ದಾವಣಗೆರೆ (Davangere district ) : ತತ್ವ – ಸತ್ವ ಮಹತ್ವಗಳ ಸಂಗಮವೇ ವಚನ ಶಾಸ್ತ್ರ ಸಾರ ಎಂದು ಭೋವಿ ಗುರುಪೀಠದ ಜಗದ್ಗುರುಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ (Shri Immadi Siddarameshwar Swamiji) ಹೇಳಿದರು.
ಆ 5 ರಂದು ಜರುಗಲಿರುವ ಸಿದ್ದರಾಮೇಶ್ವರ ದೇವರ ೬೨ನೇ ರಥೋತ್ಸವ ನಿಮಿತ್ತ ವಚನಾಭಿಷೇಕ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದರು.
ವಚನಗಳು ಪಚನವಾದರೆ ಮಾನವ ಕುಲಕೋಟಿಗಳು ಉದ್ದರಿಸುತ್ತವೆ. ವಚನಗಳ ನಿದರ್ಶನಗಳು ನಮಗೆ ದರ್ಶನವಾದರೆ ಮಾನವ ಮಹದೇವನಾಗುತ್ತಾನೆ. ವಚನಗಳ ಮನನ ಮತ್ತು ಸ್ಮರಣ ಪಥದಲ್ಲಿ ಮಾನವ ಸದ್ಗುಣವಂತನಾಗಲು ಸಾಧ್ಯವಿದೆ ಎಂದರು.
ಭಗವಂತನ ಸ್ಮರಣೆಯಿಂದ ಪುಳಕ ರೋಮಾಂಚನವಾಗುತ್ತದೆ. ಭಗವಂತನ ಮಾಟದ ನೋಟದಲ್ಲಿ ಮನಸ್ಸು ಮರೆಯಬೇಕು. ಭಗವಂತನ ನಾಮಸ್ಮರಣೆ ಝಳಕು ಬೆಳಕಾಗಿ ತುಳುಕಬೇಕು. ಸದ್ಗುಣ ನಮ್ಮ ಮನಸ್ಸಿನಲ್ಲಿ ಬೆಳಗಬೇಕು. ವಚನಗಳಿಂದ ಮನುಷ್ಯನ ಅಂತರAಗದ ಕಣ್ಣನ್ನು ತೆರೆಯಲ್ಪಡುತ್ತದೆ. ಮುಖದಲ್ಲಿ ಶಾಂತಿ ಕಣ್ಣಿನಲ್ಲಿ ಕಾಂತಿ ಬದುಕಿನಲ್ಲಿ ಸಾತ್ವಿಕದ ಕ್ರಾಂತಿ ನಡೆಯಬೇಕು ಎಂದು ನುಡಿದರು.
Read also : DAVANAGERE : ವೀರಶೈವ ಲಿಂಗಾಯತ : ವಿವಿಧ ಯೋಜನೆಯ ಸಾಲ ಸೌಲಭ್ಯ ಅರ್ಜಿ ಆಹ್ವಾನ
ವಚನಗಳ ಕಂಪು ನಮ್ಮ ಬದುಕಿನ ತಂಪು, ವಚನಗಳ ಇಂಪು ನಮ್ಮ ಬದುಕು ಸೋಂಪು, ನಮ್ಮ ಬದುಕಿನಲ್ಲಿ ವಚನಗಳ ಗಾಳಿ ಗಂಧ ಪರಿಮಳವು ಹರಡಿಕೊಳ್ಳಬೇಕು. ವಚನಗಳಲ್ಲಿರುವ ಮಹಾದಾಶಯಗಳು ಬದುಕಿನಲ್ಲಿ ಅಳವಡಿಸಿಕೊಂಡರೆ ಮಹಾಮಾನವನಾಗುತ್ತಾನೆ. ವಾಸ್ತವದಲ್ಲಿ ಮನುಷ್ಯನಿಗೆ ಸಮಯ, ವ್ಯವಧಾನ, ಸಹನೆ ಇಲ್ಲದಂತಾಗಿದೆ ಮೌಲ್ಯಗಳನ್ನು ಕಳೆದುಕೊಂಡು ನೀತಿ ಭ್ರಷ್ಟವಾಗಿರುವ ಆಧುನಿಕ ಸಮಾಜದ ಶುದ್ಧೀಕರಣಕ್ಕೆ ಇರುವ ಒಂದೇ ದಾರಿ ವಚನ ಶಾಸ್ತ್ರ ಸಾರ ಕೊಟ್ಟಿರುವ ಬಸವ ಮಾರ್ಗವೆಂದು ತಿಳಿಸಿದರು.
ಉತ್ಸವ ಸಮಿತಿ ಹಾಗೂ ಪೀಠದ ಧರ್ಮದರ್ಶಿ ಹೆಚ್ ಮಂಜುನಾಥ್, ಜಯಣ್ಣ. ಎಚ್, ಗೋಪಾಲ್ ವಿ, ನಾಗರಾಜ್ ಎ ಬಿ, ವಿನಾಯಕ್. ಬಿ.ಎನ್, ವೆಂಕಟೇಶ್, ಚಟ್ನಹಳ್ಳಿ ವಿ ರಾಜಣ್ಣ, ಹೆಚ್ ಎಸ್ ಗಣೇಶ, ಬಸವರಾಜ್ ಹೆಚ್, ದಶರಥ ವೈ, ಪಿ ರವಿಕುಮಾರ, ಹೆಚ್ ಡಿ ವಿಜಯ, ತರಕಾರಿ ಮೂರ್ತ್ಯಪ್ಪ, ಜಿ ಸಿ ಮಂಜಪ್ಪ ಹಾಗೂ ಇತರರು ಇದ್ದರು.