Kannada News | Sanduru Stories | Dinamaana.com | 10-06-2024
ಸಿಟ್ಟು ಮೌನಕ್ಕೆ (Sanduru Stories)
ಹೌದು, ಯಾವ ದಾರಿಗಳೂ ಸುಗಮವಾಗಿಲ್ಲ.ಸಂಡೂರಿನ ಘಟನೆಗಳು ಮನುಷ್ಯನನ್ನು ಮತ್ತಷ್ಟು ಕಲಕಬೇಕು. ಕಲಕಿದಷ್ಟೂ ಮತ್ತಷ್ಟು ಮಾನವೀಯಗೊಳ್ಳಬೇಕು. ಪ್ರತಿ ಘಟನೆಗಳ ವಿವರಗಳನ್ನು ಕೇಳಿದಾಗಲೂ ಉಂಟಾಗುವ ಅಗಾಧವಾದ ಸಿಟ್ಟು ಮೌನಕ್ಕೆ ತಿರುಗುತ್ತದೆ.
ಕೊಲೆಗಡುಕನ ಪಟ್ಟಕ್ಕೇರಿ ಕುಳಿತರೂ ಆಶ್ಚರ್ಯವಿಲ್ಲ (Sanduru Stories)
ನಮ್ಮೊಳಗಿನ ಮೌನ ಕೂಡ ಕೊಲೆಗಡುಕನ ಪಟ್ಟಕ್ಕೇರಿ ಕುಳಿತರೂ ಆಶ್ಚರ್ಯವಿಲ್ಲ. ಇಂತಹ ದಾರುಣ ಕಥೆಗಳನ್ನು ಗರ್ಭದಲ್ಲಿಟ್ಟುಕೊಂಡ ಬೆಟ್ಟಗಳಿಂದು ಗಾಯಗೊಂಡಿವೆ.ಮೇಲ್ನೋಟದಲ್ಲಿ ಅಷ್ಟೇ ಅಲ್ಲದೆ ಒಳಗೂ ಗಾಯಗೊಂಡವರ ಹಾಗೆ ಕಾಣಿಸುತ್ತವೆ.
Read also :ಸೊಂಡೂರಿನ ಕಗ್ಗತ್ತಲೆಯ ಕಥನಗಳು-22 ಎಲ್ಲಿ ಹೋದರೋ…
ಸತ್ತರೂ ಹೂಳಲು ಜಾಗವಿರಲಿ (Sanduru Stories)
ದುಡಿದು ದುಡಿದೂ ಗಣಿಧಣಿಗಳ ಶ್ರೀಮಂತಿಕೆ ಹೆಚ್ಚಿಸಲು ಹಗಲೂ ರಾತ್ರಿ ದುಡಿದವರು, ನಾಳೆ ಸತ್ತರೂ ಹೂಳಲು ಜಾಗವಿರಲಿಯೆಂದು ಆತ ….
ಎರಡು ಗುದ್ದುಗಳನ್ನು
ತೋಡಿ ಇಡಲಾಗಿದೆ.
ತನಗೊಂದು
ತನ್ನಕೆಗೊಂದು
ಇರಲಿಯೆಂದು!
ಕೈಯ್ಯೊಳಗಿನ ಕೆಲಸವನ್ನು ಕಸಿದುಕೊಂಡು, ಬರಿಗೈದಾಸರನ್ನಾಗಿಸಿ ಬೀದಿಗೆ ಬಿಟ್ಟ ಧಣಿಗಳಿಗೆ ಕನಿಕರವಿಲ್ಲ. ಅಸಲಿಗೆ ಹಚ್ಚ ಹಸಿರಾಗಿರುತ್ತಿದ್ದ ಹುಲ್ಲು ಮೇಯ್ದು, ದಾರಿಯಲಿ ಬರೆವಾಗ ಯಾರು ಕರೆದರೂ ಹಾಲು ಕೊಡುತ್ತೀದ್ದ ಹಸುಗಳು. ಹಸಿವಿನಿಂದ ಕಂಗೊಟ್ಟು ಆತ ಅತ್ತಿತ್ತ ನೋಡುತ್ತಿದ್ದಾನೆ.
ಆ ಬೋಳು ಗುಡ್ಡಗಳ ದಾರೀಯಲಿ
ಸತ್ತುಬಿದ್ದ ಎಳೆಗರು
ಮೂಸಿ ನೋಡಿ
ಗೋಳಿಡುವ ಹಸು
ಸಂತೈಸುವವರಿಲ್ಲ.
ಬಿ.ಶ್ರೀನಿವಾಸ