ದಾವಣಗೆರೆ, ಸೆ.4 (Davanagere) ಶಿಶುಕ್ಷ ತರಬೇತಿ ಸಂಸ್ಥೆ, ಚೆನ್ನೈ (ದಕ್ಷಿಣ ವಲಯ) ಮತ್ತು ತಾಂತ್ರಿಕ ಶಿಕ್ಷಣ ಇಲಾಖೆ, ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ವಿವೇಕಾನಂದ ಬಡಾವಣೆಯಲ್ಲಿರುವ ಬಾಪೂಜಿ ಪಾಲಿಟೆಕ್ನಿಕ್ನಲ್ಲಿ ಸೆ.12 ರ ಬೆಳಗ್ಗೆ 9.30ಕ್ಕೆ ನೇರ ಸಂದರ್ಶನದಲ್ಲಿ ಅಪ್ರೆಂಟಿಶಿಪ್ ಮೇಳ ಹಾಗೂ ಉದ್ಯೋಗ ಮೇಳ ಏರ್ಪಡಿಸಲಾಗಿದೆ.
ಸರ್ಕಾರಿ ಕಂಪನಿಗಳು ಮತ್ತು ಬಹು ರಾಷ್ಟ್ರೀಯ ಕಂಪನಿಗಳು ಈ ಮೇಳದಲ್ಲಿ ಭಾಗವಹಿಸಿ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ 2020 2021,2022,2023 ಮತ್ತು 2024 ಸಾಲಿನಲ್ಲಿ ತೇರ್ಗಡೆ ಹೊಂದಿದ ಯಾವುದೇ ವಿಭಾಗದ (ಟೆಕ್ನಿಕಲ್ ಅಂಡ್ ನಾನ್ ಟೆಕ್ನಿಕಲ್) ಇಂಜಿನಿಯರಿಂಗ್ ಮತ್ತು ಡಿಪ್ಲೋಮಾ ಅಭ್ಯರ್ಥಿಗಳು ಹಾಗೂ ಬಿಎ, ಬಿ.ಎಸ್ಸಿ ಬಿಕಾಂ,ಬಿಬಿಎ ಮತ್ತು ಬಿ ಸಿ ಎ ಪದವಿ ಪಡೆದ ಅಭ್ಯರ್ಥಿಗಳು ಈ ಮೇಳದಲ್ಲಿ ಭಾಗವಹಿಸಬಹುದು.
Read also : Davanagere news | ಆರೋಗ್ಯಕ್ಕಾಗಿ ತಂಬಾಕು ತ್ಯಜಿಸಿ : ಕವಿತಾ ಮಾರುತಿ ಬೇಡರ್
ಅಭ್ಯರ್ಥಿಗಳು ಬಯೋಡೇಟಾ ಮೂರು ಸೆಟ್ಗಳು ತರಬೇಕು. ಹೆಚ್ಚಿನ ಮಾಹಿತಿಗಾಗಿ ವೆಬೈಟ್: www.boat-srp.com-Home page -News & Events section.. ವೀಕ್ಷಿಸಬಹುದು.
ಹಾಗೂ ದೂ.ಸಂ: 9945251906 , 9916013954 ಸಂಪರ್ಕಿಸಬಹುದು. NATS Portal (https://nats.education.gov.in & Google Form Link: (https://forms.gle/