Kannada News | Dinamaana.com | 23-05-2024
2007-08 ರಿಂದ 2009-10ರ ಅವಧಿಯಲ್ಲಿ ಬಳ್ಳಾರಿ ಜಿಲ್ಲೆಯ ವಾಯುಮಾಲಿನ್ಯವು ತನ್ನ ಹಿಂದಿನ ದಾಖಲೆಗಳನ್ನು ಎಲ್ಲಾ ಮುರಿದು ಅತಿ ಹೆಚ್ಚು ಮಾಲಿನ್ಯಕಾರಕ ಪ್ರದೇಶ ಎಂಬ ಹಣೆಪಟ್ಟಿ ಅಂಟಿಕೊಂಡಿತು.
ಬಳ್ಳಾರಿ ವಲಯದ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಲಿಯವರೇ ಬಿಡುಗಡೆಗೊಳಿಸಿದ ಅಂಕಿ-ಅಂಶಗಳನ್ನೊಮ್ಮೆ ಗಮನಿಸಿದರೆ ಹಸುಗೂಸುಗಳಿಂದ ಹಿಡಿದು ಮುದುಕರವರೆಗೂ ಎಂತಹ ಧೂಳನ್ನು ಉಸಿರಾಡಿದ್ದೇವಲ್ಲ ಎಂದು ಗಾಬರಿಯಾಗುತ್ತದೆ.ಇಷ್ಟು ಬೃಹತ್ ಪ್ರಮಾಣದ ಗಣಿಗಾರಿಕೆಯ ಧೂಳಿನಿಂದಾಗಿ ಜನರು ಉಸಿರಾಟದ ತೊಂದರೆಗೀಡಾದರು.
ಟೀಬಿಯಂತೂ ಸರ್ವೇ ಸಾಮಾನ್ಯವಾದ ಕಾಯಿಲೆಯಾಗಿ ಹೋಯ್ತು. ಜಿಲ್ಲೆಯ ಹೊಸಪೇಟೆ ಮತ್ತು ಸೊಂಡೂರು ತಾಲೂಕುಗಳ ವ್ಯಾಪ್ತಿಯಲ್ಲಿ ಉಸಿರಾಟ ಸಂಬಂಧಿತ ಕಾಯಿಲೆ ಹಾಗೂ ಟೀಬಿಗೆ ತುತ್ತಾದವರ ಸಂಖ್ಯೆಯೂ ಆತಂಕ ಉಂಟುಮಾಡುತ್ತದೆ.
Read Also: ಸೊಂಡೂರಿನ ಕಗ್ಗತ್ತಲೆಯ ಕಥನಗಳು-28 ಸೊಂಡೂರು ಎಂಬ ಒಂದು ಕಾಲದ ಸುಂದರಪುರ
ಅಂಕಿಅಂಶ ಕೃಪೆ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ,ಬಳ್ಳಾರಿ ಇವುಗಳಾವುವೂ ಆಡಳಿತ ವ್ಯವಸ್ಥೆಗೆ ತಿಳಿದಿಲ್ಲ ಎಂತಲ್ಲ.ಎಲ್ಲ ಗೊತ್ತಿದ್ದೂ ಡಾಕ್ಟರುಗಳು ಅಸಹಾಯಕರಾದರು.ಆಡಳಿತಶಾಹಿಯ ಮುಂದೆ ಮಂಡಿಯೂರಿದರು. ಪರಿಣಾಮ ಮಾತ್ರ ಹಲವು ಜನ ಕೆಮ್ಮಿ,ಕೆಮ್ಮಿಯೇ ಕಮ್ಮಿಯಾದರು.
ವಾಯುದೇವ ಹನುಮಂತನ ಜನುಮಸ್ಥಳದ ಕುರಿತು ತಲೆಕೆಡಿಸಿಕೊಂಡ ಸರ್ಕಾರ,ಆಡಳಿಗಾರರ ಕಣ್ಣಿಗೆ, ರಸ್ತೆಯ ಮೇಲಿನ ಕೆಂಪು ಬಣ್ಣ ಧೂಳಿನದೋ… ಕೆಮ್ಮಿದವನ ರಕ್ತದ್ದೋ…. ಒಂದು ತಿಳಿಯದ ಲೋಕವೊಂದು ಸೃಷ್ಠಿಯಾಗಿ ಹೋಯಿತು.
ಬಿ.ಶ್ರೀನಿವಾಸ