Kannada News | Sanduru Stories | Dinamaana.com | 06-06-2024
ಸುಮ್ಮನೆ ಕಣ್ಣು ಮುಚ್ಚಿ ಧ್ಯಾನಿಸುತ್ತೇನೆ (Sanduru Stories)
ಸುಮ್ಮನೆ ಕಣ್ಣು ಮುಚ್ಚಿ ಧ್ಯಾನಿಸುತ್ತೇನೆ . ಕಣ್ಣ ಮುಂದೆ ಯಾರೋ ಬಿಕ್ಕುತ್ತಿರುವಂತೆ ಭಾಸವಾಗುತ್ತಿದೆ.ಸೊಂಡೂರಿನ ಮನೆಗಳಿಂದ ಮುದುಕರು,ಮಕ್ಕಳಾದಿಯಾಗಿ ಮುಂಜಾನೆ ಎದ್ದ ಕೂಡಲೇ ಕೈ ಮುಗಿಯುತ್ತಿದ್ದ ಅದೇ ಬೆಟ್ಟಗಳು,ಈಗ ನಮ್ಮನ್ನು ಬದುಕಿಸಿರಪ್ಪೋ…ಎಂದು ಬೇಡುತ್ತಿರುವ ಹಾಗೆ ತೋರುತ್ತಿವೆ.
ನಾಚಿಕೆಯಿಂದ ಮೈ ಮುಚ್ಚಿಕೊಳ್ಳುತ್ತಿವೆ (Sanduru Stories)
ಹೌದು,ಬೆಟ್ಟ-ಗುಡ್ಡಗಳೆಂದೂ ಮಾತನಾಡುವುದಿಲ್ಲ ನಿಜ,ಆದರೆ ದುಃಖಿಸುತ್ತವೆ.ಅಕ್ರಮ ಗಣಿಗಾರಿಕೆಯಿಂದಾಗಿ ತೊನ್ನು ಹತ್ತಿದ ಮೈಯ್ಯನ್ನು ತೋರಲು ನಾಚಿಕೆಯಿಂದ ಮೈ ಮುಚ್ಚಿಕೊಳ್ಳಲಾಗದೆ ಒದ್ದಾಡುತ್ತಿರುವಂತೆ ತೋರುವ,ಗುಡ್ಡಗಳ ನೋವಿಗೆ ಕನಿಕರದ ನೋಟಗಳನ್ನು ಬಿಟ್ಟು ಬಡ ಜನರು ಮತ್ತಿನ್ನೇನು ತಾನೆ ಮಾಡಲು ಸಾಧ್ಯ ಹೇಳಿ?
ಹಳೆಯ ಕಾಲದ ನೆನಪುಗಳಿಗೆ ಜಾರಿದರೂ.. (Sanduru Stories)
ಹೀಗಿದ್ದರೂ ಮೊನ್ನೆ ದಿನ ಯಾವುದೋ ಅಡ್ಡಮಳೆಯೊಂದು ಸುರಿವ ಮುನ್ನ ಧೂಳೆಬ್ಬಿಸಿತಂತೆ.ಮಣ್ಣ ವಾಸನೆಗೆ ಒಂದರೆಕ್ಷಣ ಜನರೆಲ್ಲ ಹಳೆಯ ಕಾಲದ ನೆನಪುಗಳಿಗೆ ಜಾರಿದ್ದರೆಂದು ಗೆಳೆಯನೊಬ್ಬ ಹೇಳಿದ. ಮುಚ್ಚಿದ ಬಾಗಿಲುಗಳಿಂದ ಯಾವೊಬ್ಬ ಹುಡುಗನೂ ಹರಿವ ನೀರಲ್ಲಿ ಕಾಗದದ ದೋಣಿ ಬಿಡುತ್ತಿಲ್ಲ. ಬಾಗಿಲುಗಳಾಚೆಗೂ ಮೌನ ಆವರಿಸಿದೆ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-25 ಅವರು ಮೌನವಾಗಿ ಬಿಡುತ್ತಾರೆ!
ಜಾತ್ರೆಯ ಸಡಗರವೆಲ್ಲ ನೆನಪಾಗುತ್ತಿವೆ .. (Sanduru Stories)
ಒಳಗಿರುವ ಹಾಗೆ. ಸೊಂಡೂರಿನಲ್ಲಿ ಹೀಗೆ ಮಳೆ ಸುರಿಯುತ್ತಿರುವಾಗ, ಕುಣಿವ ಹುಡುಗರ ದಂಡು, ಮುಂಬರುವ ಬೆಳೆಯ ಕನಸಿನಲಿ ಅಪರೂಪಕ್ಕೊಮ್ಮೆಯಾದರೂ ನಗುತ್ತಿದ್ದ ಮುದುಕರು…., ಜಾತ್ರೆಯ ಸಡಗರವೆಲ್ಲ ನೆನಪಾಗುತ್ತಿದೆ. ಈಗ, ಒಂದೇ ಸಮನೆ ಸುರಿಯುತ್ತಿರುವ ಮಳೆ, ಎಲ್ಲರ ಎದೆಗಳಲ್ಲೂ ಸುರಿವ ಭಾವನೆಗಳ ಮಳೆಯಂತೆ ತೋರುತ್ತಿದೆ.
ಕಾಡು ಬೆಟ್ಟ ಸವೆದರೂ…
ಸುರಿಯುತ್ತಿರುವುದು ಮಳೆಯಲ್ಲವದು,
ಬಹುಶಃ ಯಾರೋ ರೋದಿಸುತ್ತಿರಬೇಕು!
ಬೇಡ ಬೇಡವೆಂದರೂ ಸೊಂಡೂರು ಎದೆಯೊಳಗೆ ಇಳಿಯುತ್ತಲೇ ಇದೆ.
ಬಿ.ಶ್ರೀನಿವಾಸ