡವಿ ಕುಶಲ ವಿಚಾರಿಸುತ್ತ ಬರುತ್ತಿತ್ತು.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-23 ಒಂದಿನಾ…ಮಣ್ಣಾಕ ಹೋಗದು!
ಹರಿವ ನೀರು ಕೆಂಪಾಗಿ ಹರಿದು (Sanduru Stories)
ಈಗ ಬಿದ್ದ ಮಳೆ ಧುಮ್ಮಿಕ್ಕಿ ಹರಿದು ಬರುತಿದೆ. ಕೆಂಪು ಮಣ್ಣಿನ ಗಾಯಗೊಂಡ ಗುಡ್ಡಗಳ ಮೇಲಿಂದ ಹರಿವ ನೀರು ಕೆಂಪಾಗಿ ಹರಿದು ಬರುತಿದೆ.
ಅದಿರು
ಅಗೆದವರ
ಬೆವರು
ಆಗಿರಬಹುದೆ
ಹೀಗೆ ನೆತ್ತರು ?
ಪ್ರಶ್ನೆ ಎದೆಯಾಳದಲ್ಲಿ ಉಳಿದುಬಿಟ್ಟಿದೆ.
ಬಿ.ಶ್ರೀನಿವಾಸ