Kannada News | Dinamaana.com | 25-05-2024
ಮುಕ್ತಿ ಯಾವಾಗ? ಎಂದು ಯಾರನ್ನಾದರೂ ನೀವು ಕೇಳಿ ನೋಡಿ. ಅವರು ಎರಡೂ ಕೈಗಳನ್ನೆತ್ತಿ ಆಕಾಶದ ಕಡೆಗೆ ಕೈ ತೋರಿಸುವರು.
ಕನಸುಗಳೇ ಬತ್ತಿಹೋದ ಮೇಲೆ ಬದುಕಿನ ಕುರಿತು ಆಸಕ್ತಿ ಉಳಿಯುವುದಾದರೂ ಏನು? ಪ್ರತಿಯೊಬ್ಬರ ಮೊಗದಲ್ಲೂ ಗಾಢ ವಿಷಾದವೊಂದು ಹೆಪ್ಪುಗಟ್ಟಿದೆ.
ಮರಗಿಡಗಳಿಲ್ಲದೆ ಬೋಳಾದ ಗುಡ್ಡಗಳಲ್ಲಿ ಬಡಕಲು ದನಕರುಗಳು ಸುತ್ತಾಡುತ್ತಿವೆ. ಬತ್ತಿಹೋದ ಮೊಲೆ ಚೀಪುವ ಮಗು ಹಾಲಿಲ್ಲದೆ ಅಳುತ್ತಿದೆ. ಆಕೆ ನಗುನಗುತ್ತಲೇ ಮಾತನಾಡುತ್ತಿದ್ದಾಳೆ.
Read also : ಸೊಂಡೂರಿನ ಕಗ್ಗತ್ತಲೆಯ ಕಥನಗಳು-26 ಸಾಲಿ ಬಿಟ್ಟ ಮಕ್ಕಳು….
“ಮಗು ಅಳುತತಲ್ಲ?” ಎಂದು ಯಾರಾದರೂ ಕೇಳಿದರೆ, ” ಹಸಿವಾಗೈತಲ್ಲಣ…ಅದಕೆ” “…ಮತ್ತೆ ಅದಕ್ಕೇನರ ಹೊಟ್ಟಿಗೆ ಕೊಡು” “ಮತ್ತೇನಕೆ ಬುಡಣ,ಈ ಮಗೀನ ನೋಡಿದರೆ ಬದುಕ್ತೈತಾ?..ಭಾಳ ಅಂದ್ರೆಗಿನ್ನ ನಾಳೆ…ತಪ್ಪಿದ್ರಪಾ ಅಂದ್ರೆ ನಾಡದು ಅಂತೂ ಗ್ಯಾರಂಟಿ ಸುಮ್ಮನಾಗಿ ಸಾಯ್ತೈತೆ!” ಮಗುವಿನೆಡೆಗೆ ನೋಡುತ್ತಾ ಅವಳು ನಿರ್ಭಾವುಕಳಾಗಿ ನುಡಿದಳು!.
ಅವಳ ಭಾವನಿರಪೇಕ್ಷ ಕ್ರಿಯೆಯಾಗಿ, ಆಧುನಿಕತೆ, ಅಭಿವೃದ್ಧಿ ಎಂಬ ಬಯಲಿನಲ್ಲಿ ಕೊನೆಯದಾಗಿ ಆಕೆ ಬಿಟ್ಟ ಬಾಣ ನಮ್ಮೆದೆಯನ್ನು ಸೀಳುತಿದೆ.
ಬಿ.ಶ್ರೀನಿವಾಸ