ಹರಿಹರ (Harihara): ವಕ್ಫ್ ತಿದ್ದುಪಡಿ ಮಸೂದೆ-2024 ನ್ನು ಹಿಂಪಡೆಯಬೇಕು, ಎಸ್‍ಡಿಪಿಐ ರಾಷ್ಟ್ರೀಯ ಅಧ್ಯಕ್ಷ ಎಮ್. ಕೆ. ಫೈಝಿ ರವರ ಬಿಡುಗಡೆಗೆ ಒತ್ತಾಯಿಸಿ ಹರಿಹರದ ವಿವಿಧ ಈದ್ಗಾಗಳಲ್ಲಿ ರಂಜಾನ್ ಈದ್ ಸಂದರ್ಭದಲ್ಲಿ ಬಿತ್ತಿ ಪತ್ರ ಪ್ರದರ್ಶನ ಮತ್ತು ಕರಪತ್ರಗಳನ್ನು ವಿತರಿಸಲಾಯಿತು.
ಬಿಜೆಪಿ ನೇತೃತ್ವ ಎನ್‍ಡಿಎ ಒಕ್ಕೂಟ ಸರ್ಕಾರ ಪ್ರಾರಂಭದಿಂದಲೇ ಮುಸ್ಲಿಂ ವಿರೋಧಿ ನೀತಿ ಕಾರ್ಯತಂತ್ರವನ್ನಾಗಿಸಿದೆ. ತನ್ನ ಸರ್ಕಾರದ ಶೋಚನೀಯ ವೈಫಲ್ಯಗಳನ್ನು ಮರೆಮಾಚಲು ಇನ್ನಿಲ್ಲದ ಹತಾಶ ಪ್ರಯತ್ನ ನಡೆಸುತ್ತಿದೆ.
ವಕ್ಫ್ ತಿದ್ದುಪಡಿ ಮಸೂದೆಯು ದೇಶದ ವಕ್ಫ್ ಆಸ್ತಿಗಳನ್ನು ಕಬಳಿಸುವ ಉದ್ದೇಶವನ್ನು ಹೊಂದಿದೆ. ರಾಜಕೀಯ ಪಕ್ಷಗಳು ಪರಸ್ಪರ ಅಭಿಪ್ರಾಯ ಭೇದಗಳನ್ನು ಮರೆತು ಒಂದಾಗಿ ವಕ್ಫ್ ಕಬಳಿಕೆ ಮಸೂದೆ ಮತ್ತು ತನಿಖಾ ಏಜೆನ್ಸಿ ಗಳ ಹಾಗೂ ಕರಾಳ ಕಾನೂನುಗಳ ದುರುಪಯೋಗವನ್ನು ಒಗ್ಗಟ್ಟಿನಿಂದ ವಿರೋಧಿಸಬೇಕಾಗಿದೆ. ದೇಶದ ಸಂವಿಧಾನ ಪ್ರಜಾಪ್ರಭುತ್ವ ಬಲಪಡಿಸಬೇಕಾಗಿದೆ ಎಂದು ಆಗ್ರಹಿಸಲಾಯಿತು.
ಹರಿಹರದ ಗಂಗಾನಗರ ಈದ್ಗಾದಲ್ಲಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಸಮಿವುಲ್ಲ ಮುಲ್ಲಾ, ಕಾರ್ಯದರ್ಶಿ ಸಮೀವುಲ್ಲ ಮುಜಾವರ್, ರಾಜ್ಯ ಸಮಿತಿ ಸದಸ್ಯ ಫಯಾಜ್ ಅಹಮದ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಆರ್ ತಾಹೀರ್, ಕಾರ್ಯಕರ್ತರು ಹಾಗೂ ಬೆಂಬಲಿಗರು ಉಪಸ್ಥಿತರಿದ್ದರು.
Read also : crime news | ಒಂಟಿ ಮಹಿಳೆಯರೇ ಟಾರ್ಗೇಟ್ : ಗ್ಯಾಂಗ್ ಅಂದರ್
ಭೀಮ್ ನಗರ ಮತ್ತು ಮಲೆಬೆನ್ನೂರು ಪಕ್ಷದ ನಾಯಕರು ಮತ್ತು ಕಾರ್ಯಕರ್ತರು ಬಿತ್ತಿ ಪತ್ರ ಪ್ರದರ್ಶನ ಹಾಗೂ ಕರಪತ್ರ ವಿತರಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.